ಪ್ರತೀ ಬಂಧನದ ನಂತರ ಜಾಮೀನಿನ ಮೇಲೆ ಹೊರ ಬರುತ್ತಿದ್ದ 'ರೇಪಿಸ್ಟ್' ರೆಡ್ಡಿ!
ಒಂಟಿ ಮಹಿಳೆಯರಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ರೇಪಿಸ್ಟ್ ರೆಡ್ಡಿ ಕುರಿತಂತೆ ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಿದ್ದು, ಪ್ರತೀ ಬಾರಿ ಪೊಲೀಸರು ಬಂಧನಕ್ಕೊಳಪಡಿಸಿದ ಬಳಿಕ ಜಾಮೀನಿನ ಮೇಲೆ ಹೊರಬರುತ್ತಿದ್ದ ಎಂದು ತಿಳಿದುಬಂದಿದೆ...

Published On :
ಬೆಂಗಳೂರು: ಒಂಟಿ ಮಹಿಳೆಯರಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ರೇಪಿಸ್ಟ್ ರೆಡ್ಡಿ ಕುರಿತಂತೆ ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಿದ್ದು, ಪ್ರತೀ ಬಾರಿ ಪೊಲೀಸರು ಬಂಧನಕ್ಕೊಳಪಡಿಸಿದ ಬಳಿಕ ಜಾಮೀನಿನ ಮೇಲೆ ಹೊರಬರುತ್ತಿದ್ದ ಎಂದು ತಿಳಿದುಬಂದಿದೆ.
ಮಹಿಳೆಯೊಬ್ಬರನ್ನು ಗುರಿ ಮಾಡಿಕೊಂಡು ಮಹಿಳಾ ಹಾಸ್ಟೆಲ್ ವೊಂದಕ್ಕೆ ನುಗ್ಗಲು ಯತ್ನಿಸುತ್ತಿದ್ದ ರೇಪಿಸ್ಟ್ ರೆಡ್ಡಿಯನ್ನು ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದರು. ವೃತ್ತಿಯಲ್ಲಿ ಮೂಲತಃ ಕ್ಯಾಬ್ ಚಾಲಕನಾಗಿರುವ ಈ ರೆಡ್ಡಿ ಈ ವರೆಗೂ ಕನಿಷ್ಟ 12 ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಅತ್ಯಾಚಾರ ಆರೋಪಗಳು ಕೇಳಿ ಬಂದ ನಂತರ ಪ್ರತೀ ಬಾರಿ ಪೊಲೀಸರು ಬಂಧನಕ್ಕೊಳಪಡಿಸಿದಾಗಲೂ ಆರೋಪಿ ಮಾತ್ರ ಜಾಮೀನಿನ ಮೇಲೆ ಹೊರಬಂದು ಮತ್ತದೇ ಕೃತ್ಯಗಳನ್ನು ಎಸಗುತ್ತಿದ್ದ. ಸಾಕಷ್ಟು ಬಾರಿ ಅಪರಾಧ ಕೃತ್ಯಗಳನ್ನು ಎಸಗಿದ್ದರೂ, ರೆಡ್ಡಿ ಈ ವರೆಗೂ ಜೈಲುವಾಸ ಅನುಭವಿಸಿರುವುದು ಮಾತ್ರ ಕೇವಲ 18 ತಿಂಗಳು.
ಪ್ರಕರಣ ಕುರಿತಂತೆ ಮಾತನಾಡಿರುವ ಹಿರಿಯ ವಕೀಲ ಎಂ.ಟಿ. ನಾಣಯ್ಯ ಅವರು, ಅತ್ಯಾಚಾರಿಗೆ ಜಾಮೀನು ನೀಡಬಾರದೆಂದು ಕೋರಿ ದಾಖಲೆ ಸಮೇತ ಪೊಲೀಸರು ನ್ಯಾಯಾಲಯದ ಬಳಿ ಮನವಿ ಮಾಡಬಹುದಿತ್ತು. ಆದರೆ, ಪೊಲೀಸರು ಇದರಲ್ಲಿ ವಿಫಲರಾಗಿದ್ದಾರೆಂದು ಹೇಳಿದ್ದಾರೆ.
ಮಾಜಿ ಡಿಜಿ ಮತ್ತು ಐಜಿಪಿ ಎಸ್.ಟಿ. ರಮೇಶ್ ಮಾತನಾಡಿ, ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆರೋಪಿ ವಿರುದ್ಧ ಗೂಂಡಾ ಕಾಯ್ತೆಯನ್ನು ದಾಖಲಿಸಿದ್ದಾರೆ. ಆರೋಪಿಯನ್ನು ದೀರ್ಘಕಾಲಿಕವಾಗಿ ಜೈಲಿನಲ್ಲಿರಿಸಲು ಸಾಧ್ಯವಿಲ್ಲ. ಗೂಂಡಾ ಕಾಯ್ದೆಯಡಿಯಲ್ಲಿಯೂ ಆರೋಪಿಗಳಿಗೆ ಕೆಲವೊಮ್ಮೆ ಜಾಮೀನು ಪಡೆಯುವ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ರೇಪಿಸ್ಟ್ ರೆಡ್ಡಿಯನ್ನು 2012ರಲ್ಲಿ ಬನ್ನೇರುಘಟ್ಟದಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಗೆ ಹಾಗೂ ಆಕೆಯ ಗೆಳಯನಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಂಧನಕ್ಕೊಳಪಡಿಸಲಾಗಿದ್ದು. ಬಂಧನಕ್ಕೊಳಗಾದ ಕೇವಲ ಕೆಲವೇ ದಿನಗಳಲ್ಲಿ ರೆಡ್ಡಿ ಜೈಲಿನಿಂದ ಹೊರಬಂದಿದ್ದ. ಆಡುಗೋಡಿಯಲ್ಲಿ ನಡೆ ಅತ್ಯಾಚಾರ ಪ್ರಕರಣದಲ್ಲೂ ಈತನನ್ನು ಪೊಲೀಸರು ಬಂಧನಕ್ಕೊಳಪಡಿಸಲಾಗಿತ್ತು. ಆದರೆ, ಈ ವೇಳೆ ಪೊಲೀಸರು ಈತನ ಬಗ್ಗೆ ಪರಿಶೀಲನೆ ನಡೆಸುವಲ್ಲಿ ಪೊಲೀಸು ವಿಫಲರಾಗಿದ್ದರು.
ಸಾಕಷ್ಟು ಪ್ರಕರಣಗಳಲ್ಲಿ ರೆಡ್ಡಿ ಭಾಗಿಯಾಗಿದ್ದು, ದೌರ್ಜನ್ಯಕ್ಕೊಳಗಾದ ಎಷ್ಟೋ ಮಹಿಳೆಯರು ಮುಂದೆ ಬಂದು ದೂರು ದಾಖಲಿಸಿಲ್ಲ. ಪ್ರತೀ ಬಾರಿ ಪ್ರಕರಣ ದಾಖಲಾದರೂ ಆರೋಪಿನ್ನು ಬಂಧನಕ್ಕೊಳಪಡಿಸಿ ಜೈಲಿಗೆ ಕಳುಹಿಸಲಾಗುತ್ತಿತ್ತು. ನಂತರ ಚಾರ್ಜ್ ಶೀಟ್ ಸಲ್ಲಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಸುಂದರ ಮಹಿಳೆಯರೇ ಈತನ ಗುರಿ
ಸುಂದರ ಮಹಿಳೆಯರನ್ನೇ 'ರೇಪಿಸ್ಟ್ ರೆಡ್ಡಿ' ಗುರಿ ಮಾಡುತ್ತಿದ್ದ. ಈತನ ಕುಕೃತ್ಯಗಳು 16 ಮಹಿಳಾ ಹಾಸ್ಟೆಲ್ ಗಳಲ್ಲಿ ದಾಖಲಾಗಿದೆ. ವಿಚಾರಣೆ ವೇಳೆ ಕೆಲ ಸತ್ಯಗಳನ್ನು ರೆಡ್ಡಿ ಒಪ್ಪಿಕೊಂಡಿದ್ದು, ತಡರಾತ್ರಿ ಮಹಿಳಾ ಹಾಸ್ಟೆಲ್ ಗಳಿಗೆ ನುಗ್ಗುತ್ತಿದ್ದ ಈತ ಕೇವಲ ಸುಂದರ ಮಹಿಳೆಯರ ಮೇಲಷ್ಟೇ ಅತ್ಯಾಚಾರ ಮಾಡುತ್ತಿದ್ದ ಎಂದು ಆರೋಪಿ ಹೇಳಿಕೊಂಡಿದ್ದಾನೆ.
5 ಪ್ರಕರಣಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ಆರೋಪಿ ಕಳ್ಳತನ ಮಾಡಿದ್ದಾನೆ. ವಸ್ತುಗಳನ್ನು ಕಳ್ಳತನ ಮಾಡಿದ ನಂತರ ಮಹಿಳೆಯರಿಗೆ ನೀವು ಚೆನ್ನಾಗಿಲ್ಲ ಹೀಗಾಗಿ ಸುಮ್ಮನೆ ಹೋಗುತ್ತಿದ್ದೇನೆಂದು ಹೇಳಿ ಹೋಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


