ಕಲ್ಯಾಣಿ ಡೆವಲಪರ್ಸ್ ಮೇಲೆ ಐಟಿ ದಾಳಿ
ಬೆಂಗಳೂರಿನ ಕಲ್ಯಾಣಿ ಡೆವಲಪರ್ಸ್ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Published On :
ಬೆಂಗಳೂರು: ಬೆಂಗಳೂರಿನ ಕಲ್ಯಾಣಿ ಡೆವಲಪರ್ಸ್ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿ, ಬನ್ನೇರುಘಟ್ಟ, ಚೆನ್ನೈ, ಹೈದರಾಬಾದ್ ಸೇರಿದಂತೆ ಏಕಕಾಲದಲ್ಲಿ 15 ಕಡೆ ದಾಳಿ ನಡೆದಿರುವುದಾಗಿ ಮಾದ್ಯಮ ವರದಿ ತಿಳಿಸಿದೆ.
ಕಲ್ಯಾಣಿ ಡೆವಲಪರ್ಸ್ ಸಂಸ್ಥೆಗಳ ಮೇಲೆ ದಾಳಿ ನಡೆಸಿ ದಾಖಲೆ, ಲೆಕ್ಕಪತ್ರ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಕಲ್ಯಾಣಿ ಡೆವಲಪರ್ಸ್ ಎ ಮೋಹನ್ ರಾಜು ಎಂಬವರಿಗೆ ಸೇರಿದ ಕಂಪನಿಯಾಗಿದ್ದು, 1991ರಿಂದ ಕಾರ್ಯ ನಿರ್ವಹಿಸುತ್ತಿದೆ. ಕಲ್ಯಾಣಿ ಪ್ಲಾಟಿನಾ, ಕಲ್ಯಾಣಿ ವಿಸ್ತಾ, ಕೃಷ್ಣ ಮ್ಯಾಗ್ನಮ್, ಕಲ್ಯಾಣಿ ಟವರ್ಸ್ ಹಾಗೂ ರಿಂಗ್ ರೋಡ್ ನಲ್ಲಿರುವ ಕಲ್ಯಾಣಿ ಟೆಕ್ ಪಾರ್ಕ್ ಸೇರಿದಂತೆ ಅಪಾರ ಆಸ್ತಿಗಳು ಈ ಸಂಸ್ಥೆಯ ಒಡೆತನದಲ್ಲಿ ಇದೆ. ಕಲ್ಯಾಣಿ ಮೋಟರ್ಸ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಮೋಹನ್ ರಾಜು ನಿರ್ದೇಶಕರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruIncome tax departmentಆದಾಯ ತೆರಿಗೆ ಇಲಾಖೆಐಟಿ ದಾಳಿIT rideKalyani developersಕಲ್ಯಾಣಿ ಡೆವಲಪರ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


