ಬೆಂಗಳೂರು ವಿಪ್ರೋ ಕಂಪನಿಗೆ ಬೆದರಿಕೆ ಈ -ಮೇಲ್: ಹೆಚ್ಚಿದ ಭದ್ರತೆ
ಐಟಿ ದಿಗ್ಗಜ ವಿಪ್ರೋ ಸಂಸ್ಥೆಗೆ ಇ-ಮೇಲ್ ಮೂಲಕ ಸಂಸ್ಥೆಯ ಬೆದರಿಕೆ ಹಾಕಿ 500 ಕೋಟಿ ರುಪಾಯಿಗೆ ಬೇಡಿಕೆಯಿಟ್ಟಿದ್ದ ಹಿನ್ನೆಲೆಯಲ್ಲಿ ವಿಪ್ರೋ ಕಂಪನಿಗೆ ಭದ್ರತೆ ..

Published On :
ಬೆಂಗಳೂರು: ಐಟಿ ದಿಗ್ಗಜ ವಿಪ್ರೋ ಸಂಸ್ಥೆಗೆ ಇ-ಮೇಲ್ ಮೂಲಕ ಸಂಸ್ಥೆಯ ಬೆದರಿಕೆ ಹಾಕಿ 500 ಕೋಟಿ ರುಪಾಯಿಗೆ ಬೇಡಿಕೆಯಿಟ್ಟಿದ್ದ ಹಿನ್ನೆಲೆಯಲ್ಲಿ ವಿಪ್ರೋ ಕಂಪನಿಗೆ ಭದ್ರತೆ ಹೆಚ್ಚಿಸಲಾಗಿದೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಸಂಸ್ಥೆ ವಿಪ್ರೋ ಕ್ಯಾಂಪಸ್ ಗಹೆಚ್ಚಿನ ಭದ್ರತೆ ಒದಗಿಸಿದೆ. ವಿಪ್ರೋ ಕಂಪನಿ ಅನಾಮಧೇಯ ಈ-ಮೇಲ್ ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿಲಾಗಿದ್ದು, ಕಂಪನಿಯ ಎಲ್ಲಾ ಸ್ಥಳಗಳಿಗೂ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ವಿಪ್ರೋ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಸರ್ಜಾಪುರದಲ್ಲಿರುವ ವಿಪ್ರೋ ಕಂಪನಿಗೆ ಬೆದರಿಕೆ ಈ-ಮೇಲ್ ಬಂದಿದ್ದು, ಸ್ಥಳೀಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Ramesh2@protonmail.com ಮೇಲ್ ಐಡಿಯಿಂದ ಬೆದರಿಕೆ ಮೇಲ್ ಬಂದಿದ್ದು, ಈಗಾಗಲೇ ಒಂದು ಕೆ.ಜಿ. ವಿಷಕಾರಿ ರಿಸಿನ್ ಸಂಗ್ರಹಿಸಲಾಗಿದೆ ಮತ್ತು ಈ ಮೇಲ್ ನಕಲಿ ಅಲ್ಲ ಎಂದು ತೋರಿಸುವುದಕ್ಕಾಗಿ ವಿಪ್ರೋ ಕಚೇರಿ ಇಬ್ಬರು ಸಿಬ್ಬಂದಿಗೆ ಎರಡು ಗ್ರಾಂ ನಷ್ಟು ಎನ್ವೆಲೊಪ್ ಮೂಲಕ ಕಳುಹಿಸಲಾಗುತ್ತಿದೆ ಎಂದು ಮೇಲ್ ನಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆ ಆರಂಭಿಸಿದ್ದು, ಐಪಿ ಅಡ್ರೆಸ್ ಪತ್ತೆ ಹಚ್ಚಿದ್ದೇವೆ, ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುವವರು ಅಥವಾ ಕಂಪನಿ ಮಾಜಿ ಉದ್ಯೋಗಿಗಳು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಡಿಸಿಪಿ ಆನಂದ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


