ರಾಜ್ಯ

ಬೆಂಗಳೂರು: ಅಪಹರಣಕ್ಕೀಡಾದ ಯುವಕನ ಹಣದ ಬೇಡಿಕೆಯ ವಿಡಿಯೊ ತಂದೆಗೆ ರವಾನೆ

ಆದಾಯ ತೆರಿಗೆ ಇಲಾಖೆ ಅಧಿಕಾರಿಯ 19 ವರ್ಷದ ಪುತ್ರನನ್ನು ಅಪಹರಿಸಿದ ಅಪಹರಣಕಾರರು ಹಣಕ್ಕಾಗಿ ಬೇಡಿಕೆಯಿಡುತ್ತಿರುವ.....

ಬೆಂಗಳೂರು: ಅಪಹರಣಕ್ಕೀಡಾದ ಯುವಕನ ಹಣದ ಬೇಡಿಕೆಯ ವಿಡಿಯೊ ತಂದೆಗೆ ರವಾನೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಯ 19 ವರ್ಷದ ಪುತ್ರನನ್ನು ಅಪಹರಿಸಿದ ಅಪಹರಣಕಾರರು ಹಣಕ್ಕಾಗಿ ಬೇಡಿಕೆಯಿಡುತ್ತಿರುವ ವಿಡಿಯೊ ಸಿಕ್ಕಿದೆ. ಈ ಬಗ್ಗೆ ಅಪಹರಣಕ್ಕೀಡಾದ ಶರತ್ ಎಂಬ ಯುವಕನ ಪೋಷಕರು ನೀಡಿದ ದೂರಿನ ಮೇರೆಗೆ ಅಪಹರಣಕಾರರನ್ನು ಹುಡುಕಿ ಶರತ್ ನನ್ನು ರಕ್ಷಿಸಲು ಪೊಲೀಸರ ನಾಲ್ವರು ತಂಡವನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ವಿಡಿಯೊದಲ್ಲಿ 50 ಲಕ್ಷ ರೂಪಾಯಿ ನೀಡಿದರೆ ನಿಮ್ಮ ಮಗನನ್ನು ಬಿಡುಗಡೆ ಮಾಡುವುದಾಗಿ ಅಪಹರಣಕಾರರು ಬೆದರಿಕೆಯೊಡ್ಡಿದ್ದಾರೆ. ಶರತ್ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್ ಕುಮಾರ್ ಅವರ ಮಗನಾಗಿದ್ದು ಹೆಸರಘಟ್ಟ ರಸ್ತೆಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಡಿಪ್ಲೊಮಾದಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾನೆ. ಇವರ ಕುಟುಂಬ ಉಳ್ಳಾಲ ಮುಖ್ಯ ರಸ್ತೆಯಲ್ಲಿ ವಾಸಿಸುತ್ತಿದೆ
ಶರತ್ ನ ಪೋಷಕರು ಇತ್ತೀಚೆಗೆ ಆತನಿಗೆ ಬೈಕ್ ಕೊಡಿಸಿದ್ದರು. ಮೊನ್ನೆ ಮಂಗಳವಾರ ಸಾಯಂಕಾಲ 6.30ರ ಹೊತ್ತಿಗೆ ತನ್ನ ಸ್ನೇಹಿತರಿಗೆ ಬೈಕ್ ತೋರಿಸಬೇಕೆಂದು ರಾಜರಾಜೇಶ್ವರಿ ನಗರಕ್ಕೆ ಹೋಗಿ ಬರುತ್ತೇನೆಂದು ಹೊರಟಿದ್ದ. ಅಲ್ಲಿಂದ ಆತ ಕಾಣೆಯಾಗಿದ್ದಾನೆ. 
ಪೊಲೀಸರು ಹೇಳುವ ಪ್ರಕಾರ ಶರತ್ ಆ ದಿನ ಸಂಜೆ ತನ್ನ ಸ್ನೇಹಿತರನ್ನು ಭೇಟಿ ಮಾಡಿರಲಿಲ್ಲ. ಬೈಕ್ ಹೊಸದಾಗಿದ್ದರಿಂದ ಇನ್ನೂ ದಾಖಲಾತಿಯಾಗಿರಲಿಲ್ಲ. ತಾತ್ಕಾಲಿಕ ದಾಖಲಾತಿ ಹೊಂದಿದ್ದ ಬೈಕ್ ನ್ನು ಇದೀಗ ಪೊಲೀಸರು ಹುಡುಕುತಿದ್ದಾರೆ. 
Story image
ಶರತ್ ಕಾಣೆಯಾದ ದಿನ ರಾತ್ರಿ 8.30ಕ್ಕೆ ಆತನ ಪೋಷಕರ ಮೊಬೈಲ್ ಗೆ  ನಿಮ್ಮ ಮಗನನ್ನು ಅಪಹರಿಸಿದ್ದು, ಹಣ ಕೊಟ್ಟರೆ ಬಿಡುತ್ತೇವೆ ಎಂಬ ವಾಟ್ಸಾಪ್ ಲ್ಲಿ ಬಂದಿತ್ತು. ವಿಡಿಯೊದಲ್ಲಿ ಶರತ್ ಮಾತನಾಡಿದ್ದು, ತನಗೆ ಅಪಹರಣಕಾರರು ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ಅವಲತ್ತುಕೊಂಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಆದರೆ ಪೊಲೀಸರು ಹೇಳುವ ಪ್ರಕಾರ ಶರತ್ ನ ಪೋಷಕರ ಮೊಬೈಲ್ ಗೆ ಆ ರೀತಿಯ ಸಂದೇಶ ಬಂದಿಲ್ಲ. ವಿಡಿಯೊವನ್ನು ಕಾರಿನೊಳಗೆ ರೆಕಾರ್ಡ್ ಮಾಡಿದ್ದು ಶರತ್ ಗೆ ಗಾಯಗಳಾದ ಯಾವುದೇ ಕುರುಹಗಳಿಲ್ಲ. ಜ್ಞಾನ ಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.