ರಾಜ್ಯ

ವಶಪಡಿಸಿಕೊಳ್ಳಲಾದ ನಗದು, ಆಭರಣ ಪ್ರಮಾಣ ಕಳೆದ ಬಾರಿಗಿಂತ ಮೂರು ಪಟ್ಟು ಹೆಚ್ಚಳ: ಚುನಾವಣಾ ಆಯೋಗ

ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗದಿಂದ ವಶಪಡಿಸಿಕೊಳ್ಳಲಾದ ಹಣ ಹಾಗೂ ಸ್ವತ್ತುಗಳ ಮೌಲ್ಯ ಮೂರು ಪಟ್ಟು ಹೆಚ್ಚಳವಾಗಿದೆ.

ವಶಪಡಿಸಿಕೊಳ್ಳಲಾದ ನಗದು, ಆಭರಣ ಪ್ರಮಾಣ ಕಳೆದ ಬಾರಿಗಿಂತ ಮೂರು ಪಟ್ಟು ಹೆಚ್ಚಳ: ಚುನಾವಣಾ ಆಯೋಗ
ಚುನಾವಣೆ ರಣಕಣದಲ್ಲಿ ವಶಪಡಿಸಿಕೊಳ್ಳಲಾದ ನಗದು, ಆಭರಣ ಪ್ರಮಾಣದಲ್ಲಿ ಮೂರು ಪಟ್ಟು ಹೆಚ್ಚಳ: ಆಯೋಗ
Published On :
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗದಿಂದ ವಶಪಡಿಸಿಕೊಳ್ಳಲಾದ ಹಣ ಹಾಗೂ ಸ್ವತ್ತುಗಳ ಮೌಲ್ಯ ಮೂರು ಪಟ್ಟು ಹೆಚ್ಚಳವಾಗಿದೆ. 
ಕಳೆದ ಬಾರಿಗೆ ಹೋಲಿಸಿದರೆ ನಗದು ಹಾಗೂ ಆಭರಣಗಳ ವಶದ ಪ್ರಮಾಣದಲ್ಲಿ ಸುಮಾರು 25 ಕೋಟಿ ರೂಪಾಯಿಗಳಷ್ಟು ಹೆಚ್ಚಳ ಉಂಟಾಗಿದೆ ಎಂದು ಚುನಾವಣಾ ಆಯೋಗ (ಇಸಿ) ಪ್ರಕಟಣೆಯಲ್ಲಿ ತಿಳಿಸಿದೆ.
"2013ರ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ 3.41 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗು 4.97 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿತ್ತು, ಈ ಬಾರಿ ಚುನಾವಣೆ ಪ್ರಚಾರ ಪ್ರಾರಂಭಗೊಂಡಂದಿನಿಂದ ಏಪ್ರಿಲ್ 30ರ ವರೆಗೆ ಒಟ್ಟು 19.69 ಕೋಟಿ ರೂ. ನಗದು ಹಾಗು 4.81 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ತೆರಿಗೆ ಇಲಾಖೆ ಸುಪರ್ದಿಗೆ ಪಡೆದುಕೊಂಡಿದೆ" ಇಸಿ ಹೇಳಿದೆ.
ಮೇ 12ರಂದು ಒಂದೇ ಹಂತದಲ್ಲಿ ನಡೆಯುವ ರಾಜ್ಯ ಚುನಾವಣೆಗೆ ಇನ್ನೂ ಒಂದು ವಾರಗಳ ಕಾಲ ಪ್ರಚಾರ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.