ಬಿಬಿಎಂಪಿ ಲೆಕ್ಕಪರಿಶೋಧನೆ ವೇಳೆ 3,000ಕ್ಕೂ ಹೆಚ್ಚು ತಪ್ಪು ಲೆಕ್ಕ, ಇನ್ನೂ ಬಹಿರಂಗವಾಗದ ಆಡಿಟ್ ವರದಿ
ಬಿಎಂಪಿ ಅದರ ಖಾತೆಗಳ ಲೆಕ್ಕಪರಿಶೋಧನೆಗಳನ್ನು ನಡೆಸುತ್ತಿರುವ ಸಮಯದಲ್ಲಿ 3,000ಕ್ಕೂ ಹೆಚ್ಚು ಸಂಖ್ಯೆಯ ಅಕ್ರಮ ನಡೆದಿರುವುದು ಕಂಡುಬಂದಿದ್ದು ......

Published On :
ಬೆಂಗಳೂರು: ಬಿಬಿಎಂಪಿ ಅದರ ಖಾತೆಗಳ ಲೆಕ್ಕಪರಿಶೋಧನೆಗಳನ್ನು ನಡೆಸುತ್ತಿರುವ ಸಮಯದಲ್ಲಿ 3,000ಕ್ಕೂ ಹೆಚ್ಚು ಸಂಖ್ಯೆಯ ಅಕ್ರಮ ನಡೆದಿರುವುದು ಕಂಡುಬಂದಿದ್ದು ಇಷ್ಟಾಗಿಯೂ ನಾಗರಿಕರು ಆರ್ ಟಿ ಐ ಅರ್ಜಿ ಸಲ್ಲಿಸಿದ್ದರೂ ಯಾವುದೇ ಆಡಿಟ್ ವರದಿಗಳನ್ನು ಪಡೆದುಕೊಳ್ಳಲು ಸಾದ್ಯವಾಗಿಲ್ಲ. ಬಿಬಿಎಂಪಿ ಲೆಕ್ಕ ಪರಿಶೋಧನೆ ನಡೆಯುತ್ತಿದ್ದ ವೇಳೆ ಸುಮಾರು 3,000ದಷ್ಟು ಅಕ್ರಮ ಲೆಕ್ಕಾಚಾರ ನಡೆದಿರುವುದು ಕಂಡು ಬಂದಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಈ ರೀತಿ ಅಕ್ರಮ ಲೆಕ್ಕ ನೀಡಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುವುದಾಗಿ ಅಧಿಕಾರ್ ಹೇಳಿದ್ದಾರೆ.
ಸಿಟಿಜನ್ ಆಕ್ಷನ್ ಫೋರಮ್ 2014 ರಿಂದ ಕನಿಷ್ಠ ಮೂರು ಬಾರಿ ಆಡಿಟ್ ವರದಿಗಳನ್ನು ಪಡೆಯಲು ಪ್ರಯತ್ನಗಳನ್ನು ಮಾಡಿದೆ, ಆದರೆ ಇದುವರೆಗೂ ಯಾವುದೇ ವರದಿಯನ್ನು ಪಡೆದುಕೊಳ್ಳಲಾಗಿಲ್ಲ. ಫೋರಂನ ಸದಸ್ಯರಾದ ಡಾ.ಡಿ.ಎಸ್. ರಾಜಶೇಖರ್ ತಿಳಿಸುವಂತೆ, "ಪ್ರತಿ ಬಾರಿ ಅವರು ವರದಿಯನ್ನು ಕೇಳಿದ್ದಾರೆ, ಆರ್ ಟಿ ಐ ಗಳ ಮೂಲಕ ಸಹ ನಾವು ಮಂಜುನಾಥ್ ಪ್ರಸಾದ್ ಸೇರಿದಂತೆ ಅನೇಕ ಕಮಿಷನರ್ಗಳನ್ನು ನಾವು ಸಂಪರ್ಕಿಸಿದ್ದೇವೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಲ್ಲವೂ ಸರಿಯಾಗಿದೆ ಅವರು ನಮಗೆ ಭರವಸೆ ನೀಡುತ್ತಾರೆ"ಎಂದು ಅವರು ಹೇಳಿದರು.
ಈ ಸಂಬಂಧ ನಮ್ಮ ಬೆಂಗಳೂರು ಫೌಂಡೇಷನ್ - ಎನ್ ಜಿಓ 2015ರಲ್ಲಿ ಪಿ ಐ ಎಲ್ ಸಲ್ಲಿಸಿದ್ದು ಆಡಿಟ್ ವರದಿಗಳನ್ನು ಪ್ರಕಟಿಸಿಲ್ಲದಿರುವುದನ್ನು ಪ್ರಶ್ನಿಸಿದೆ. ಎನ್ ಜಿ ಓ ನ ಜನರಲ್ ಮ್ಯಾನೇಜರ್ ಸುರೇಶ್ ಎನ್ ಆರ್, ಈ ಪ್ರಕರಣದ ಕಡೆಯ ವಿಚಾರಣೆ ಮೇಯಲ್ಲಿ ನಡೆದಿದ್ದು ಅದರಿಂದೀಚೆಗೆ ವಿಚಾರಣೆ ನಡೆದೇ ಇಲ್ಲ ಎಂದಿದ್ದಾರೆ. ಮಾಜಿ ಬಿಬಿಎಂಪಿ ಕೌನ್ಸಿಲರ್ ಆದ ಎನ್.ಆರ್. ರಮೇಶ್ ಹೇಳಿದಂತೆ ಅಕ್ರಮಗಳನ್ನು ಮುಚ್ಚಿ ಹಾಕುವ ಸಲುವಾಗಿ 2016 ರಿಂದ ಈಚೆಗೆ ಯಾವ ಆಡಿಟ್ ವರದಿಗಳನ್ನೂ ಪ್ರಕಟಿಸಲಾಗಿಲ್ಲ.
ಬಿಬಿಎಂಪಿ ಜಂಟಿ ಕಮೀಷನರ್ (ಹಣಕಾಸು) ವೆಂಕಟೇಶ್ ಬಿಬಿಎಂಪಿ ಖಾತೆಗಳ ವಾರ್ಷಿಕ ಆಡಿಟ್ ಗಳನ್ನು ಹಲವಾರು ವರ್ಷಗಳಿಂದಲೂ ಪ್ರಕಟಿಸಲಾಗಿಉಲ್ಲ. ಆದರೆ ಬಿಬಿಎಂಪಿ ಯಲ್ಲಿ ಅನೇಕ ಇಲಾಖೆಗಳ ಲೆಕ್ಕ ಪರಿಶೋಧನೆ ಮತ್ತು ಇಲಾಕಾವಾರು ಲೆಕ್ಕಪರಿಶೋಧನೆಗಳು - ಕಲ್ಯಾಣ, ಶಿಕ್ಷಣ, ಆರೋಗ್ಯ ಇತ್ಯಾದಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಹಾಗಿದ್ದರೂ, ಯಾವುದೇ ಸಂಘಟಿತ ವರದಿ ತಯಾರಿಸಲಾಗಿಲ್ಲ. "ಆಡಿಟ್ ಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ದೇಶನಗಳನ್ನು ಜಾರಿಗೊಳಿಸಿದೆ. ಆಡಿಟ್ ಪ್ರಕಟವಾದ ಕೂಡಲೇ, ವೆಬ್ ಸೈಟ್ ಗಳಲ್ಲಿ ಅಪ್ ಮಾಡಲಾಗಿದೆ ಎಂದು ನಾನು ಖಚಿತಪಡಿಸುತ್ತೇನೆ "ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BBMPಬಿಬಿಎಂಪಿRTIಆರ್ ಟಿ ಐaudit reportಆಡಿಟ್ ವರದಿCitizens Action ForumNamma Bengaluru Foundation (NBF)ಸಿಟಿಜನ್ ಆಕ್ಷನ್ ಫೋರಮ್ನಮ್ಮ ಬೆಂಗಳೂರು ಫೌಂಡೇಶನ್ (ಎನ್ ಬಿ ಎಫ್)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


