ರಾಜ್ಯ

ಮನೆ ಮುಂದೆ ಹಾಕುತ್ತಿದ್ದ ನೀರು ತಾಕಿದ್ದಕ್ಕೆ ಚಾಕು ಇರಿದು ಕೊಲೆ ಗೈದ ಪಾಪಿ..!

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಮನೆ ಮುಂದೆ ಹಾಕುತ್ತಿದ್ದ ನೀರು ತಾಕಿದ್ದಕ್ಕೆ ಚಾಕು ಇರಿದು ಕೊಲೆ ಗೈದ ಪಾಪಿ..!
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನ ಕುರುಬರಹಳ್ಳಿ ಸರ್ಕಲ್​ ಬಳಿ ಈ ದುರ್ಘಟನೆ ನಡೆದಿದೆ. ಕುರುಬರಹಳ್ಳಿ ಸರ್ಕಲ್​ ಬಳಿಯ ಸಾಯಿ ಕಾಂಡಿಮೆಂಟ್ಸ್ ಮಾಲೀಕ ಮಂಜುನಾಥ್(55) ಮೃತ ದುರ್ದೈವಿ. ಇಂದು ಬೆಳಗ್ಗೆ ಸಾಯಿ ಕಾಂಡಿಮೆಂಟ್ಸ್ ಮಾಲೀಕ ಮಂಜುನಾಥ್ ಅವರು ಅಂಗಡಿ ಬಾಗಿಲು ತೆರೆದು ಅಂಗಡಿ ಮುಂಭಾಗ ನೀರು ಹಾಕುವಾಗ ಆಕಾಶ್​ ಎಂಬಾತ ಅಂಗಡಿ ಮುಂದೆ ನಿಂತಿದ್ದ. ಈ ವೇಳೆ ಆತನಿಗೆ ನೀರು ತಾಕಿದೆ. ಇದೇ ಕಾರಣಕ್ಕೆ ಆತ ಜಗಳ ತೆಗೆದಿದ್ದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನೋಡ ನೋಡುತ್ತಲೇ ಆತನ ದಾಂಧಲೆ ಮಿತಿ ಮೀರಿದ್ದು, ಜಗಳ ತಾರಕಕ್ಕೇರಿ ಚಾಕು ತೆಗೆದು ಮಂಜುನಾಥ್ ಅವರ​ ಎದೆ, ಬೆನ್ನು ಹಾಗೂ ಪಕ್ಕೆಲುಬಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿದ್ದ ಮಂಜುನಾಥ್ ರನ್ನು ಕೂಡಲೇ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾಗರೂ ಚಿಕಿತ್ಸೆ ಫಲಕಾರಿಯಾಗದೆ​ ಸಾವನ್ನಪ್ಪಿದ್ದಾರೆ. ಆರೋಪಿ ಆಕಾಶ್​ ಕುಡಿದ ಆಮಲಿನಲ್ಲಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪರಾರಿಯಾಗಿರುವ ಆಕಾಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.