ರಾಜ್ಯ

ತ್ಯಾಗಮೂರ್ತಿಯ ಮಹಾಮಜ್ಜನಕ್ಕೂ ಮುನ್ನ ದೇಹ ತ್ಯಾಗ ಮಾಡಿದ ಜೈನಮುನಿ

ತ್ಯಾಗಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕಕ್ಕೂ ಮುನ್ನವೇ ಶ್ರವಣಬೆಳಗೊಳದಲ್ಲಿ ಜೈನ ಧರ್ಮೀಯತ ಅತ್ಯಂತ ಪವಿತ್ರ ಮತ್ತು ಕಠಿಣ ವ್ರತದ ಸಾರ್ವಜನಿಕ ದರ್ಶನ ನಡೆದಿದ್ದು, ಜೈನಮುನಿ ಶ್ರೀ 108 ಶ್ರೇಯಸಾಗರ ಮಹಾರಾಜರು (74) ಸಲ್ಲೇಖನ ಪೂರಕ ಸಮಾಧಿ ಮರಣ ಹೊಂದಿದ್ದಾರೆ...

ತ್ಯಾಗಮೂರ್ತಿಯ ಮಹಾಮಜ್ಜನಕ್ಕೂ ಮುನ್ನ ದೇಹ ತ್ಯಾಗ ಮಾಡಿದ ಜೈನಮುನಿ
ತ್ಯಾಗಮೂರ್ತಿಯ ಮಹಾಮಜ್ಜನಕ್ಕೂ ಮುನ್ನ ದೇಹ ತ್ಯಾಗ ಮಾಡಿದ ಜೈನಮುನಿ
Published On :
ಶ್ರವಣಬೆಳಗೊಳ: ತ್ಯಾಗಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕಕ್ಕೂ ಮುನ್ನವೇ ಶ್ರವಣಬೆಳಗೊಳದಲ್ಲಿ ಜೈನ ಧರ್ಮೀಯತ ಅತ್ಯಂತ ಪವಿತ್ರ ಮತ್ತು ಕಠಿಣ ವ್ರತದ ಸಾರ್ವಜನಿಕ ದರ್ಶನ ನಡೆದಿದ್ದು, ಜೈನಮುನಿ ಶ್ರೀ 108 ಶ್ರೇಯಸಾಗರ ಮಹಾರಾಜರು (74) ಸಲ್ಲೇಖನ ಪೂರಕ ಸಮಾಧಿ ಮರಣ ಹೊಂದಿದ್ದಾರೆ. 
ಮುನಿಶ್ರೀಗಳು ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಮಧ್ಯಪ್ರದೇಶದಿಂದ ಆಗಮಿಸಿ ತ್ಯಾಗಿನಗರದಲ್ಲಿ ವಾಸ್ತವ್ಯ ಹೂಡಿದ್ದರು. 
ಸುಮಾರು 1 ತಿಂಗಳಿನಿಂದ ಶರೀರ ಕ್ಷೀಣವಾಗಿ ಕಳೆದ ಒಂದು ವಾರದಿಂದ ಆಹಾರ ತ್ಯಜಿಸಿದ್ದರು. ಕೊನೆಗ ಅವರ ಇಚ್ಚೆಯಂತೆಯೇ ನೀರನ್ನೂ ತ್ಯಜಿಸಿದ್ದರು. ವಿಶೇಷವೆಂದರೆ ಶ್ರವಣಬೆಳಗೊಳಕ್ಕೆ ಬರುವ ಮುನ್ನ ಅವರು ಶ್ರವಣಬೆಳಗೊಳದಲ್ಲಿಯೇ ತಮ್ಮ ಸಮಾಧಿಯಾಗಬೇಕೆಂದು ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. 
ತಮ್ಮ ಇಚ್ಛೆಯಂತೆಯೇ ನಿನ್ನೆ ಮುಶ್ರೀಗಳು ದೇಹತ್ಯಾಗ ಮಾಡಿದ್ದಾರೆ. ಮುನಿಶ್ರೀ ಶ್ರೇಯಸಾಗರ ಮಹಾರಾಜರ ಪಾರ್ಥೀವ ಶರೀರವನ್ನು ತ್ಯಾಗಿ ನಗರದಿಂದ ಮೆರವಣಿಗೆಯಲ್ಲಿ ತಂದು ಶ್ರವಣಬೆಳಗೊಳದ ಸಂತೆ ಮೈದಾನದಲ್ಲಿರುವ ಶ್ರಮಣಗುಡ್ಡದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.