ಬೆಂಗಳೂರು: ಮಹಿಳಾ ಟೆಕ್ಕಿ ಸಾವು, ಕೊಲೆ ಶಂಕೆ, ಪ್ರಿಯಕರನ ಕೈವಾಡ?
ವೈಟ್'ಫೀಲ್ಡ್'ನ ಇಮ್ಮಡಿಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ದೆಹಲಿ ಮೂಲದ ಮಹಿಳಾ ಸಾಫ್ಟ್'ವೇರ್ ಉದ್ಯೋಗಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ...

Published On :
ಬೆಂಗಳೂರು: ವೈಟ್'ಫೀಲ್ಡ್'ನ ಇಮ್ಮಡಿಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ದೆಹಲಿ ಮೂಲದ ಮಹಿಳಾ ಸಾಫ್ಟ್'ವೇರ್ ಉದ್ಯೋಗಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತ ಯುವತಿಯನ್ನು ವೈಟ್ ಫೀಲ್ಡ್ ನಿವಾಸಿ ವಿಜಯಲಕ್ಷ್ಮೀ (23) ಎಂದು ಗುರ್ತಿಸಲಾಗಿದೆ. 3 ತಿಂಗಳ ಹಿಂದಷ್ಟೇ ವಿಜಯಲಕ್ಷ್ಮೀ ಅವರು ಬೆಂಗಳೂರಿಗೆ ಬಂದಿದ್ದರು. ನಂತರ ಸಾಫ್ಟ್'ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವೈಟ್'ಫೀಲ್ಡ್ ನ ಇಮ್ಮಡಿಹಳ್ಳಿಯಲ್ಲಿ ಬಾಡಿಗೆಯಲ್ಲಿ ಒಬ್ಬರೇ ನೆಲೆಸಿದ್ದರು. ನಾಲ್ಕು ದಿನಗಳ ಹಿಂದೆ ವಿಜಯಲಕ್ಷ್ಮೀ ಅವರು ಮೃತಪಟ್ಟಿದ್ದು, ಮನೆಯಿಂದ ದುರ್ವಾಸಣೆ ಬಂದ ಹಿನ್ನಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಆಕೆಯೊಂದಿಗಿದ್ದ. ಆಗಸ್ಟ್ 16 ರಂದು ವಿಜಯಲಕ್ಷ್ಮೀಯೊಂದಿಗೆ ಈ ಬಗ್ಗೆ ಮಾತನಾಡಿದಾಗ ಆತ ಗೆಳೆಯನೆಂದು ಹೇಳಿದ್ದಳು. ಕಳೆದ ನಾಲ್ಕು ದಿನಗಳಿಂದ ಯುವತಿ ಹೊರಗೆ ಬಂದಿರಲಿಲ್ಲ. ಮನೆಯಿಂದ ದುರ್ವಾಸಣೆ ಬರಲಾರಂಭಿಸಿತ್ತು. ಮನೆ ಮಾಲೀಕ ಕಿಟಕಿ ಮೂಲಕ ನೋಡಿದಾಗ ನೆಲದ ಮೇಲೆ ವಿಜಯಲಕ್ಷ್ಮೀ ಶವ ಕಾಣಿಸಿದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಮನೆಯ ಮಾಲೀಕರು ಹೇಳಿದ್ದಾರೆ.
ಮನೆಗೆ ಬಂದಿದ್ದ ಆಕೆಯ ಗೆಳೆಯನೇ ಆಕೆಯನ್ನು ಹತ್ಯೆ ಮಾಡಿರಬೇಕೆಂದು ಮನೆಯ ಮಾಲೀಕರು ಶಂಕಿಸಿದ್ದಾರೆ.
ವಿಜಯಲಕ್ಷ್ಮೀ ಅವರಿಗೆ ಅವರ ಪೋಷಕರು ಎಷ್ಟು ಬಾರಿ ಕರೆ ಮಾಡಿದರೂ ಉತ್ತರ ಸಿಕ್ಕಿಲ್ಲ. ಹೀಗಾಗಿ ನೇರವಾಗಿ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಳಿಕ ಅನುಮಾನಗೊಂಡ ಮಾಲೀಕರು ಮನೆಯ ಬಳಿ ಹೋಗಿ ನೋಡಿದಾಗ ವಿಜಯಲಕ್ಷ್ಮೀ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ಪ್ರಕರಣ ಸಂಬಂಧ ವೈಟ್ ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


