ರಾಜ್ಯ

ಬೆಂಗಳೂರು: ಬೆಳ್ಳಂದೂರು ಕೆರೆ ಬೆಂಕಿಯ ಕಾರಣ ಪತ್ತೆಹಚ್ಚಲು ಮುಂದಾದ ಐಐಎಸ್ಸಿ ವಿಜ್ಞಾನಿಗಳು

ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿಯ ಮೂಲವನ್ನು ಪತ್ತೆ ಹಚ್ಚಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸೋಮವಾರದಿಂಡ ಸಂಶೋಧನೆ ಪ್ರಾರಂಭಿಸಲಿದೆ..

ಬೆಂಗಳೂರು: ಬೆಳ್ಳಂದೂರು ಕೆರೆ ಬೆಂಕಿಯ ಕಾರಣ ಪತ್ತೆಹಚ್ಚಲು ಮುಂದಾದ ಐಐಎಸ್ಸಿ ವಿಜ್ಞಾನಿಗಳು
ಬೆಂಗಳೂರು: ಬೆಳ್ಳಂದೂರು ಕೆರೆ ಬೆಂಕಿಯ ಕಾರಣ ಪತ್ತೆಹಚ್ಚಲು ಮುಂದಾದ ಐಐಎಸ್ಸಿ ವಿಜ್ಞಾನಿಗಳು
Published On :
ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿಯ ಮೂಲವನ್ನು ಪತ್ತೆ ಹಚ್ಚಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸೋಮವಾರದಿಂಡ ಸಂಶೋಧನೆ ಪ್ರಾರಂಭಿಸಲಿದೆ..
ಕೆರೆ ನೀರಿನ ಆಳದಲ್ಲಿರಬಹುದಾದ ರಾಸಾಯನಿಕಗಳಿಂದ ಬೆಂಕಿ ಹಾಗೂ ಹೊಗೆ ಉತ್ಪತ್ತಿಯಾಗುತ್ತಿದೆ ಎಂಡು ವಿಜ್ಞಾನಿಗಳು ಹೇಳುತ್ತಿರುವಾಗಲೇ ಇನ್ನೊಂದೆಡೆ ಬೀಡಿ, ಸಿಗರೇಟ್ಗಳನ್ನು ಹಚ್ಚಿ ಎಸೆಯುವ ಮೂಲಕವೋ, ಇಲ್ಲವೇ ಕಿಡಿಗೇಡಿಗಳ ಕೃತ್ಯದಿಂಡಲೋ ಈ ರೀತಿಯ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಇನ್ನೊಂದು ಗುಂಪಿನ ವಾದವಾಗಿದೆ.
ಈಗ, ಐಐಎಸ್ಸಿ ಮತ್ತು ಲಂಡನ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡದ ದ ವಿಜ್ಞಾನಿಗಳು ಬೆಳ್ಳಂದೂರು ಕೆರೆಯಲ್ಲಿನ ಬೆಂಕಿಯ ನಿಗೂಢ ರಹಸ್ಯವನ್ನು ಬೇಧಿಸಲು ಮುಂದಾಗಿದ್ದು ಅವರು  ನೀರಿನಲ್ಲಿರಬಹುದಾದ ಜೈವಿಕ ಮತ್ತು ರಾಸಾಯನಿಕ ಮಾಲಿನ್ಯಕಾರಕಗಳನ್ನು ಪತ್ತೆ ಹಚ್ಚಲಿದ್ದಾರೆ. ನೀರಿನಲ್ಲಿ ಜೈವಿಕ ಮತ್ತು ರಾಸಾಯನಿಕ ಪದಾರ್ಥಗಳ ಮಟ್ಟವನ್ನು ಅಳೆಯಬಲ್ಲ ಆಪ್ಟಿಕಲ್ ಫೈಬರ್ ಸಾಧನವನ್ನು ಬಳಸಿ ಸಂಶೋಧಕರು ಕೆರೆಯನ್ನು ಪರಿಶೀಲಿಸಲಿದ್ದಾರೆ.  ಈ ಸಾಧನವು ನ್ಯಾನೊ ತಂತ್ರಜ್ಞಾನವನ್ನು ಒಳಗೊಂಡಿದೆ.
ಸಂವೇದಿ ಸಾಧನವಾಗಿ ಆಪ್ಟಿಕಲ್ ಫೈಬರ್ ಗಳ ಬಳಕೆ ತೀರಾ ಇತ್ತೀಚಿನ ಸಂಶೋಧನೆಯಾಗಿದೆ, ಐಐಎಸ್ಸಿ ಸಂಶೋಧಕರ ತಂಡವು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು  ಐಐಎಸ್ಸಿ ಇನ್ಸ್ಟ್ರುಮೆಂಟೇಷನ್ ಅಂಡ್ ಅಪ್ಲೈಡ್ ಫಿಸಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಎಸ್ ಅಶೋಕನ್ ಹೇಳಿದ್ದಾರೆ. "ನಾವು ಕಾರ್ಬನ್ ನ್ಯಾನೊ ವ್ಟ್ಯೂಬ್ಗಳು ಮತ್ತು ಗ್ರ್ಯಾಫೀನ್ ಆಕ್ಸೈಡ್   ಗಳಂತಹಾ ವಸ್ತುಗಳನ್ನು ಬಳಸಿ ಮಾಲಿನ್ಯ ಪ್ರಮಾಣ ಪತ್ತೆಹಚ್ಚಬಲ್ಲ ಸಂಶೋಧನೆ ನಡೆಸುತ್ತೇವೆ." ಪ್ರೊ. ಅಶೋಕನ್ ಹೇಳಿದ್ದಾರೆ.
ಲಂಡನ್ನಿನ ತಂಡ ಐಐಎಸ್ಸಿ ತಂಡಕ್ಕೆ ಹಲವು ವಿಧಗಳಲ್ಲಿ ಸಹಕರಿಸುತ್ತದೆ. ಐಐಎಸ್ಸಿ ತಂಡವು ಆಪ್ಟಿಕಲ್ ಫೈಬರ್ಗಳ ಅಭಿವೃದ್ಧಿಯಲ್ಲಿ ಉತ್ತಮವಾಗಿ ಪರಿಣತಿಯನ್ನು ಪಡೆದಿರುವುದರಿಂದ ಈ ಸಂಶೋಧನೆಯಲ್ಲಿ ನಾವು ಯಶ ಕಾಣಲಿದ್ದೇವೆ ಎಂದು ಅಶೋಕನ್ ಹಾಗೂ ಇತರೆ ಸಂಶೋಧಕರು ವಿಶ್ವಾಸ ಹೊಂದಿದ್ದಾರೆ. ಬೆಳ್ಳಂದೂರು ಕೆಲ್ರೆಯಲ್ಲಿ ಕಳೆದ ಹಲವು ತಿಂಗಳಿನಿಂದ ಸಾಕಷ್ಟು ಬಾರಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು ಇದು ಸುತ್ತಮುತ್ತಲ ನಿವಾಸಿಗಳಿಗೆ ಆತಂಕಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.