ರಾಜ್ಯ

ಊರು ಬಿಟ್ಚು ಊರಿಗೆ ಬಂದು ಯಶ್ ನಟನೆಯ ಕೆಜಿಎಫ್ ಚಿತ್ರ ವೀಕ್ಷಿಸಿದ 76ರ ವೃದ್ಧೆ

ಕನ್ನಡ ಚಿತ್ರಗಳ ಮೇಲೆ ಅಪಾರ ಪ್ರೀತಿಯನ್ನಿಟ್ಟುಕೊಂಡಿರುವ ರತ್ನಮ್ಮ ಅವರು ಊರು ಬಿಟ್ಟು ಊರಿಗೆ ಬಂದು ಪ್ರತೀ ಶುಕ್ರವಾರ ಕನ್ನಡ ಚಿತ್ರವನ್ನು ವೀಕ್ಷಣೆ ಮಾಡುತ್ತಾರೆ...

ಊರು ಬಿಟ್ಚು ಊರಿಗೆ ಬಂದು ಯಶ್ ನಟನೆಯ ಕೆಜಿಎಫ್ ಚಿತ್ರ ವೀಕ್ಷಿಸಿದ 76ರ ವೃದ್ಧೆ
ಊರು ಬಿಟ್ಟು ಊರಿಗೆ ಬಂದು ಯಶ್ ನಟನೆಯ ಕೆಜಿಎಫ್ ಚಿತ್ರ ವೀಕ್ಷಿಸಿದ 76ರ ವೃದ್ಧೆ
Published On :
ಬೆಂಗಳೂರು: ಕನ್ನಡ ಚಿತ್ರಗಳ ಮೇಲೆ ಅಪಾರ ಪ್ರೀತಿಯನ್ನಿಟ್ಟುಕೊಂಡಿರುವ ರತ್ನಮ್ಮ ಅವರು ಊರು ಬಿಟ್ಟು ಊರಿಗೆ ಬಂದು ಪ್ರತೀ ಶುಕ್ರವಾರ ಕನ್ನಡ ಚಿತ್ರವನ್ನು ವೀಕ್ಷಣೆ ಮಾಡುತ್ತಾರೆ. 
ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ನೋಡಿಕೊಳ್ಳುವ ಜಂಜಾಟದಲ್ಲಿಯೇ ತಮ್ಮ ಜೀವನವನ್ನು ಕಳೆಯುತ್ತಿರುವ 76 ವರ್ಷದ ರತ್ನಮ್ಮ ಅವರು, ಶುಕ್ರವಾರ ಬಂತೆಂದರೆ ಸಾಕು ಸಿಲಿಕಾನ್ ಸಿಟಿಗೆ ಆಗಮಿಸಿ ಕನ್ನಡ ಚಿತ್ರವನ್ನು ವೀಕ್ಷಣೆ ಮಾಡುತ್ತಾರೆ. 
ನೆಲಮಂಗಲ ತಾಲೂಕಿನ ಮಕಾಲಿ ಗ್ರಾಮದ ನಿವಾಸಿಯಾಗಿರುವ ರತಮ್ಮ ಅವರು, ಕನ್ನಡ ಚಿತ್ರಗಳ ಅಭಿಮಾನಿಯಾಗಿದ್ದಾರೆ. 
ರತ್ನಮ್ಮ ಅವರು ಸಿನಿಮಾಗಳನ್ನು ವೀಕ್ಷಣೆ ಮಾಡುವುದಕ್ಕಷ್ಟೇ ಸೀಮಿತರಾಗಿಲ್ಲ. ತಮ್ಮ ಸಂಬಂಧಿಯೊಬ್ಬರು ಸ್ಟಂಟ್ ಮ್ಯಾನ್ ಆಗಿದ್ದಾಗ 90 ದಶಕದಲ್ಲಿ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗುವಂತೆ ಮಾಡಿದ್ದರು. ಟೈಗರ್ ಪ್ರಭಾಕರ್ ಅವರು ನಟಿಸಿರುವ ಭವ್ಯ ಭರತ ಚಿತ್ರದಲ್ಲಿ ಎರಡು ನಿಮಿಷಗಳ ಕಾಲ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. 
ಇದಲ್ಲದೆ, ಶಿವರಾಜ್ ಕುಮಾರ್, ದರ್ಶನ್, ಶಂಕರ್ ನಾಗ್, ಶರಣ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಟರ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಕಲಾವಿದರಿಗೆ ರಂಗ ಮಂದಿರ ಎಂಬುದು ಅತ್ಯಂತ ಭಾವನಾತ್ಮಕವಾದದ್ದು. ಪ್ರತೀ ಶುಕ್ರವಾರ ನಾನು ನರ್ತಕಿ ಚಿತ್ರಮಂದಿರಕ್ಕೆ ಬಂದು ಕನ್ನಡ ಚಿತ್ರಗಳನ್ನು ವೀಕ್ಷಿಸುತ್ತಲೇ ಇರುತ್ತೇನೆಂದು ರತ್ನಮ್ಮ ಅವರು ಹೇಳಿದ್ದಾರೆ. 
ಕೆಜಿಎಫ್ ಚಿತ್ರ ನೋಡಲು ಕಾಯುತ್ತಿದ್ದ. ನರ್ತಕಿಯಲ್ಲಿ ಮೊದಲನೇ ದಿನವೇ ಚಿತ್ರ ವೀಕ್ಷಿಸಲು ಬಯಸಿದ್ದೆ. ಹೌಸ್ ಫುಲ್ ಆಗಿರುತ್ತದೆ ಎಂಬುದು ನನಗೆ ಗೊತ್ತು. ಆದರೆ, ಕೆಲವರು ನನಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಸಿನಿಮಾ ನೋಡಲು ನನ್ನ ಮಕ್ಕಳು ನನ್ನನ್ನು ಕರೆದುಕೊಂಡು ಹೋಗುವುದಿಲ್ಲ. ಆದರೆ, ನನಗೆ ಸಿನಿಮಾ ನೋಡಲು ಬಹಳ ಇಷ್ಟ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.