ಕನ್ನಡ ನಮ್ಮ ಅಸ್ಮಿತೆ, ಕನ್ನಡ ನಮ್ಮ ಅನನ್ಯತೆ, ಕನ್ನಡವೇ ನಮ್ಮ ಆದ್ಯತೆ: ಸಿದ್ದರಾಮಯ್ಯ
62ನೇ ಕನ್ನಡ ರಾಜ್ಯೋತ್ಸವ ಸಂಭ್ರಮದ ನಿಮಿತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಜನತೆಗೆ ಶುಭ ಕೋರಿದ್ದಾರೆ.

Published On :
ಬೆಂಗಳೂರು: 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮದ ನಿಮಿತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಜನತೆಗೆ ಶುಭ ಕೋರಿದ್ದಾರೆ.
ಟ್ವಿಟರ್ ನಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, "ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೆನ್ನುವುದು ನಮಗೆ ಬದುಕು-ಭಾವ ಮಾತ್ರವೇ ಅಲ್ಲ, ಭವ್ಯ ಭವಿತವ್ಯದ ಹೆದ್ದಾರಿ ಕೂಡ ಎಂದು ಹೇಳಿದ್ದಾರೆ. ಅಂತೆಯೇ "ಕನ್ನಡತನದ ಧೀಮಂತ ಆದರ್ಶವೇ ನಮ್ಮ ಅಭಿವೃದ್ಧಿ ಮಾದರಿಯ ಹಿಂದಿನ ಪ್ರೇರಣೆಯಾಗಿದ್ದು, ಕನ್ನಡತನದ ಕೇಂದ್ರದಲ್ಲಿ ವಿಶ್ವಮಾನವತ್ವವಿದೆ, ಕನ್ನಡ ವಿಶ್ವಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಕನ್ನಡ ನಮ್ಮ ಅಸ್ಮಿತೆ, ಕನ್ನಡ ನಮ್ಮ ಅನನ್ಯತೆ, ಕನ್ನಡವೇ ನಮ್ಮ ಆದ್ಯತೆ. ಪ್ರೀತಿಯ ಕನ್ನಡಿಗರಿಗೆ 62ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಕರ್ನಾಟಕ ರಾಜ್ಯವು ಪ್ರತ್ಯೇಕ ಧ್ವಜ ಹೊಂದಲು ಇರುವ ಕಾನೂನಾತ್ಮಕ ಅವಕಾಶಗಳನ್ನು ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruTwitterSiddaramaiahಸಿದ್ದರಾಮಯ್ಯKarnatakaಕರ್ನಾಟಕಟ್ವಿಟರ್kannada rajyotsava-2017ಕನ್ನಡ ರಾಜ್ಯೋತ್ಸವ-2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


