ರಾಜ್ಯ

ಕೊಡಗು, ಕೇರಳ ನೆರೆ ಸಂತ್ರಸ್ತರಿಗೆ ಮಿಡಿದ ಕರ್ನಾಟಕ: ಐಎಂಎ ಕರ್ನಾಟಕ ಶಾಖೆಯಿಂದ ವೈದ್ಯಕೀಯ ನೆರವು

ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ನಲುಗಿ ಹೋಗಿರುವ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಕರ್ನಾಟಕ ಜನತೆ ಮಿಡಿದಿದ್ದು, ನೆರೆ ಸಂತ್ರಸ್ತರಿಗೆ ಭಾರತೀಯ ವೈದ್ಯಕೀಯ ಸಂಘಟನೆಯ ಕರ್ನಾಟಕ ಶಾಖೆಯಿಂದ ವೈದ್ಯಕೀಯ ನೆರವುಗಳನ್ನು ನೀಡಲಾಗುತ್ತಿದೆ...

ಕೊಡಗು, ಕೇರಳ ನೆರೆ ಸಂತ್ರಸ್ತರಿಗೆ ಮಿಡಿದ ಕರ್ನಾಟಕ: ಐಎಂಎ ಕರ್ನಾಟಕ ಶಾಖೆಯಿಂದ ವೈದ್ಯಕೀಯ ನೆರವು
ಸಂಗ್ರಹ ಚಿತ್ರ
Published On :
ಬೆಂಗಳೂರು: ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ನಲುಗಿ ಹೋಗಿರುವ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಕರ್ನಾಟಕ ಜನತೆ ಮಿಡಿದಿದ್ದು, ನೆರೆ ಸಂತ್ರಸ್ತರಿಗೆ ಭಾರತೀಯ ವೈದ್ಯಕೀಯ ಸಂಘಟನೆಯ ಕರ್ನಾಟಕ ಶಾಖೆಯಿಂದ ವೈದ್ಯಕೀಯ ನೆರವುಗಳನ್ನು ನೀಡಲಾಗುತ್ತಿದೆ. 
ರಾಜ್ಯದ 175 ಖಾಖೆಗಳ ಒಟ್ಟು 27,00 ಸದಸ್ಯರು ವೈದ್ಯಕೀಯ ನೆರವು ನೀಡಲು ಮುಂದಾಗಿದ್ದು, ಈಗಾಗಲೇ ವೈದ್ಯರು, ಡ್ರಗ್ಸ್, ಔಷಧಿಗಳನ್ನು ನಿರಾಶ್ರಿತ ಶಿಬಿರಗಳಿಗೆ ಕಳುಹಿಸುತ್ತಿದ್ದಾರೆ. 
ಪ್ರವಾಹ ಪೀಡಿದ ಕೊಡಗು ಜಿಲ್ಲೆಗಾಗಿ ಐಎಂಎ ಕರ್ನಾಟಕ ಶಾಖೆ ರೂ.15 ಲಕ್ಷದಿಂದ ರೂ.20 ಲಕ್ಷದವರೆಗಿನ ವೈದ್ಯಕೀಯ ನೆರವನ್ನು ಸಂಗ್ರಹಿಸಿದೆ. ನಿರಾಶ್ರಿತ ಶಿಬಿರಗಳಿಗೆ ರವಾನಿಸುವ ಕೆಲಸವನ್ನು ಮಾಡುತ್ತಿದೆ. 
ಕೊಡಗು ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಗಾಯಗೊಂಡಿರುವ 350 ಸಂತ್ರಸ್ತರಿಗೆ ಐಎಂಎ ಚಿಕಿತ್ಸೆ ನೀಡುತ್ತಿದೆ. ಮೂಳೆ ಮುರಿತಗೊಂಡಿರುವ ಜನರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಅಶ್ವಿನಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ಕಾರ್ಯಗಳು ನಡೆಯುತ್ತಿವೆ. 
ಇದಲ್ಲದೆ ಬಿಸ್ಕೆಟ್, ನಿಧಿ, ಆಹಾರ ಧಾನ್ಯಗಳು, ಬೆಚ್ಚಗಿನ ಬಟ್ಟೆಗಳು ಸೇರಿದಂದೆ ಇನ್ನಿತರೆ ಅಗತ್ಯ ವಸ್ತುಗಳನ್ನು ನೀಡುವಂತೆ ಎಲ್ಲಾ ಶಾಖೆಗಳಿಗೂ ಐಎಂಎ ಮನವಿ ಮಾಡಿಕೊಂಡಿದೆ. 
ಪ್ರವಾಹ ಅಂತ್ಯಗೊಂಡ ಬಳಿಕ ನಿಜವಾದ ಆತಂಕ ಹಾಗೂ ಬೆದರಿಕೆಗಳು ನಮ್ಮ ಮುಂದೆ ಎದುರಾಗಲಿದೆ. ಪ್ರಸ್ತುತ ಸಂಗ್ರಹಿಸಲಾಗಿರುವ ನಿಧಿಯನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ವಿಭಾಗದ ಐಎಂಎ ಅಧ್ಯಕ್ಷ ಡಾ.ಹೆಚ್.ಎನ್ ರವೀಂದ್ರ ಅವರು ಹೇಳಿದ್ದಾರೆ. 
ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಮೂತ್ರಪಿಂಡ ಶಾಸ್ತ್ರಜ್ಞ ಡಾ. ಅನಿಲ್ ಕುಮಾರ್ ಬಿ.ಟಿ ಮಾತನಾಡಿ, ಐಎಂಎ ಈಗಾಗಲೇ ಎಲ್ಲಾ ವೈದ್ಯಕೀ ಸಂಘಟನೆಗಳನ್ನು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದೆ. 40-50 ವೈದ್ಯರು, ನರ್ಸ್ ಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ರೂ.2.5 ಲಕ್ಷದಿಂದ ರೂ.3 ಲಕ್ಷದವರೆಗೂ ಸಹಾಯ ಮಾಡಿದ್ದಾರೆ. ನಾಳೆ ಬೆಳಿಗ್ಗೆ 10.30ರ ಸುಮಾರಿಗೆ ನೆರವಿನ ಎಲ್ಲಾ ಸಾಮಾಗ್ರಿಗಳನ್ನು ಕೇರಳ ರಾಜ್ಯಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.