ಪ್ರವಾಹದಿಂದ ತತ್ತರಿಸಿದ ಕೊಡಗು: ಸಂತ್ರಸ್ತರಿಗೆ ಚಿನ್ನದ ಪದಕ ಅರ್ಪಿಸಿದ ಬೋಪಣ್ಣ
ಏಷಿಯನ್ ಗೇಮ್ಸ್ 2018 ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕ ಮೂಲಕ ರೋಹನ್ ಬೋಪಣ್ಣ ಅವರು ಪದಕವನ್ನು ಕೊಡಗು ನೆರೆ ಸಂತ್ರಸ್ತರಿಗೆ ಅರ್ಪಿಸಿದ್ದಾರೆ...

Published On :
ಜಕಾರ್ತ: ಏಷಿಯನ್ ಗೇಮ್ಸ್ 2018 ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕ ಮೂಲಕ ರೋಹನ್ ಬೋಪಣ್ಣ ಅವರು ಪದಕವನ್ನು ಕೊಡಗು ನೆರೆ ಸಂತ್ರಸ್ತರಿಗೆ ಅರ್ಪಿಸಿದ್ದಾರೆ.
ಮೂಲತಃ ಕೊಡಗಿನವರೇ ಆಗಿರುವ ರೋಹನ್ ಅವರು, ಜಕಾರ್ತದಲ್ಲಿದ್ದರೂ ನನ್ನ ಮನಸ್ಸು ಕೊಡಗಿನಲ್ಲಿಯೇ ಇದೆ. ಕುಟುಂಬ, ಸ್ನೇಹಿತರಿಕೆ ಕರೆ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದೇನೆ. ಬಹಳ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ಬೋಪಣ್ಣ ಅವರು ದಿವಿಜ್ ಅವರ ಜೊತೆಗಿನ ಡಬಲ್ಸ್ ಟೆನ್ನಿಸ್ ನಲ್ಲಿ ನಿನ್ನೆಯಷ್ಟೇ ಚಿನ್ನದ ಪದಕ ಗೆದ್ದಿದ್ದರು. ಇದೀಗ ಪದಕವನ್ನು ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಸಮರ್ಪಿಸಿದ್ದಾರೆ.
ಕರ್ನಾಟಕ ಜನರ ಪ್ರೀತಿ, ಕೊಡಗಿನ ಜನರು ತೋರಿಸಿದ ಅಕ್ಕರೆಯಿಂದ ನಾನು ಪದಕ ಗೆಲ್ಲುವುದು ಸಾಧ್ಯವಾಗಿದ್ದು, ಹಾಗಾಗಿ ಈ ಪದಕವನ್ನು ಅವರಿಗೆ ಅರ್ಪಿಸುತ್ತಿದ್ದೇನೆಂದು ಬೋಪಣ್ಣ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
gold medalಚಿನ್ನದ ಪದಕRohan BopannaKodaguಕೊಡಗುflood victimsಪ್ರವಾಹ ಸಂತ್ರಸ್ತರುAsian Games 2018ಏಷಿಯನ್ ಗೇಮ್ಸ್ 2018. ರೋಹನ್ ಬೋಪಣ್ಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


