ಚಿಂತಾಮಣಿ: ರೈಲಿಗೆ ಸಿಕ್ಕಿ ತುಂಡಾದ ಮಹಿಳೆಯ ಕೈ ನಾಯಿಗಳ ಪಾಲು!
ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಕ್ಕು ಮಹಿಳೆಯೊಬ್ಬರ ಕೈ ತುಂಡಾಗಿದೆ. ಹಾಗೆ ತ್ಂಡಾದ ಕೈಯನ್ನು ಬೀದಿ ನಾಯಿಗಳು ಎಳೆದೊಯ್ದ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.

Published On :
ಚಿಂತಾಮಣಿ: ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಕ್ಕು ಮಹಿಳೆಯೊಬ್ಬರ ಕೈ ತುಂಡಾಗಿದೆ. ಹಾಗೆ ತ್ಂಡಾದ ಕೈಯನ್ನು ಬೀದಿ ನಾಯಿಗಳು ಎಳೆದೊಯ್ದ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ಚಿಂತಾಮಣಿಯ ಉಪ್ಪರಪೇಟೆ ಗ್ರಾಮದ ಬಳಿ ಶನಿವಾರ ಆತ್ರಿ ಸುಮಾರು 8.30ರ ಸಮಯಕ್ಕೆ ನಡೆದಿದ್ದ ಘಟನೆಯಲ್ಲಿ ಸುಮಾರು 60ರ ಆಸುಪಾಸಿನ ಮಹಿಳೆಯೊಬ್ಬರು ತಮ್ಮ ಕೈ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾತ್ರಿ ವೇಳೆ ಮಹಿಳೆ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಬೆಂಗಳೂರನಿಂದ ಕೋಲಾರಕ್ಕೆ ಬರುತ್ತಿದ್ದ ರೈಲಿಗೆ ಸಿಕ್ಕಿ ಮಹಿಳೆಯ ಕೈ ತುಂಡಾಗಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಅಪಘಾತ ನಡೆದ ವೇಳೆ ಹತ್ತಿರದಲ್ಲಿದ್ದ ಜನರಾರೂ ಮಹಿಳೆಯ ಸಹಾಯಕ್ಕೆ ಬರದೆ ಹೋದ ಕಾರಣ ಗಂಭೀರ ಗಾಯವಾಗಿದ್ದ ಮಹಿಳೆ ಬೆಳಗಿನ ಜಾವದವರೆಗೂ ಅವಘಡ ನಡೆದ ಸ್ಥಳದಲ್ಲೇ ನರಳುತ್ತಾ ಕಾಲ ಕಳೆದಿದ್ದಾರೆ. ಭಾನುವಾರ ಬೆಳಿಗ್ಗೆ ಸ್ಥಳೀಯ ಮುಖಂಡ ಅಮಿಟಿಗಾನಹಳ್ಳಿ ಶ್ರೀನಿವಾಸರೆಡ್ಡಿ ಗಾಯಾಳು ಮಹಿಳೆಯನ್ನು ಗಮನಿಸಿದ್ದು ಸಹಾಯ ಹಸ್ತ ನೀಡಿದ್ದಾರೆ.
ಸಧ್ಯ ಗಾಯಾಳು ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತುಂಡಾದ ಕೈ ನಾಯಿ ಪಾಲು!
ರಾತ್ರಿ ಅಪಘಾತ ನಡೆದ ವೇಳೆ ರೈಲಿಗೆ ಸಿಕ್ಕು ತುಂಡಾದ ಕೈ ಬೆಳಿಗ್ಗೆ ನೋಡುವಾಗ ಕಾಣೆಯಾಗಿದೆ.ಕೈ ತುಂಡನ್ನು ಬೀದಿ ನಾಯಿಗಳು ಎಳೆದೊಯ್ದು ತಿಂದು ಹಾಕಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಆದರೆ ರಾತ್ರಿಯೆಲ್ಲಾ ಅಪ್ಘಾತದಿಂದ ನರಳುತ್ತಿದ್ದ ಮಹಿಳೆಯನ್ನು ಕಂಡಿದ್ದ ಜನರಾರೂ ಆಕೆಗೆ ಸಹಾಯ ನೀಡದೆ ಫೋಟೋ ಕ್ಲಿಕ್ಕಿಸುತ್ತಾ, ವೀಡಿಯೋ ಮಾಡುತ್ತಾ ಅಮಾನವ್ಬೀಯತೆ ಮೆರೆದಿದ್ದಾರೆ. ಮಹಿಳೆಯ ಕೈಯನ್ನು ನಾಯಿಗಳು ಕಚ್ಚಿಕೊಂಡು ಹೋಗುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಧಾವಿಸಲಿಲ್ಲ ಎನ್ನುವುದು ಮನುಷ್ಯನಲ್ಲಿನ ಮಾನವೀಯ ಮೌಲ್ಯಗಳ ಕುರುತು ಪ್ರಶ್ನೆ ಮಾಡುವಂತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


