ಮೋಟಾರು ವಾಹನ ಮಸೂದೆ ವಿರುದ್ಧ ಸಾರಿಗೆ ಮುಷ್ಕರ: ನಗರದಲ್ಲಿ ಕೆಎಸ್'ಆರ್'ಟಿಸಿ, ಬಿಎಂಟಿಸಿ ಯಥಾಸ್ಥಿತಿ
ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಮಸೂದೆ-2017 ವಿರೋಧಿಸಿ ಮಂಗಳವಾರ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ದೇಶವ್ಯಾಪ್ತಿ ಮುಷ್ಕರ ಕರೆ ನೀಡಿದ್ದು, ಬೆಂಗಳೂರಿನಲ್ಲಿ ಸಾರಿಗೆಗೆ ಮುಷ್ಕರದ ಬಿಸಿ ತಟ್ಟಿಲ್ಲ...

Published On :
ಬೆಂಗಳೂರು: ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಮಸೂದೆ-2017 ವಿರೋಧಿಸಿ ಮಂಗಳವಾರ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ದೇಶವ್ಯಾಪ್ತಿ ಮುಷ್ಕರ ಕರೆ ನೀಡಿದ್ದು, ಬೆಂಗಳೂರಿನಲ್ಲಿ ಸಾರಿಗೆಗೆ ಮುಷ್ಕರದ ಬಿಸಿ ತಟ್ಟಿಲ್ಲ. ನಗರದಲ್ಲಿ ಬಿಎಂಟಿಸಿ, ಕೆಎಸ್ಆರ್'ಟಿಸಿ, ಮೆಟ್ರೋ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಸಾರಿಗೆ ಮುಷ್ಕರಕ್ಕೆ ವಾಹನ ಸಂಘಟನೆಗಳ ನಡುವೆಯೇ ಪರ ಹಾಗೂ ವಿರೋಧ ಅಭಿಪ್ರಾಯಗಳು ಇರುವುದರಿಂದ ಮುಷ್ಕರದ ಬಿಸಿ ಜನ ಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ.
ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳು ಇಂದು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ಜಾಥಾ ನಡೆಸಲಿದೆ. ಪ್ರತಿಭಟನೆಯಲ್ಲಿ ಕೆಲ ಸಾರಿಗೆ ಸಂಘಟನೆಗಳು, ಓಲಾ, ಉಬರ್ ಚಾಲಕರು ಹಾಗೂ ಮಾಲೀಕರು ಭಾಗಿಯಾಗಲಿದ್ದಾರೆ.
ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್, ಓಲಾ, ಟ್ಯಾಕ್ಸಿ ಫಾರ್ ಶೂರ್, ಉಬರ್ ಚಾಲಕರು ಮತ್ತು ಮಾಲೀಕರ ಸಂಘ, ಕೆಎಸ್'ಟಿಡಿಸಿ ಏರ್ ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಚಾಲಕರ ಸಂಘ, ಕರ್ನಾಟಕ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಪೀಸ್ ಆಟೋ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಹಾಗಾಗಿ ಆಟೋ ಹಾಗೂ ಟ್ಯಾಕ್ಸಿ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಮುಷ್ಕರನಿರತರ ಆಕ್ಷೇಪವೇನು?
ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಮಸೂದೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ರೂ.100ರಿಂದ ಕನಿಷ್ಠ ರೂ.500 ಹಾಗೂ ಗರಿಷ್ಠ 500, ಅತಿವೇಗಕ್ಕೆ ರೂ.400 ರಿಂದ ರೂ.1000, ನಿರ್ಲಕ್ಷ್ಯದ ಚಾಲನೆಗೆ ರೂ.1000 ರಿಂದ ರೂ.5000 ಹೆಚ್ಚಿಸಲಾಗಿದೆ. ಆ್ಯಂಬುಲೆನ್ಸ್'ಗೆ ದಾರಿ ಬಿಡದಿರುವುದಕ್ಕೆ ರೂ.10 ಸಾವಿರ ದಂಡ ಮತ್ತು 6 ತಿಂಗಳ ಜೈಲು ವಿಧಿಸಲಾಗುತ್ತದೆ. ವಿಮೆ ಇಲ್ಲದೆ ಚಾಲನೆಗೆ ರೂ.2 ಸಾವಿರ ದಂಡ ಮತ್ತು ಆರು ತಿಂಗಳ ಜೈಲು ವಿಧಿಸಲಾಗುತ್ತದೆ ಇದಕ್ಕೆ ಮುಷ್ಕರನಿರತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


