ರಾಜ್ಯ

ಬೆಂಗಳೂರು: ತಾಯಿಯ ಎದುರೇ ಅಣ್ಣನನ್ನು ಇರಿದು ಕೊಂದ ತಮ್ಮ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರನನ್ನು ತಾಯಿಯ ಎದುರೇ ಇರಿದು ಕೊಂದಿರುವ ಘಟನೆ ನಗರದ ಕರಿಯಪ್ಪನ ಪಾಳ್ಯದಲ್ಲಿ...

ಬೆಂಗಳೂರು: ತಾಯಿಯ ಎದುರೇ ಅಣ್ಣನನ್ನು ಇರಿದು ಕೊಂದ ತಮ್ಮ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರನನ್ನು ತಾಯಿಯ ಎದುರೇ ಇರಿದು ಕೊಂದಿರುವ ಘಟನೆ ನಗರದ ಕರಿಯಪ್ಪನ ಪಾಳ್ಯದಲ್ಲಿ ನಡೆದಿದೆ.
ರಾಯ್ಸನ್ ರಜಾರಿಯಾ (40) ಎಂಬಾತ ತನ್ನ ಸಹೋದರ ಆಸ್ಕರ್ ರಜಾರಿಯಾ (48) ನನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಲಿಂಗರಾಜಪುರ ಸಮೀಪದ ಕರಿಯಣ್ಣನಪಾಳ್ಯದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. 
ಆಂಧ್ರ ಪ್ರದೇಶ ಮೂಲದ ಇವರು ತಮ್ಮ 79 ವರ್ಷದ ತಾಯಿಯ ಜೊತೆ, ಕರಿಯಣ್ಣನಪಾಳ್ಯದಲ್ಲಿ ಇಬ್ಬರು ಪ್ಲಂಬರ್ ಕೆಲಸ ಮಾಡುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ರಾಯ್ಸನ್ ಅವರು ರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆಸ್ಕರ್, ಮನೆಗೆ ಬೀಗ ಹೊರಗೆ ಹೋಗಿದ್ದ. ತಾಯಿಯೊಂದಿಗೆ ಆಸ್ಪತ್ರೆಯಿಂದ ಮರಳಿದ ರಾಯ್ಸನ್, ಮನೆಗೆ ಬೀಗ ಹಾಕಿದ್ದರಿಂದ ಅಣ್ಣನಿಗೆ ಕರೆ ಮಾಡಿದ್ದರು. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. 
ಎಷ್ಟು ಹೊತ್ತು ಕಾದರೂ ಅಣ್ಣ ಬಾರದಿದ್ದಾಗ ಕುಪಿತಗೊಂಡ ರಾಯ್ಸನ್, ತಾಯಿಯನ್ನು ಮನೆ ಸಮೀಪದ ಕಟ್ಟೆ ಮೇಲೆ ಕೂರಿಸಿ ಸುತ್ತಮುತ್ತಲ ಪ್ರದೇಶಗಳಲ್ಲೆಲ್ಲ ಹುಡುಕಾಟ ನಡೆಸಿದ್ದರು. 
ಅದಾದ  ನಂತರ ಆಸ್ಕರ್ ಮೊಟ್ಟೆ ತೆಗೆದುಕೊಂಡು ಮನೆಗೆ ಬರುತ್ತಿದ್ದಂತೆಯೇ ರಾಯ್ಸನ್ ಗಲಾಟೆ ಶುರು ಮಾಡಿದ್ದಾನೆ. ಮೊಟ್ಟೆಗಳಿದ್ದ ಪೊಟ್ಟಣವನ್ನು ಕಿತ್ತೆಸಿದ್ದಾರೆ. ನಂತರ ಪರಸ್ಪರರ ನಡುವೆ ಗಲಾಟೆ ಜೋರಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಈ ವೇಳೆ ಆರೋಪಿಯು  ಅಡುಗೆ ಮನೆಯಿಂದ ಚಾಕು ತಂದು ಇರಿದಿದ್ದಾನೆ. ಕಿರುಚಾಟ ಕೇಳಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಶೀಲನೆ ನಡೆಸಿದ ವೈದ್ಯರು ಆತ ಮೃತ ಪಟ್ಟಿರುವುದಾಗಿ ಹೇಳಿದ್ದಾರೆ.  ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.