ರಾಜ್ಯ

ಬೆಂಗಳೂರು: ಅಮೆರಿಕನ್ ನರ್ಸ್, ಆರ್ ಬಿ ಐ ಅಧಿಕಾರಿ ಹೆಸರಲ್ಲಿ ಟೆಕಿಗೆ 4.70 ಲಕ್ಷ ರೂ. ವಂಚನೆ

ಅಮೆರಿಕದ ನರ್ಸ್, ಆರ್‍ಬಿಐ ಆಫೀಸರ್, ಕಸ್ಟಮ್ಸ್ ಅಧಿಕಾರಿ ಹೀಗೆ ನಾನಾ ಹೆಸರಿನಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಒಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.

ಬೆಂಗಳೂರು: ಅಮೆರಿಕನ್ ನರ್ಸ್, ಆರ್ ಬಿ ಐ ಅಧಿಕಾರಿ ಹೆಸರಲ್ಲಿ ಟೆಕಿಗೆ 4.70 ಲಕ್ಷ ರೂ. ವಂಚನೆ
ಬೆಂಗಳೂರು: ಅಮೆರಿಕನ್ ನರ್ಸ್, ಆರ್ ಬಿ ಐ ಅಧಿಕಾರಿ ಹೆಸರಲ್ಲಿ ಟೆಕಿಗೆ 4.70 ಲಕ್ಷ ರೂ. ವಂಚನೆ
Published On :
ಬೆಂಗಳೂರು: ಅಮೆರಿಕದ ನರ್ಸ್, ಆರ್‍ಬಿಐ ಆಫೀಸರ್, ಕಸ್ಟಮ್ಸ್ ಅಧಿಕಾರಿ ಹೀಗೆ ನಾನಾ ಹೆಸರಿನಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ಒಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ. 
ನೆಲಮಂಗಲದ ಎಂ.ರಮೇಶ್ ಎನ್ನುವ  ಸಾಫ್ಟ್ ವೇರ್ ಉದ್ಯೋಗಿಯ ಸಂಪರ್ಕಕ್ಕೆ ಬಂದ ಆನ್ ಲೈನ್ ವಂಚಕರು ಒಡವೆಗಳಿರುವ ಪಾರ್ಸಲ್ ತಲುಪಿಸುವುದಾಗಿ ಹೇಳಿ ಅವರಿಂದ  4.70 ಲಕ್ಷ ರೂ. ಪಡೆದು ವಂಚನೆ ನಡೆಸಿರುವ ಪ್ರಕರಣ ಬೆಂಗಳುರು ಅಶೋಕ ನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರಮೇಶ್ ಅವರು ಬೆಂಗಲುರಿನ ರಾಜರಾಜೇಶ್ವರಿನಗರದ ಕಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿದ್ದು ಮೂರು ತಿಂಗಳ ಹಿಂದೆ ರಚನಾ ಕರಂ ವೈದ್ಯ ಎನ್ನುವವರು ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿದ್ದರು. 
ಆ ಬಳಿಕ ಇಬ್ಬರೂ ತಮ್ಮ ಮೊಬೈಲ್ ಸಂಖ್ಯೆಯನ್ನು  ಹಂಚಿಕೊಂಡಿದ್ದರಲ್ಲದೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದಾರೆ.ಆ ವೇಳೆ ವಂಚಕಿ ತಾನು ಅಮೆರಿಕದಲ್ಲಿ ನರ್ಸ್ ಆಗಿರುವುದಾಗಿ ಹೇಳಿಕೊಂಡಿದ್ದು "ನಾನು ಬೆಂಗಲೂರಿಗೆ ಬರುತ್ತೇನೆ, ನನಗೆ ಬೆಂಗಳೂರಿನ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ನೋದಬೇಕಿದೆ. ಅದಕ್ಕೆ ನನ್ನೊಂದಿಗೆ ನೀವೂ ಬರಬೇಕು, ನನಗೆ ಉಳಿದುಕೊಳ್ಳಲು ಒಂದು ಕೋಣೆ ಬೇಕು." ಎಂದಿದ್ದಾರೆ. ಅದಕ್ಕೆ ಸಾಕಷ್ಟು ಹಣ ನನ್ನ ಬಳಿಯಲ್ಲಿಲ್ಲ ಎಂದ ರಮೇಶ್ ಗೆ ಆಕೆ "ನಿಮಗೆ ನಾನು ಅಮೆರಿಕನ್ ಡಾಲರ್ ಗಳು ಹಾಗೂ ಚಿನ್ನಾಭರಣಗಳನ್ನು ಕಳಿಸುತ್ತೇನೆ. ಆ ಡಾಲರ್ ಗಳನ್ನು ರೂಪಾಯಿಗೆ ಬದಲಿಸಿಕೊಳ್ಳಿ" ಎಂದಿದ್ದರ್ಳು.ರಮೇಶ್ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು.
ಇದಾದ ನಂತರದಲ್ಲಿ ದೆಹಲಿ ಕಸ್ಟಂಸ್ ಅಧಿಕಾರಿಯೆಂದು ಹೇಳಿ ನಿಶಾಕುಮಾರಿ ಎನ್ನುವ ಹೆಸರಿನಲ್ಲಿ ರಮೇಶ್ ಗೆ ಕರೆ ಬಂದಿತ್ತು. ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ, "ನೀವು 38 ಸಾವಿರ ರೂ. ಅನ್ನು  ಕಸ್ಟಮ್ಸ್‌ ಶುಲ್ಕವಾಗಿ ಅಧಿಕಾರಿ ಸುಮನ್ ದೇವಿ ಅವರ ಎಸ್‌ಬಿಐ ಖಾತೆಗೆ ವರ್ಗಾಯಿಸಿ. ಆಗ ನಾವು ಈ ಪಾರ್ಸಲ್ ನ್ನು ನಿಮ್ಮ ವಿಳಾಸಕ್ಕೆ ತಲುಪಿಸುತ್ತೇವೆ" ಎಂದು ಕರೆಯಲ್ಲಿ ತಿಳಿಸಿದ ವಂಚಕರು ರಮೇಶ್ ಅವರಿಂದ ಸರ್ವಿಸ್ ಕ್ಲಿಯರೆನ್ಸ್ ಹೆಸರಿನಲ್ಲಿ 1,62 ಲಕ್ಷ ಪಡೆದಿದ್ದಾರೆ.
ಇಷ್ಟಾದರೂ ಪಾರ್ಸಲ್ ಕೈ ಸೇರಲಿಲ್ಲ. ಬದಲಿಗೆ ಮತ್ತೆ ಕರೆ ಮಾಡಿದ್ದ ವಂಚಕರು "ಪಾರ್ಸಲ್ ತೂಕ ಹೆಚ್ಚಾಗಿದ್ದು ನಿಲ್ದಾಣದಿಂದ ಅದನ್ನು ಸಾಗಿಸಲು  ಟ್ಯಾಕ್ಸ್‌ ಕೋಡ್ ಬೇಕಿದೆ. ಅದಕ್ಕಾಗಿ 2.70 ಲಕ್ಷ ಕಳುಹಿಸಿ" ಎಂದಿದ್ದರು. ರಮೇಶ್ ಅಷ್ಟೂ ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು.
ಇಷ್ಟಕ್ಕೂ ಪಾರ್ಸಲ್ ಬರಲಿಲ್ಲ, ಬದಲಿಗೆ ಆರ್ ಬಿ ಐ ಅಧಿಕಾರಿ ಎಂದು ಹೇಳಿ ಇನ್ನೊಂದು ಕರೆ ಬಂದಿತ್ತು. "ನೀವು ವಿವಿಧ ಖಾತೆಗಳಿಗೆ ವರ್ಗಾಯಿಸಿರುವ ಹಣ ಜಮಾ ಆಗಿಲ್ಲ, ಪುನಃ 4.70 ಲಕ್ಷ ರೂ. ವರ್ಗಾಯಿಸಿ" ಎಂದಾಗ ರಮೇಶ್ ತಾಳ್ಮೆ ಕಳೆದುಕೊಂಡಿದ್ದರು. ರಮೇಶ್ ದೂರವಾಣಿಯಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡಾಗ ಎದುರಿನ ವ್ಯಕ್ತಿ ಕರೆ ನಿಷ್ಕ್ರಿಯಗೊಳಿಸಿದ್ದಾರ್ರೆ.
ಇದಾದ ಬಳಿಕ ರಮೇಶ್ ಆರ್ ಬಿ ಐ ಕಛೇರಿಗೆ ತೆರಳಿ ಈ ಕುರಿತು ವಿಚಾರಿಸಿದಾಗಲೇ ತಾನು ವಂಚನೆಗೆ ಒಳಗಾಗಿರುವ ವಿವರ ತಿಳಿದಿದೆ. ತಕ್ಷಣವೇ ಅವರು ಅಶೋಕನಗರ ಪೋಲೀಸರಿಗೆ ಈ ಸಂಬಂಧ ದೂರು ದಾಖಲಿಸಿದ್ದಾರೆ. ಇದೀಗ ಸೈಬರ್ ಕ್ರೈಂ ಪೋಲೀಸರು ವಂಚಕರ ಬೇಟೆಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.