ರಾಜ್ಯ

ತುಮಕೂರು: ಕೆರೆಯ ನೀರಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸಾವು

ದೇವರಾಯನದುರ್ಗಕ್ಕೆ ಪ್ರವಾಸಕ್ಕಾಗಿ ಬಂದಿದ್ದ ಬೆಂಗಳುರಿನ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎಲೆರಾಮಪುರದಲ್ಲಿ ನಡೆದಿದೆ.

ತುಮಕೂರು: ಕೆರೆಯ ನೀರಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸಾವು
ತುಮಕೂರು: ಕೆರೆಯ ನೀರಲ್ಲಿ ಮುಳಿಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸಾವು
Published On :
ತುಮಕೂರು: ದೇವರಾಯನದುರ್ಗಕ್ಕೆ ಪ್ರವಾಸಕ್ಕಾಗಿ ಬಂದಿದ್ದ ಬೆಂಗಳುರಿನ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎಲೆರಾಮಪುರದಲ್ಲಿ ನಡೆದಿದೆ.
ಬೆಂಗಳೂರು ವಿಜಯನಗರದ ವಾಸವಿ ವಿದ್ಯಾಪೀಠ ಶಾಲೆ ವಿದ್ಯಾರ್ಥಿಗಳಾದ ನಿಖಿಲ್ (16) ಮತ್ತು ಹರೀಶ್ (17) ಮೃತಪಟ್ಟಿದ್ದು ಇದರಲ್ಲಿ ನಿಖಿಲ್ ಕೆಂಗೇರಿ ಉಪನಗರ ನಿವಾಸಿಯಾದರೆ ಹರೀಶ್ ಮಾಗಡಿ ರಸ್ತೆಯಲ್ಲಿ ವಾಸವಿದ್ದನು. ಒಟ್ಟು ಆರು ದ್ವಿಚಕ್ರ ವಾಹನಗಳಲ್ಲಿ ಹನ್ನೆರಡು ಸ್ನೇಹಿತರ ತಂಡ ದೇವರಾಯನದುರ್ಗ ಬೆಟ್ಟಕ್ಕೆ ಪ್ರವಾಸ ಬಂದಿತ್ತು. ಆಗ ಆ ತಂಡವು ದುರ್ಗದಿಂದ 15 ಕಿಮೀ ದೂರದಲ್ಲಿದ್ದ ಎಲೆರಾಮಪುರ ಕೆರೆಯನ್ನು ಕಂಡು ಅಲ್ಲಿಗೆ ಈಜಲಿಕ್ಕಾಗಿ ತೆರಳಿದ್ದರು.
ಅವರಲ್ಲಿ ಆರು ಮಂದಿ ಮೊದಲು ನೀರಿಗಿಳಿದಿದ್ದಾರೆ, ಇಬ್ಬರು ಮುಳುಗಿದಾಗ ಉಳಿದವರಿಗೆ ಅಪಾಯ ಅರಿವಾಗಿ ಹಿಂದಿರುಗಿದ್ದಾರೆ. ಆದರೆಈ ಸ್ನೇಹಿತರ ತಂಡದಲ್ಲಿ ಯಾರ್ತಿಗೂ ಈಜು ಬರುತ್ತಿರಲಿಲ್ಲ ಎಂದು ಮೂಲಗಳು ಹೇಲಿದೆ.. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.