ಬೆಂಗಳೂರು: ಮಗನ ಸಾಲದ ಹೊರೆ ತಪ್ಪಿಸಲು ಅನಾರೋಗ್ಯ ಪೀಡಿತ ಮೊಮ್ಮಗುವನ್ನು ಕೊಂದ ಅಜ್ಜಿ!
ಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ತಿಂಗಳ ಹಸುಗೂಸನ್ನು ಕೊಂದಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗನ ಮೇಲಿನ ಸಾಲದ ಹೊರೆ ತಪ್ಪಿಸಲು

Published On :
ಬೆಂಗಳೂರು: ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ತಿಂಗಳ ಹಸುಗೂಸನ್ನು ಕೊಂದಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗನ ಮೇಲಿನ ಸಾಲದ ಹೊರೆ ತಪ್ಪಿಸಲು ಮೊಮ್ಮಗುವನ್ನು ಕೊಂದಿರುವುದಾಗಿ ಅಜ್ಜಿ ವಿಜಯಲಕ್ಷ್ಮಿ ತಪ್ಪೊಪ್ಪಿಕೊಂಡಿದ್ದಾಳೆ.
ಅಶೋಕನಗರದ ವಿಜಯಲಕ್ಷ್ಮಿ(54) ಯನ್ನು ಬಂಧಿಸಲಾಗಿದೆ. ತನ್ನ ಪುತ್ರ ಕಾರ್ತಿಕ್ ಗೆ ಅವಳಿ ಮಕ್ಕಳಾಗಿದ್ದವು, ಒಂದು ಮಗು ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿತ್ತು. ನಿರುದ್ಯೋಗಿಯಾಗಿದ್ದ ಮಗ ಕಾರ್ತಿಕ್ ಹಣವನ್ನು ಸ್ನೇಹಿತರು ಹಾಗೂ ಸಂಬಂಧಿಕರಿಂದ ಸಾಲ ತಂದು ಚಿಕಿತ್ಸೆ ಕೊಡಿಸುತ್ತಿದ್ದ. ಹೀಗಾಗಿ ಸಾಲದ ಹೊರೆಯಿಂದ ಮಗನನ್ನು ತಪ್ಪಿಸಲು ಮಗು ಕೊಂದಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ಮಕ್ಕಳನ್ನು ಆರೈಕೆ ಮಾಡುವುದಾಗಿ ಹೇಳಿ ಮಗನ ಮನೆಗೆ ಬಂದ ವಿಜಯ ಲಕ್ಷ್ನಿ ತನ್ನ ಸೊಸೆ ಸ್ಟೆಲ್ಲಾ ವಾಶ್ ರೂಂ ಗೆ ಹೋದಾಗ ಅನಾರೋಗ್ಯಕ್ಕೊಳಗಾಗಿದ್ದ ಮಗುವಿನ ಕುತ್ತಿಗೆ ಹಿಸುಕಿ ಕೊಂದು, ಶವವನ್ನು ಮಂಚದ ಕೆಳಗೆ ಬೊಂಬೆಯ ಜೊತೆಗೆ ಇರಿಸಿದ್ದಾಗಿ ಹೇಳಿದ್ದಾಳೆ.
ತನ್ನ ಮಗ ಕಾರ್ತಿಕ್ ಸ್ಟೆಲ್ಲಾ ಎಂಬಾಕೆ ಜೊತೆ ಅಂತರ್ಜಾತಿಯ ವಿವಾಹವಾಗಿದ್ದ, ಮನೆಯವರ ವಿರೋಧದ ಮಧ್ಯೆಯೂ ಕಾರ್ತಿಕ್ ಸ್ಟೆಲ್ಲಾ ಳನ್ನು ಮದುವೆಯಾಗಿದ್ದ. ನಂತರ ಮನೆಗೆ ಬಂದ ಕಾರ್ತಿಕ್ ಪತ್ನಿಯನ್ನು ತನ್ನ ಧರ್ಮಕ್ಕೆ ಬದಲಿಸುವುದಾಗಿ ಹೇಳಿದ್ದ, ಹೀಗಾಗಿ ಕಾರ್ತಿಕ್ ನನ್ನು ಕುಟುಂಬಸ್ಥರು ಮನೆಯಿಂದ ಹೊರ ಹಾಕಿದ್ದರು, ಹೀಗಾಗಿ ಕಾರ್ತಿಕ್ ಮತ್ತು ಸ್ಟೆಲ್ಲಾ ಕಾರ್ತಿಕ್ ತಂದೆ ಚಿತ್ತರಾಜ್ ಮನೆಯಲ್ಲಿ ವಾಸವಿದ್ದರು.
ಚಿತ್ತರಾಜ್ ನಿವೃತ್ತ ಸೇನಾಅಧಿಕಾರಿಯಾಗಿದ್ದರು. ವಿಜಯಲಕ್ಷ್ಮಿ ಮತ್ತು ಅರವಿಂದ್ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು, ಕಾರ್ತಿಕ್ ಮತ್ತು ಸ್ಟೆಲ್ಲಾ ಮೊದಲ ಮಹಡಿಯಲ್ಲಿ ವಾಸವಾಗಿದ್ದರು, ಉಳಿದವರು ಮೊದಲ ಮಹಡಿಯಲ್ಲಿ ವಾಸವಿದ್ದರು.
ಮಗ ಮನೆಯಿಂದ ಹೊರ ಬರಲು ಸ್ಟೆಲ್ಲಾ ಕಾರಣ ಎಂದು ತಿಳಿದಿದ್ದ ವಿಜಯಲಕ್ಷ್ನಿ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗು ಕೊಂದಿದ್ದಾಗಿ ತಿಳಿಸಿದ್ದಾಳೆ, ಕಾರ್ತಿಕ್ ಮತ್ತು ಸ್ಟೆಲ್ಲಾ ಭಾನುವಾರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ತಮ್ಮ ತಂದೆ ಮಗುವನ್ನು ಕೊಂದಿದ್ದಾರೆ ಎಂದು ದೂರಿದ್ದರು. ಆದರೆ ವಿಚಾರಣೆ ನಡೆಸಿದ ಪೊಲೀಸರು ಆ ಆರೋಪನ್ನು ನಿರಾಕರಿಸಿದ್ದರು. ನಂತರ ವಿಜಯಲಕ್ಷ್ಮಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


