ಬಿಜೆಪಿ ಅಧಿಕಾರಕ್ಕೆ ಬಂದರೂ ಬಿಎಸ್ ವೈ 3 ತಿಂಗಳು ಕೂಡ ಸಿಎಂ ಆಗಿರೋದಿಲ್ಲ: ನಟ ಪ್ರಕಾಶ್ ರೈ
ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ, ಒಂದು ವೇಳೆ ಬಂದರೂ ಯಡಿಯೂರಪ್ಪ ಮೂರು ತಿಂಗಳು ಕೂಡ ಸಿಎಂ ಆಗಿ ಇರೋದಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

Published On :
ಉಡುಪಿ: ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ, ಒಂದು ವೇಳೆ ಬಂದರೂ ಯಡಿಯೂರಪ್ಪ ಮೂರು ತಿಂಗಳು ಕೂಡ ಸಿಎಂ ಆಗಿ ಇರೋದಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ನಡೆದ ‘ಜಸ್ಟ್ ಆಸ್ಕಿಂಗ್’ ಅಭಿಯಾನದ ಸಂವಾದ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದ ಪ್ರಕಾಶ್ ರೈ, ಬಿಜೆಪಿ ಮತ್ತು ಬಿಎಸ್ ವೈ ವಿರುದ್ಧ ತೀವ್ರ ಕಿಡಿಕಾರಿದರು. ಈ ವೇಳೆ ಮಾತನಾಡಿದ ಅವರು, 'ಬಿಜೆಪಿ ಮುಖಂಡರಿಗೆ ಶಾಂತಿಯುತವಾಗಿ ಚುನಾವಣೆ ನಡೆಸಿ ಅಭ್ಯಾಸ ಇಲ್ಲ, ಆದ್ದರಿಂದ ಇದೇ 12ರ ಮೊದಲು ಗಲಭೆ ಎಬ್ಬಿಸಿ ಜನರ ದಿಕ್ಕು ತಪ್ಪಿಸೋ ಸಾಧ್ಯತ ಇದೆ. ಈ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.
ಅಂತೆಯೇ 'ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಒಂದು ವೇಳೆ ಬಂದರೂ ಯಡಿಯೂರಪ್ಪ ಅವರು ಮೂರು ತಿಂಗಳು ಕೂಡ ಮುಖ್ಯಮಂತ್ರಿಯಾಗಿರುವುದಿಲ್ಲ. ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಏಕೆಂದರೆ ಮತ ಗಳಿಸುವ ಉದ್ದೇಶದಿಂದ ಮಾತ್ರ ಅವರನ್ನು ಮುಂದಿಟ್ಟುಕೊಂಡಿದ್ದಾರೆ. ಬಿಜೆಪಿಯ ಇಂತಹ ಆಟವನ್ನು ಈ ಹಿಂದೆ ಸಹ ಕರ್ನಾಟಕದ ಜನರು ನೋಡಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ತಮ್ಮ ಆಸೆ ತೀರಿಸಿಕೊಳ್ಳಲು ಮೂರು ಮಂದಿ ಮುಖ್ಯಮಂತ್ರಿಯಾಗಿದ್ದರು’ ಎಂದು ರೈ ವ್ಯಂಗ್ಯವಾಡಿದರು.
ಹೆಂಡತಿ ಬಗ್ಗೆ ಮಾತನಾಡಿದ್ರೆ ಪ್ರತಾಪ್ ಸಿಂಹ ಸುಮ್ನಿರ್ತಾರಾ?
ನಾನು ಹಿಂದೂ ವಿರೋಧಿಯಲ್ಲ.. ಯಾವ ಧರ್ಮದ ವಿರೋಧಿಯೂ ಅಲ್ಲ. ಧರ್ಮದ ಬೆಂಕಿ ಹಚ್ಚಬಾರದು. ದೀಪ ಉರಿಸಬೇಕು. ಧರ್ಮದ ಹೆಸರಲ್ಲಿ ಸರ್ಕಾರ ಕಟ್ಟಬೇಡಿ. ಸೆಕ್ಯೂಲರಿಸಂ ವಿದೇಶಿ ಸಂಸ್ಕೃತಿ. ಭಾರತದಲ್ಲಿ ಹಲವು ಧರ್ಮಗಳಿವೆ. ಭಾರತಕ್ಕೆ ಸೆಕ್ಯೂಲರಿಸಂ ಬೇಡ. ಜನರು ಸಹಿಷ್ಣುತೆಯಿಂದ ಇರಬೇಕು. ಬಿಜೆಪಿಯವರು ಹಿಂದೂ ಧರ್ಮದ ಗುತ್ತಿಗೆ ಪಡ್ಕೊಂಡಿದ್ದೀರಾ? ಸರ್ಕಾರ ರಚಿಸಿದ ಮೇಲೆ ಧರ್ಮ, ಜಾತಿ ಏಕೆ? ಬೆಂಕಿ ಹಚ್ಚುವ ಮಾತುಗಳೇಕೆ? ಎಂದು ಹೇಳಿದರು.
ನನ್ನನ್ನು ಪಾಕಿಸ್ತಾನಕ್ಕೆ ಯಾಕೆ, ಬೇರೆ ದೇಶಕ್ಕೆ ಕಳುಹಿಸಿ, ಪೆಟ್ರೋಲ್ ಇವರಪ್ಪನ ಬಾವಿಯಿಂದ ಬರುತ್ತಾ? ಪೆಟ್ರೋಲ್ ಅರಬ್ ದೇಶಗಳಿಂದ ಬರುತ್ತದೆ. ಜನಪ್ರತಿನಿಧಿಗಳನ್ನು ಮಾತನಾಡಲು ಬಿಡಿ. ಪ್ರಧಾನಿಯವರೇ ಯಾಕೆ ನಿಮ್ಮವರ ಬಾಯಿ ಮುಚ್ಚಿಸುತ್ತೀರಿ? ಎಂದು ರೈ ಪ್ರಶ್ನೆ ಮಾಡಿದರು. ಅಲ್ಲದೆ ಸಾಮಾಜಿಕ ಜಾಲತಾಣ ಚಾರಿತ್ರ್ಯ ಹರಣ ತಾಣವಾಗಿದೆ. ಅನಂತಕುಮಾರ್ ಹೆಗಡೆ ನಾಲಗೆ ತುದಿಯಲ್ಲಿ ಕೋಮುವಾದ ಇದೆ. ಪ್ರತಾಪ್ ಸಿಂಹನ ಹೆಂಡತಿ ಬಗ್ಗೆ ಮಾತನಾಡಿದ್ರೆ, ಸುಮ್ನಿರ್ತಾರಾ? ನನಗೆ ಯಾರ ಮಗ್ಗಲಲ್ಲಿ ಮಲಗಿ ಬಂದವರು ಅಂತ ಸಿಂಹ ಪ್ರಶ್ನೆ ಮಾಡಿದ್ದರು. ಪ್ರತಾಪ್ ಸಿಂಹನಿಗೆ ಸಂಸ್ಕೃತಿಯೇ ಗೊತ್ತಿಲ್ಲ ಎಂದು ಪ್ರಕಾಶ್ ರೈ ಕಿಡಿ ಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpKarnatakaಕರ್ನಾಟಕBS Yeddyurappaಪ್ರಕಾಶ್ ರೈಬಿಎಸ್ ಯಡಿಯೂರಪ್ಪಉಡುಪಿudupiprakash RaiJust Askingಜಸ್ಟ್ ಆಸ್ಕಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


