ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿ: ಕೆಂಡಾಮಂಡಲಗೊಂಡು ವಾಹನಕ್ಕೆ ಬೆಂಕಿ ಇಟ್ಟ ಟೆಕ್ಕಿ
ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿಗೊಂಡ ಟೆಕ್ಕಿಯೊಬ್ಬ ಕೆಂಡಾಮಂಡಲಗೊಂಡು ವಾಹನಕ್ಕೇ ಬೆಂಕಿ ಇಟ್ಟಿರುವ ಘಟನೆಯೊಂದು ನಡೆದಿದೆ...

Published On :
ಬೆಂಗಳೂರು: ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿಗೊಂಡ ಟೆಕ್ಕಿಯೊಬ್ಬ ಕೆಂಡಾಮಂಡಲಗೊಂಡು ವಾಹನಕ್ಕೇ ಬೆಂಕಿ ಇಟ್ಟಿರುವ ಘಟನೆಯೊಂದು ನಡೆದಿದೆ.
ಅಂಕುಶ್ (27) ಬೈಕ್ ಗೆ ಬೆಂಕಿ ಇಟ್ಟ ಆರೋಪಿಯಾಗಿದ್ದು, ಜೆ.ಪಿ.ನಗರದಲ್ಲಿರುವ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ಮಾದಕ ವ್ಯಸನಿಯಾಗಿರುವ ಆರೋಪಿ ಈ ಹಿಂದೆ ಕೂಡ ಹಲವು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ.
ಮಾರ್ಚ್ 24 ರಂದು ತನ್ನ ರಾಯಲ್ ಎನ್ಫೀಲ್ಡ್ ಬೈಕ್''ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ಹೇಳಿ ಆಂಧ್ರಪ್ರದೇಶ ಮೂಲಕ ಜಯಕುಮಾರ್ ಎಂಬುವವರು ಪೊಲೀಸ್ ಠಾಅಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ತನಿಖೆಗೆ ಮುಂದಾಗಿದ್ದ ಪೊಲೀಸರು ಜಯಕುಮಾರ್ ಇದ್ದ ಆಪಾರ್ಟ್ ಮೆಂಟ್'ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಂಕುಶ್ ಸಿಕ್ಕಿಬಿದ್ದಿದ್ದಾನೆ.
ವಿಚಾರಣೆ ವೇಳೆ ಅಂಕುಳ್ ಹೇಳಿಕೆ ನೀಡಿದ್ದು, ಬುಲೆಟ್ ಬೈಕ್ ಗಳ ಶಬ್ಧ ನನ್ನ ನಿದ್ರೆಯನ್ನು ಹಾಳು ಮಾಡುತ್ತಿತ್ತು. ಶಬ್ಧದಿಂದ ಕಿರಿಕಿರಿಯಾಗುತ್ತಿತ್ತು. ಹೀಗಾಗಿ ಬೈಕ್ ಗೆ ಬೆಂಕಿ ಹಚ್ಚಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ಈ ಹಿಂದೆ ಕೂಡ ಹಲವು ಬೈಕ್ ಗಳಿಗೆ ಅಂಕುಶ್ ಬೆಂಕಿ ಹಚ್ಚಿದ್ದಾನೆ. ಆಪಾರ್ಟ್ ಮೆಂಟ್ ಮಾಲೀಕರ ವಾಹನಗಳ ಮೇಲೂ ಕಲ್ಲುತೂರಾಟ ನಡೆಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


