ರಾಜಕಾಲುವೆ ದುರಸ್ಥಿ, ನಿರ್ವಹಣೆ ಸಂಬಂಧ ವರದಿ ಸಲ್ಲಿಕೆಗೆ ಬಿಬಿಎಂಪಿ ಹೈಕೋರ್ಟಿಗೆ ಸೂಚನೆ
ಬೆಂಗಳೂರು ಮಹಾನಗರದಲ್ಲಿನ ಒಳಚರಂಡಿ ದುರಸ್ಥಿ, ನಿರ್ವಹಣೆಗೆ ಸಂಬಂಧಿಸಿದಂತೆ ಪರಿಷ್ಕೃತ ವರದಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.

ಬೆಂಗಳೂರು:ಬೆಂಗಳೂರು ಮಹಾನಗರದಲ್ಲಿನ ರಾಜಕಾಲುವೆ ದುರಸ್ಥಿ, ನಿರ್ವಹಣೆಗೆ ಸಂಬಂಧಿಸಿದಂತೆ ಪರಿಷ್ಕೃತ ವರದಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.
ಕಳೆದ ಮೂರು ವರ್ಷಗಳಲ್ಲಿ ಕೇವಲ 177 ಕಿಲೋ ಮೀಟರ್ ದೂರದ ರಾಜಕಾಲುವೆ
ವ್ಯವಸ್ಥೆಯನ್ನು ಮಾತ್ರ ದುರಸ್ಥಿ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್, ಸುನೀಲ್ ದತ್ತ್ ಯಾದವ್ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನು ಪ್ರಕಾರ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸುವಂತೆ ಬಿಬಿಎಂಪಿಗೆ ಸೂಚಿಸಿದೆ.
ಬೆಂಗಳೂರು ಮಹಾನಗರದಲ್ಲಿನ ರಾಜಕಾಲುವೆ ವ್ಯವಸ್ಥೆ ಕುರಿತಂತೆ ನಾಗರಿಕ ಕ್ರಿಯಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಹೀಗೆ ಸೂಚನೆ ನೀಡಿದೆ.
ನಗರದಲ್ಲಿ ಒಟ್ಟಾರೇ,842 ಕಿಲೋ ಮೀಟರ್ ದೂರ ರಾಜಕಾಲುವೆ ವ್ಯವಸ್ಥೆ ಇದ್ದು, 1,367 ಕೋಟಿ ರೂ ವೆಚ್ಚದಲ್ಲಿ 177 ಕಿಲೋ ಮೀಟರ್ ದೂರದ ವ್ಯವಸ್ಥೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನೂ 192 ಕಿಲೋ ಮೀಟರ್ ದೂರದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಹೈಕೋರ್ಟಿಗೆ ಮಾಹಿತಿ ನೀಡಿದೆ.
ಸುಮಾರು 155 ಕಿಲೋ ಮೀಟರ್ ದೂರದ ರಾಜಕಾಲುವೆ ಲಿ ನಿರ್ವಹಣಾ ಕಾಮಗಾರಿ ಪ್ರಗತಿಯಲಿದೆ. ಇನ್ನೂ 239 ಕಿಲೋ ಮೀಟರ್ ದೂರದ ನಿರ್ವಹಣೆಗಾಗಿ 42. 70 ಕೋಟಿ ರೂ. ಸಲ್ಲಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


