ವಿಧಾನಸಭಾ ಚುನಾವಣೆಗೆ ಭಾರೀ ಸಿದ್ಧತೆ: ಬಿಜೆಪಿಯಿಂದ 7 ಸಾವಿರ ವಾಟ್ಸ್'ಅಪ್ ಗ್ರೂಪ್ ಬಳಕೆ
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಭಾರೀ ಸಿದ್ಧತೆಗಳನ್ನು ನಡೆಸುತ್ತಿರುವ ಬಿಜೆಪಿ ನಾಯಕರು, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷವನ್ನು ಭದ್ರಪಡಿಸುತ್ತಿದ್ದಾರೆ. ಇದರಂತೆ 7,000 ವಾಟ್ಸ್'ಅಪ್ ಗ್ರೂಪ್ ಬಳಕೆ ಮಾಡುತ್ತಿರುವ ಬಿಜೆಪಿ...

Published On :
ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಭಾರೀ ಸಿದ್ಧತೆಗಳನ್ನು ನಡೆಸುತ್ತಿರುವ ಬಿಜೆಪಿ ನಾಯಕರು, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷವನ್ನು ಭದ್ರಪಡಿಸುತ್ತಿದ್ದಾರೆ. ಇದರಂತೆ 7,000 ವಾಟ್ಸ್'ಅಪ್ ಗ್ರೂಪ್ ಬಳಕೆ ಮಾಡುತ್ತಿರುವ ಬಿಜೆಪಿ, ಪ್ರತೀಯೊಬ್ಬ ನಾಗರೀಕರ ಮತವನ್ನು ಸೆಳೆಯಲು ಯತ್ನಿಸುತ್ತಿದೆ.
ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿ, ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಅಮಿತ್ ಶಾ ಭೇಟಿ ಬಳಿಕ ಪಕ್ಷದ ಐಟಿ ಸೆಲ್ ಈಗಾಗಲೇ 7,000 ವಾಟ್ಸ್ ಅಪ್ ಗ್ರೂಪ್ ಗಳನ್ನು ತೆರಿದಿದ್ದು, ಗ್ಪೂಪ್ ನ ಅಡ್ಮಿನ್ ಗಳು ಪಕ್ಷ ಕುರಿತ ಮಾಹಿತಿಗಳನ್ನು ರವಾಸುತ್ತಿದ್ದಾರೆ.
ಸಂದೇಶಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣ, ಬಿಜೆಪಿ ನಾಯಕರ ಆಡಿಯೋ ಕ್ಲಿಪ್ಸ್ ಗಳು ನಾಗರಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಾಗೂ ತರಲಿರುವ ಯೋಜನೆಗಳು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಕಳುಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ಸಾಮಾಜಿಕ ಜಾಲತಾಣ ಸೆಲ್ ಸಂಚಾಲಕ ಬಾಲಾಜಿ ಶ್ರೀನಿವಾಸ್ ಅವರು, ಚುನಾವಣೆ ಹಿನ್ನಲೆಯಲ್ಲಿ 7,000 ವಾಟ್ಸ್ ಅಪ್ ಗ್ರೂಪ್ ಗಳನ್ನು ತೆರೆಯಲಾಗಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಇದು ಸಾಕಷ್ಟು ಕೆಲಸವನ್ನು ಮಾಡಿತ್ತು. ಇದೇ ತಂತ್ರವನ್ನು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಯೂ ಬಳಕೆ ಮಾಡಲಾಗಿತ್ತು. ಇದೀಗ ಕರ್ನಾಟಕದಲ್ಲೂ ಬಳಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಪಕ್ಷ ಹಾಗೂ ಸರ್ಕಾರದ ಯೋಜನೆಗಳ ಕುರಿತಂತೆ ಜನರು ಮಾಹಿತಿ ತಿಳಿದುಕೊಳ್ಳಲು ಇಚ್ಛಿಸುತ್ತಾರೆಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದಲ್ಲಿರುವ ನಾಯಕರು ಸಂದೇಶಗಳನ್ನು ರವಾನಿಸುತ್ತಿರುತ್ತಾರೆ. ಈ ಸಂದೇಶವನ್ನೇ ವಾಟ್ಸ್ ಅಪ್ ಗ್ರೂಪ್ ನಲ್ಲೂ ಹಂಚಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ 10,000 ವಾಟ್ಸ್ ಅಪ್ ಗ್ರೂಪ್ ಗಳನ್ನು ತೆರಯಲಾಗುತ್ತದೆ. ಗ್ರೂಪ್ ಗಳಲ್ಲಿ ಸಾಕಷ್ಟು ಜನರು ಸೇರ್ಪಡೆಗೊಳ್ಳುತ್ತಾರೆ. ಪ್ರತೀಯೊಂದು ಗ್ರೂಮ್ ನಲ್ಲೂ ಗರಿಷ್ಠ 250 ಜನರಿರುತ್ತಾರೆ. ಒಂದೊಂದು ಗ್ರೂಪ್ ನಲ್ಲೂ 200 ಜನರಿದ್ದರೂ 1.4 ಲಕ್ಷ ಜನರಿಗೆ ನಮ್ಮ ಸಂದೇಶಗಳು ತಲುಪಲಿವೆ ಎಂದಿ ತಿಳಿಸಿದ್ದಾರೆ.
ರಾಜಕೀಯ ಶಾಸ್ತ್ರ ಪ್ರೊ. ಸಂದೀಪ್ ಶಾಸ್ತ್ರಿಯವರು ಮಾತನಾಡಿ, ಸಾರ್ವಜನಿಕರನ್ನು ತಲುಪಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ವಾಟ್ಸ್ ಅಪ್ ಮೂಲಕ ಜನರನ್ನು ತಲುಪಲು ಬಿಜೆಪಿಯ ಯತ್ನ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


