ಸ್ವಚ್ಛ ರೈಲ್ವೆ ನಿಲ್ದಾಣ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ರೈಲ್ವೆ ನಿಲ್ದಾಣ!
ವರ್ಷಕ್ಕೆ 50 ಕೋಟಿ ಆದಾಯ ತರುವ ಸಂಗೋಳಿ ರಾಯಣ್ಣ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ...

Published On :
ನವದೆಹಲಿ: ವರ್ಷಕ್ಕೆ 50 ಕೋಟಿ ಆದಾಯ ತರುವ ಸಂಗೋಳಿ ರಾಯಣ್ಣ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ.
ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೊಯಲ್ ಅವರು ಬಿಡುಗಡೆ ಮಾಡಿರುವ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ರೈಲ್ವೆ ನಿಲ್ದಾಣ 1 ಸ್ಥಾನ ಕುಸಿದು 11ನೇ ಸ್ಥಾನಕ್ಕೆ ಜಾರಿದೆ. ಎ1 ವರ್ಗದ ಬೆಂಗಳೂರು ರೈಲ್ವೆ ನಿಲ್ದಾಣ 2017ರಲ್ಲಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು.
ವಾರ್ಷಿಕವಾಗಿ 60 ಕೋಟಿ ರು. ಹಣ ಸಂಪಾದಿಸುವ ರೈಲ್ವೆ ನಿಲ್ದಾಣಗಳು ಎ1 ವರ್ಗಕ್ಕೆ ಸೇರುತ್ತವೆ. 8 ರಿಂದ 60 ಕೋಟಿ ರು. ವಾರ್ಷಿಕ ಹಣ ಸಂಪಾದಿಸುವ ರೈಲ್ವೆ ನಿಲ್ದಾಣಗಳು ಎ ಕ್ಯಾಟಗರಿಗೆ ಸೇರುತ್ತವೆ.
ದೇಶದ 407 ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ 11ನೇ ಸ್ವಚ್ಛ ರೈಲು ನಿಲ್ದಾಣ ಎಂಬ ಸ್ಥಾನ ಪಡೆದಿದ್ದು, ಎ1 ವರ್ಗದಲ್ಲಿ ಜೋದ್ ಪುರ ರೈಲ್ವೆ ನಿಲ್ದಾಣ ಪ್ರಥಮ ಸ್ಥಾನ ಪಡೆದಿದ್ದು ಎ ವರ್ಗದಲ್ಲಿ ಮನ್ವಾರ್ ರೈಲ್ವೆ ನಿಲ್ದಾಣ ಪ್ರಥಮ ಸ್ಥಾನ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruKrantiveera Sangolli Rayanna railway stationಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣCleanest Stationಸ್ವಚ್ಛ ರೈಲ್ವೆ ನಿಲ್ದಾಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


