ಬೆಂಗಳೂರಿಗರೇ, ಮುಂದಿನ ತಿಂಗಳು ಭಾರೀ ಮಳೆ ಎದುರಿಸಲು ಸಜ್ಜಾಗಿ
ಈ ವರ್ಷ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅವ್ಯಾಹತ ಮಳೆಯಾಗಿ ಅಪಾರ ಪ್ರಮಾಣದ ನಷ್ಟ, ಸಾವು...

ಬೆಂಗಳೂರು: ಈ ವರ್ಷ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅವ್ಯಾಹತ ಮಳೆಯಾಗಿ ಅಪಾರ ಪ್ರಮಾಣದ ನಷ್ಟ, ಸಾವು-ನೋವು ಕಾಣಿಸಿಕೊಂಡಿದ್ದರೆ ರಾಜಧಾನಿ ಬೆಂಗಳೂರಿನಲ್ಲಿ ಅಷ್ಟೊಂದು ಮಳೆಯಾಗಿಲ್ಲ. ಒಂದು ಗಂಟೆ ಸತತ ಮಳೆ ಬಿದ್ದರೆ ಪ್ರವಾಹ ಪರಿಸ್ಥಿತಿ ಉಂಟಾಗುವ ಬೆಂಗಳೂರಿಗರು ಈ ಬಾರಿ ನಾವು ಬಚಾವಾಗಿದ್ದೇವೆ ಎಂದು ಖುಷಿಯಲ್ಲಿದ್ದರೆ ಆ ಖುಷಿ ಹೆಚ್ಚು ಸಮಯ ಇಲ್ಲದಿರಬಹುದು.
ಏಕೆಂದರೆ ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಮಳೆಯಾಗಬಹುದೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ನಗರದಲ್ಲಿ ಒತ್ತುವರಿ ತೆರವು ಕಾರ್ಯ ಈಗಷ್ಟೇ ಕೈಗೆತ್ತಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ ವರ್ಷದಂತೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವ ಸಾಧ್ಯತೆಯಿದೆ. ಆದರೆ ನಗರವಿನ್ನೂ ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿಲ್ಲ.
ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯ ನಿರೀಕ್ಷೆಗಿಂತ ಮಳೆ ಬೆಂಗಳೂರಿನಲ್ಲಿ ಹೆಚ್ಚಾಗಿಯೇ ಬಂದಿತ್ತು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ 383.3 ಮಿಲಿ ಮೀಟರ್ ಮಳೆಯಾಗಿದ್ದು, ಸರಾಸರಿ 179 ಮಿಲಿ ಮೀಟರ್ ಆಗಿದೆ. ಅಕ್ಟೋಬರ್ ನಲ್ಲಿ 226.9 ಮಿಲಿ ಮೀಟರ್ ನಷ್ಟು ಬಿದ್ದಿದ್ದು ಸರಾಸರಿ 159.7ಮಿಲಿ ಮೀಟರ್ ಆಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಶೇಕಡಾ 120ರಷ್ಟು ಮತ್ತು ಅಕ್ಟೋಬರ್ ನಲ್ಲಿ ಶೇಕಡಾ 42ರಷ್ಟು ಅಧಿಕ ಮಳೆಯಾಗಿತ್ತು. ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಮಳೆಯಾದರೂ ಕೂಡ ನಗರ ಇನ್ನೂ ಸುರಕ್ಷಿತ ವಲಯದಲ್ಲಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಈ ವರ್ಷ ಜೂನ್ ನಿಂದ ಆಗಸ್ಟ್ ವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇಕಡಾ 30ರಷ್ಟು ಮಳೆಯ ಕೊರತೆಯಾಗಿದೆ. ಇದು ಕಳೆದ ವರ್ಷದ ಪರಿಸ್ಥಿತಿಗೆ ಸರಿಯಾಗಿದೆ. ಕಳೆದ ವರ್ಷದಷ್ಟು ಮುಂದಿನ ಎರಡು ತಿಂಗಳು ಮಳೆ ಸುರಿಯದಿದ್ದರೂ ಕೂಡ ಅದರ ಅರ್ಥ ನಗರ ಸುರಕ್ಷಿತವಾಗಿದೆ ಎಂದರ್ಥವಲ್ಲ ಎನ್ನುತ್ತಾರೆ ಕೆಎಸ್ ಎನ್ ಡಿಎಂಸಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ.
ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಳೆ ಸುರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ನಗರದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


