flood victims

'ನೇಪಾಳಿಗರೇ, ನೀವು ಒಂಟಿಯಲ್ಲ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ': ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ನಟ ಸೋನು ಸೂದ್!
ಈ ದುಃಖದ ಸಮಯದಲ್ಲಿ ಪ್ರವಾಹ ಬಾಧಿತ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವ ಮೂಲಕ ಖ್ಯಾತ ನಟ ಸೋನು ಸೂದ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ನೇಪಾಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಸೋನು ಸೂದ್ ಮುಂದೆ ಬಂದಿದ್ದಾರೆ.

ಗಂಗಾ ಮಾತೆ ನಿಮ್ಮ ಪಾದ ತೊಳೆಯಲು ಬಂದಿದ್ದಾಳೆ, ನೀವು ನೇರವಾಗಿ ಸ್ವರ್ಗಕ್ಕೆ ಹೋಗುವಿರಿ: ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಚಿವರ ಮಾತು!
ಗಂಗಾ ಮಾತೆ ತನ್ನ ಪುತ್ರರ ಪಾದಗಳನ್ನು ತೊಳೆಯುವುದಕ್ಕಾಗಿ ಬರುತ್ತಾಳೆ. ಆಕೆಯ ದರ್ಶನದಿಂದ ಪುತ್ರರೆಲ್ಲಾ ಸ್ವರ್ಗಕ್ಕೆ ಹೋಗುತ್ತಾರೆ ಎಂದೂ ಸಚಿವ ನಿಶಾದ್ ಹೇಳಿದ್ದಾರೆ

ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಸಂತ್ರಸ್ತರಿಗೆ ಮನೆ, ಪರಿಹಾರದ ಘೋಷಣೆ
ಬಿ.ಎಸ್.ಯಡಿಯೂರಪ್ಪನವರು ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಈ ನೆರವಿನ ದುರುಪಯೋಗವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ 1.2 ಲಕ್ಷ ರೂ. ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ.

ಮಡಿಕೇರಿ: ಕೊಯನಾಡು ಪ್ರವಾಹ ಸಂತ್ರಸ್ತರಿಂದ ಆತ್ಮಹತ್ಯೆ ಎಚ್ಚರಿಕೆ
ಕೊಡಗಿನಲ್ಲಿ ಧಾರಾಕಾರ ಮಳೆಯ ಪರಿಣಾಮ ಜುಲೈ ತಿಂಗಳಿನಿಂದ ಪ್ರವಾಹ ಉಂಟಾಗಿದ್ದು, ಹಲವು ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ.

ಬಾಗಲಕೋಟೆ: ರಸ್ತೆ ಸಂಪರ್ಕವಿಲ್ಲ, ಪ್ರವಾಹ ಪೀಡಿತ ಗ್ರಾಮಗಳ ಜನರು ನಿರಾಶ್ರಿತ ಕೇಂದ್ರದಲ್ಲೇ ಉಳಿಯಬೇಕಾದ ಪರಿಸ್ಥಿತಿ!
ಕೃಷ್ಣ ನದಿ ತೀರದಲ್ಲಿ ನೀರಿನ ಮಟ್ಟ ತಗ್ಗಿದರೂ ಕೂಡ ಸುತ್ತಮುತ್ತಲ ನಿವಾಸಿಗಳಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಜಮಖಂಡಿಯಲ್ಲಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗಿರುವುದರಿಂದ ಜನರು ನಿರಾಶ್ರಿತ ತಾಣದಲ್ಲಿ ವಾಸ ಮುಂದುವರಿಸಿದ್ದಾರೆ.

ಪ್ರವಾಹ ಪೀಡಿತ ಉತ್ತರ ಕನ್ನಡಕ್ಕೆ ಮಾಜಿ ಸಿಎಂ ಭೇಟಿ: ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
ಜುಲೈ ತಿಂಗಳಿನ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದು, ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಮತ್ತು ಮಲ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ನೆರೆ ಪ್ರವಾಹ ಪರಿಹಾರ ಘೋಷಣೆಗೆ ನೀತಿ ಸಂಹಿತೆ ಅಡ್ಡಿ: ಹಿಂದಿನ ಮಾನದಂಡವೇ ಆಧಾರ
ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರ ಯಾವುದೇ ಹೊಸ ಯೋಜನೆ ಘೋಷಿಸುವಂತಿಲ್ಲ, ಹೀಗಾಗಿ ಮಳೆ ಪರಿಹಾರಕ್ಕಾಗಿ ಇರುವ ಪರಿಹಾರ ಯೋಜನೆಯನ್ನು ಸರ್ಕಾರ ವಿಸ್ತರಿಸಿದೆ.

ಪ್ರವಾಹ ಸಂತ್ರಸ್ತರು, ರೈತರಿಗೆ ಪರಿಹಾರ ಸಿಗಲಿದೆ: ಸಿಎಂ ಯಡಿಯೂರಪ್ಪ ಭರವಸೆ
ಪ್ರವಾಹ ಪೀಡಿತ ಸಂತ್ರಸ್ತರು, ರೈತರಿಗೆ ಸರ್ಕಾರ ಪರಿಹಾರ ನೀಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾನುವಾರ ಭರವಸೆ ನೀಡಿದ್ದಾರೆ.

ರಾಯಬಾಗ: ಬೇರೆಯವರ ಪಾಲಾದ ಮನೆ; ಗ್ರಾಮ ಪಂಚಾಯಿತಿಗೆ ಬೀಗ ಹಾಕಿ 2005 ರ ಪ್ರವಾಹ ಸಂತ್ರಸ್ತರ ಪ್ರತಿಭಟನೆ!
ಅವರು ಮನೆ-ಮಠ ಕಳಕೊಂಡ ನಿಜವಾದ ಸಂತ್ರಸ್ತರು. ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಮನೆಗಳ ನಿರ್ಮಾಣಮಾಡಿ ಮನೆಗಳ ಹಕ್ಕುಪತ್ರ ನೀಡಿದೆ.

