ರಾಜ್ಯ

ಬೆಂಗಳೂರು: ಹಲಸೂರು ಎಸಿಪಿ ವಿರುದ್ಧ ಸುಲಿಗೆ, ಚಿತ್ರಹಿಂಸೆ ನೀಡಿದ ಆರೋಪ, ತನಿಖೆಗೆ ಆದೇಶ

ಹಲಸೂರು ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರ ವಿರುದ್ಧ ಸುಲಿಗೆ ಹಾಗೂ ಚಿತ್ರಹಿಂಸೆ ನೀಡಿದ ಆರೋಪದ ಕೇಳಿ ಬಂದಿದ್ದು,...

ಬೆಂಗಳೂರು: ಹಲಸೂರು ಎಸಿಪಿ ವಿರುದ್ಧ ಸುಲಿಗೆ, ಚಿತ್ರಹಿಂಸೆ ನೀಡಿದ ಆರೋಪ, ತನಿಖೆಗೆ ಆದೇಶ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಹಲಸೂರು ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರ ವಿರುದ್ಧ ಸುಲಿಗೆ ಹಾಗೂ ಚಿತ್ರಹಿಂಸೆ ನೀಡಿದ ಆರೋಪದ ಕೇಳಿ ಬಂದಿದ್ದು, ಅವರ ವಿರುದ್ಧ ಉಪ ಪೊಲೀಸ್ ಆಯುಕ್ತ(ಡಿಸಿಪಿ)ರ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಆದೇಶಿಸಿಲಾಗಿದೆ.
ಹಲಸೂರು ಎಸಿಪಿ ಮೊಹಮ್ಮದ್ ಸಜ್ಜದ್ ಖಾನ್ ಅವರು ತನಗೆ 15 ಲಕ್ಷ ರುಪಾಯಿ ಲಂಚಕ್ಕೆ ಒತ್ತಾಯಿಸಿದ್ದಲ್ಲದೆ, ಚಿತ್ರ ಹಿಂಸೆ ನೀಡಿರುವುದಾಗಿ ವಂಚನೆ ಪ್ರಕರಣದ ಆರೋಪ ದೂರಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಡಿಸಿಪಿ ಅಜಯ್ ಹಿಲೋರಿ ಅವರಿಗೆ ಸೂಚಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮುರಗೇಶಪಾಳ್ಯದ ಸೂಪರ್ ಮಾರ್ಕೆಟ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಿ ನಜೀರ್ ಅವರು 15 ಲಕ್ಷ ರುಪಾಯಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಸ್ಟೋರ್ ಮಾಲೀಕ ನಾಜೀರ್ ಅವರು ಜೀವನಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಕೃತ್ಯದ ಬಳಿಕ ನಜೀರ್‌ ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಅವರು ಕೇರಳಕ್ಕೆ ವಾಪಸ್‌ ಬಂದಿದ್ದು ಗೊತ್ತಾಗಿ ಎಸಿಪಿ ಮೊಹಮ್ಮದ್ ಸಜ್ಜದ್ ಖಾನ್ ಅವರು ಆರೋಪಿ ಕರೆತರಲು ಸಿಬ್ಬಂದಿಯನ್ನು ಕಳುಹಿಸಿದ್ದರು.
ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಹೇಳಿಕೆ ಪಡೆದು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹಲಸೂರು ಉಪವಿಭಾಗದ ಎಸಿಪಿ ತಂಡದ ಪೊಲೀಸರು, ಒತ್ತಾಯದಿಂದ ನನ್ನನ್ನು ನಗರಕ್ಕೆ ಕರೆತಂದಿದ್ದರು. ಬೈಯಪ್ಪನಹಳ್ಳಿ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟು, ಎಸಿಪಿ ಬಳಿ ಕರೆದೊಯ್ದಿದ್ದರು. ಈ ವೇಳೆ ಎಸಿಪಿ, ‘ನಜೀರ್ ಅವರಿಗೆ 15 ಲಕ್ಷ ರುಪಾಯಿ ವಂಚಿಸಿದ್ದಿಯಾ. ಆ ಹಣ ವಾಪಸ್‌ ಕೊಟ್ಟು ಸಂಧಾನ ಮಾಡಿಕೊ ಎಂದಿದ್ದರು. ಪೊಲೀಸರು ಏಕಾಏಕಿ ಮನೆಯಿಂದ ನನ್ನನ್ನು ಕರೆದುಕೊಂಡು ಬಂದಿದ್ದರಿಂದ, ಮಗಳ ಮದುವೆ ರದ್ದಾಗಿದೆ. ಎಂದು ನಜೀರ್ ಪೂರ್ವ ವಿಭಾಗದ ಡಿಸಿಪಿ ಅಜಯ್‌ ಹಿಲ್ಲೋರಿ ಅವರಿಗೆ ಶುಕ್ರವಾರ ದೂರು ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.