'ನಡೆದಾಡುವ ದೇವರು' ಸಿದ್ದಗಂಗಾ ಶ್ರೀಗಳ ದಿನಚರಿ ಹೀಗಿದೆ!
ನಡೆದಾಡುವ ದೇವರು' ಎಂದು ಕರೆಯಲ್ಪಡುವ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು...

ತುಮಕೂರು:'ನಡೆದಾಡುವ ದೇವರು' ಎಂದು ಕರೆಯಲ್ಪಡುವ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಅಸಾಧಾರಣ ಶಕ್ತಿ, ಸಾಮರ್ಥ್ಯ ಹೊಂದಿದವರು. 111ರ ಇಳಿವಯಸ್ಸಿನಲ್ಲಿ ಕೂಡ ಲವಲವಿಕೆ ಮತ್ತು ಚಟುವಟಿಕೆಯಿಂದ ಇದ್ದಾರೆ.
ಸ್ವಾತಂತ್ರ್ಯ ದಿನವಾದ ನಿನ್ನೆ ಸಿದ್ದಗಂಗಾ ಶ್ರೀಗಳು ಸುಮಾರು 200 ಮೀಟರ್ ಗಳಷ್ಟು ನಡೆದುಕೊಂಡು ಹೋಗಿ ಕಾರಿನಲ್ಲಿ ಕುಳಿದು ಮಠದ ಸುತ್ತ ಒಂದು ಸುತ್ತು ಹಾಕಿಕೊಂಡು ಬಂದಿದ್ದಾರೆ. ಮಠದ ಸುತ್ತ ಗದ್ದೆಯಲ್ಲಿ ಬೆಳೆದ ರಾಗಿ ಮತ್ತು ಭತ್ತದ ಬೆಳೆಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡು ಬಂದಿದ್ದಾರೆ.
ಸಾಮಾನ್ಯವಾಗಿ ಸಿದ್ದಗಂಗಾ ಶ್ರೀಗಳು ವಿಶ್ರಾಂತಿ ತೆಗೆದುಕೊಳ್ಳುವ ಹಳೆ ಮಠದಿಂದ ಹೊಸ ಮಠಕ್ಕೆ ತಮ್ಮ ಭಕ್ತರನ್ನು ಭೇಟಿ ಮಾಡಲು ನಡೆದುಕೊಂಡೇ ಹೋಗುತ್ತಾರೆ. ಆದರೆ ಈ ವರ್ಷ ಎರಡು ಬಾರಿ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಆಸ್ಪತ್ರೆಗೆ ಎರಡು ಬಾರಿ ದಾಖಲಾದ ನಂತರ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ, ಬದಲಾಗಿ ಕಾರಿನಲ್ಲಿ ಹೋಗುತ್ತಾರೆ. ನಿನ್ನೆ ಭಕ್ತರು ಮತ್ತು ವಿದ್ಯಾರ್ಥಿಗಳು ಅವರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಶ್ರೀಗಳನ್ನು ನೋಡಿಕೊಳ್ಳುವ ಮಠದ ಅಧಿಕಾರಿಗಳು ಬಿಡಲಿಲ್ಲ. ಭಕ್ತರು ಶ್ರೀಗಳ ಕಾಲಿಗೆ ಬಿದ್ದು ವಾಪಸಾದರು.
ಕಳೆದ ಬಾರಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರ ಪಿತ್ತಕೋಶದಲ್ಲಿದ್ದ ಅಡೆತಡೆಯನ್ನು ವೈದ್ಯರು ತೆಗೆದು ಅವರನ್ನು ಆರೋಗ್ಯ ಮಾಡಿದ್ದಕ್ಕಾಗಿ ವೈದ್ಯರಿಗೆ ಕೃತಜ್ಞತೆ ಹೇಳಬೇಕು. ಸ್ವಾಮೀಜಿಗಳು ಎಂದಿನಂತೆ ತಮ್ಮ ನಿತ್ಯದ ಕೆಲಸ ಮಾಡಲು ಆರಂಭಿಸಿದ್ದು ಸಂತೋಷ ಎನ್ನುತ್ತಾರೆ ಮಠದ ಸಿಬ್ಬಂದಿ ಸತೀಶ್ ಕುಮಾರ್.ಸಾಮಾನ್ಯವಾಗಿ ಪಿತ್ತರಸದಲ್ಲಿ ಮನುಷ್ಯನಿಗೆ ಆರು ಸ್ಟಂಟ್ ಗಳನ್ನು ಹಾಕಬಹುದು, ಆದರೆ ಶ್ರೀಗಳಿಗೆ ಎಂಟು ಸ್ಟಂಟ್ ಗಳನ್ನು ಅಳವಡಿಸಲಾಗಿದೆ.
ಶ್ರೀಗಳ ದಿನಚರಿ: ವಯಸ್ಸು 110 ದಾಟಿದರೂ ಶ್ರೀಗಳು ಇಷ್ಟೊಂದು ಆರೋಗ್ಯವಾಗಿರಲು ಹೇಗೆ ಸಾಧ್ಯ ಎಂದು ಎಲ್ಲರ ಪ್ರಶ್ನೆಯಾಗಿದೆ. ಇದಕ್ಕೆ ಅವರ ಶಿಸ್ತಿನ ದಿನಚರಿಯೇ ಕಾರಣವಾಗಿದೆ. ಪ್ರತಿದಿನ ಬೆಳಗ್ಗೆ 4 ಗಂಟೆಗೆ ಏಳುತ್ತಾರೆ. ಹಳೆ ಮಠದಲ್ಲಿ ಪೂಜೆಗೆ ಸಿದ್ಧರಾಗುತ್ತಾರೆ. ಸಿದ್ದಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 6 ಗಂಟೆಗೆ ಶುದ್ಧ ಹಸುವಿನ ತುಪ್ಪದೊಂದಿಗೆ ಎರಡು ಇಡ್ಲಿಗಳನ್ನುಮತ್ತು ಸ್ವಲ್ಪ ಹೆಸರು ಕಾಳು, ಹಾಲು ಮತ್ತು ಪಪ್ಪಾಯಿಗಳನ್ನು ಸೇವಿಸುತ್ತಾರೆ. ನಂತರ ತಮ್ಮ ಪೀಠದಲ್ಲಿ ಕುಳಿತು ಪತ್ರಿಕೆಗಳನ್ನು ಓದುತ್ತಾರೆ. ಅದರಲ್ಲೂ ಪ್ರಮುಖವಾಗಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯನ್ನು ತುರ್ತುಸಂದರ್ಭದಿಂದ ಓದಿಕೊಂಡು ಬರುತ್ತಿದ್ದಾರೆ. ಮಠಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಾರೆ. ನಂತರ ಪ್ರಮುಖ ಭಕ್ತರನ್ನು ಭೇಟಿ ಮಾಡುತ್ತಾರೆ.
ನಂತರ ಊಟದ ಸಭಾಂಗಣದ ಹೊರಗೆ ಭಕ್ತರನ್ನು ಭೇಟಿ ಮಾಡಲು ಗಂಟೆಗಟ್ಟಲೆ ಕುಳಿತಿರುತ್ತಾರೆ. ಮಧ್ಯಾಹ್ನ 12 ಗಂಟೆಗೆ ಅನ್ನ, ಸಾಂಬಾರ್ ಮತ್ತು ಹಣ್ಣಿನ ರಸ ಸೇವಿಸುತ್ತಾರೆ. ನಂತರ ರಾತ್ರಿ 9 ಗಂಟೆಗೆ ಹಸುವಿನ ತುಪ್ಪದೊಂದಿಗೆ ದೋಸೆ ತಿನ್ನುತ್ತಾರೆ ಜೊತೆಗೆ ಪಪ್ಪಾಯಿ ಮತ್ತು ಹಾಲು ಕುಡಿಯುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


