ರಾಜ್ಯ

ಮನೆ ಬಾಡಿಗೆ ಕಟ್ಟಲು ಹನಿಟ್ರ್ಯಾಪ್: ಯುವತಿ ಸೇರಿ ಮೂವರ ಬಂಧನ

ಮನೆ ಬಾಡಿಗೆ ಕಟ್ಟಲಾಗದೇ ಹಣಕ್ಕಾಗಿ ತನ್ನ ಮೈಮಾಟದಿಂದ ಅಮಾಯಕರ ಸೆಳೆದು ಅವರಿಂದ ಹಣ, ಚಿನ್ನಾಭರಣಗಳನ್ನು ದೋಚುತ್ತಿದ್ದ ಯುವತಿ ಮತ್ತು ಆಕೆಯ ಖತರ್ನಾಕ್ ಗ್ಯಾಂಗ್ ವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮನೆ ಬಾಡಿಗೆ ಕಟ್ಟಲು ಹನಿಟ್ರ್ಯಾಪ್: ಯುವತಿ ಸೇರಿ ಮೂವರ ಬಂಧನ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಮನೆ ಬಾಡಿಗೆ ಕಟ್ಟಲಾಗದೇ ಹಣಕ್ಕಾಗಿ ತನ್ನ ಮೈಮಾಟದಿಂದ ಅಮಾಯಕರ ಸೆಳೆದು ಅವರಿಂದ ಹಣ, ಚಿನ್ನಾಭರಣಗಳನ್ನು ದೋಚುತ್ತಿದ್ದ ಯುವತಿ ಮತ್ತು ಆಕೆಯ ಖತರ್ನಾಕ್ ಗ್ಯಾಂಗ್ ವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಚಿಕ್ಕಬಾಣಾವರದ ಅರ್ಪಿತಾ (24 ವರ್ಷ), ಪವನ್ ಕುಮಾರ್ (25 ವರ್ಷ) ಮತ್ತು ಸಿದ್ದಾರ್ಥ (45 ವರ್ಷ) ಎಂದು ಗುರುತಿಸಲಾಗಿದೆ. ಈ ಪೈಕಿ ಸಿದ್ಧಾರ್ಥ ಆಟೋ ಚಾಲಕನಾಗಿದ್ದು, ಪವನ್ ವಾರ ಪತ್ರಿಕೆಯೊಂದರ ಅಪರಾಧ ವರದಿಗಾರನಾಗಿ ಕೆಲಸ ಮಾಡುತ್ತಿದ್ದನಂತೆ. ಆರೋಪಿಗಳು ಫೇಸ್​ಬುಕ್​ ನಲ್ಲಿ ಅರ್ಪಿತಾಳ ಡಿಫರೆಂಟ್ ಫೋಟೋವನ್ನು ಅಪ್‌ ಲೋಡ್‌ ಮಾಡಿ ಬಳಿಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ಸ್ನೇಹ ಬೆಳೆಸಿಕೊಂಡು ಮೊಬೈಲ್ ನಂಬರ್ ತೆಗೆದುಕೊಂಡು ಪರಿಚಯವಾದವರೊಂದಿಗೆ ಆರ್ಪಿತಾ 'ಆತ್ಮೀಯವಾಗಿ' ಸಮಯ ಕಳೆಯುತ್ತಿದ್ದರು.
ಇವೆಲ್ಲವನ್ನೂ ಪವನ್‌ ಎಂಬಾತ ಇವೆಲ್ಲವನ್ನೂ ಕದ್ದು ವಿಡಿಯೋ ಮಾಡುತ್ತಿದ್ದ. ಸ್ನೇಹಿತರೆಂದು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ ಅರ್ಪಿತಾ, ಅವರೊಂದಿಗೆ ಸಲುಗೆಯಿಂದ ಇರುತ್ತಿದ್ದಳು. ಇದೇ ವೇಳೆ ಪವನ್ ಮತ್ತು ಸಿದ್ಧಾರ್ಥ  ಪೊಲೀಸರು, ಮಾಧ್ಯಮದವರ ಸೋಗಿನಲ್ಲಿ ಬೆದರಿಕೆ ಒಡ್ಡಿ ಹಣ, ಚಿನ್ನಾಭರಣ ಕಸಿಯುತ್ತಿದ್ದರು.
ಹನಿಟ್ರ್ಯಾಪ್ ಅನ್ನೇ ಕಾಯಕ ಮಾಡಿಕೊಂಡಿದ್ದ ಅರ್ಪಿತಾ
ಇನ್ನು ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಯುವತಿ ಅರ್ಪಿತಾ, ತನ್ನ 17ನೇ ವಯಸ್ಸಿನಲ್ಲೇ ಸಂಬಂಧಿ ಯುವಕನನ್ನು ವಿವಾಹವಾಗಿದ್ದಳಂತೆ.  ಮೂರು ವರ್ಷಗಳ ಬಳಿಕ ಪತಿಯನ್ನು ತೊರೆದು ಬೆಂಗಳೂರಿಗೆ ಬಂದಳು. ಇಲ್ಲಿ ಆಕೆಗೆ ಪವನ್‌ ಜತೆ ಪ್ರೇಮಾಂಕುರವಾಗಿದ್ದು, ಇಬ್ಬರೂ ತಾವು ದಂಪತಿಗಳು ಎಂದು ಸುಳ್ಳುಹೇಳಿ ಒಂದೇ ಮನೆಯಲ್ಲಿ ನೆಲೆಸಿದ್ದರು. ಆದರೆ ಮನೆ ಬಾಡಿಗೆ ಮತ್ತು ಮುಂಗಡ ಪಾವತಿ ಹಣ ನೀಡಿರಲಿಲ್ಲ. ಮನೆಯ ಮಾಲೀಕರು ಈ ಬಗ್ಗೆ ಒತ್ತಾಯ ಮಾಡಿ ಕೇಳಿದಾಗ ಇಬ್ಬರೂ ಈ ದಂಧೆಗೆ ಇಳಿದಿದ್ದಾರೆ. ಸುಲಭವಾಗಿ ಹಣ ಗಳಿಸಲು ಹನಿಟ್ರ್ಯಾಪ್ ದಂಧೆಗೆ ಇಳಿದಿದ್ದರು.
ಚೆಂದದ ಯುವತಿಯ ಫೋಟೊವನ್ನು ಫೇಸ್‌ ಬುಕ್‌ ಪ್ರೊಫೈಲ್‌ ಗೆ ಹಾಕಿದ್ದ ಅರ್ಪಿತಾ, ಪರಿಚಯ ಇಲ್ಲದವರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಳು. ಆಕೆಯ ಸ್ನೇಹವನ್ನು ಒಪ್ಪಿಕೊಂಡರೆ, ಮೊಬೈಲ್ ಸಂಖ್ಯೆ ಪಡೆದು ಸಲುಗೆಯಿಂದ ಮಾತನಾಡಿಸುತ್ತಿದ್ದಳು. ಎರಡು ಮೂರು ಭೇಟಿಯ ಬಳಿಕ ಅವರನ್ನು ಮನೆಗೇ ಆಹ್ವಾನಿಸುತ್ತಿದ್ದಳು. ಈ ವೇಳೆ ಉಳಿದಿಬ್ಬರು ಪೊಲೀಸ್ ಹಾಗೂ ವರದಿಗಾರನ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದರು. ಈ ಗ್ಯಾಂಗ್ ಇದೇ ರೀತಿ ಐದು ಮಂದಿಯಿಂದ ಸುಲಿಗೆ ಮಾಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.