ಡಿಸೆಂಬರ್ ವೇಳೆಗೆ ಎರಡು ಮೆಟ್ರೊ ರೈಲುಗಳಲ್ಲಿ 6 ಬೋಗಿ, ಮಹಿಳಾ ಬೋಗಿ ಸೇರ್ಪಡೆ ಸಾಧ್ಯತೆ!
ಈ ವರ್ಷದ ಅಂತ್ಯಕ್ಕೆ 50 ಮೆಟ್ರೊ ರೈಲುಗಳ ಎರಡು ರೈಲುಗಳಲ್ಲಿ 6 ಬೋಗಿಗಳನ್ನು...

Published On :
ಬೆಂಗಳೂರು: ಈ ವರ್ಷದ ಅಂತ್ಯಕ್ಕೆ 50 ಮೆಟ್ರೊ ರೈಲುಗಳ ಎರಡು ರೈಲುಗಳಲ್ಲಿ 6 ಬೋಗಿಗಳನ್ನು ಜೋಡಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕ್ಹರೊಲಾ ತಿಳಿಸಿದ್ದಾರೆ. ಮುಂದಿನ ಮಾರ್ಚ್ ತಿಂಗಳ ಬಳಿಕ ಇತರ ಮೆಟ್ರೊ ರೈಲುಗಳಿಗೆ ಆರು ಬೋಗಿಗಳನ್ನು ಜೋಡಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕೆಂಪೇಗೌಡ ಮೆಟ್ರೊ ಸ್ಟೇಷನ್ ನ ಉತ್ತರ-ದಕ್ಷಿಣ ಕಾರಿಡಾರ್ ನ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಕ್ಹರೊಲಾ ಮಾತನಾಡಿ,ಮೆಟ್ರೊದ ಹಲವು ಬಿಡಿ ಭಾಗಗಳನ್ನು ಒಟ್ಟು ಸೇರಿಸಿ ಕನಿಷ್ಠ 6 ಬೋಗಿಗಳನ್ನು ಸದ್ಯ ಎರಡು ರೈಲುಗಳಿಗೆ ಜೋಡಿಸಲಾಗುವುದು ಎಂದು ಹೇಳಿದರು.
ಆರು ಬೋಗಿಗಳನ್ನು ಹೊಂದಿದ ರೈಲಿನಲ್ಲಿ ಮಹಿಳೆಯರ ಬೋಗಿಗಳ ಸೌಲಭ್ಯಗಳನ್ನು ನೀಡಲಾಗುವುದು. ಮುಂದಿನ ವರ್ಷ ಮಾರ್ಚ್ ಬಳಿಕ ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್(ಬಿಇಎಂಎಲ್) ಬೋಗಿಗಳನ್ನು ಪ್ರತಿ ತಿಂಗಳು ಹಂತ ಹಂತವಾಗಿ ಪೂರೈಸಲಿದ್ದು ರೈಲುಗಳನ್ನು ಹೆಚ್ಚಿಸಲಾಗುವುದು. 2018ರ ಮಧ್ಯದ ವೇಳೆಗೆ ಎಲ್ಲಾ ರೈಲುಗಳಲ್ಲಿ 6 ಬೋಗಿಗಳಿರುತ್ತವೆ ಎಂದು ವಿವರಿಸಿದರು.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಇತ್ತೀಚೆಗೆ 1,421 ಕೋಟಿ ರೂಪಾಯಿಗಳ ಒಪ್ಪಂದವನ್ನು ಬಿಇಎಂಎಲ್ ಜೊತೆಗೆ ಮಾಡಿಕೊಂಡಿದೆ. ಅದು ಮೆಟ್ರೊಗೆ 150 ಬೋಗಿಗಳನ್ನು ಪೂರೈಸಲಿದೆ. ಪ್ರಸ್ತುತ ಮೆಟ್ರೊ ರೈಲಿನಲ್ಲಿ 975 ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಇನ್ನಷ್ಟು ಬೋಗಿಗಳನ್ನು ಸೇರ್ಪಡೆ ಮಾಡಿದರೆ ಪ್ರಯಾಣಿಕರ ಸಂಖ್ಯೆ ಪ್ರತಿ ರೈಲಿನಲ್ಲಿ ಸುಮಾರು 2 ಸಾವಿರವಾಗಬಹುದು.
ಕೆಂಪೇಗೌಡ ಮೆಟ್ರೊ ನಿಲ್ದಾಣವನ್ನ ತಪಾಸಣೆ ಮಾಡಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಅಗತ್ಯವಿದ್ದರೆ ಮೆಟ್ರೊ ಅವಧಿಯನ್ನು ವಿಸ್ತರಿಸಲಾಗುವುದು. ನಮ್ಮ ಮೆಟ್ರೊದ ಸೇವೆಗಳು ಪರ್ಪಲ್ ಮಾರ್ಗ ಮತ್ತು ಗ್ರೀನ್ ಮಾರ್ಗ ಎರಡರಲ್ಲಿಯೂ ಓಡಾಡುತ್ತಿದ್ದು ಸಾರ್ವಜನಿಕ ಪ್ರೋತ್ಸಾಹದ ಮೂಲಕ ಒಂದನೇ ಹಂತಕ್ಕೆ ವಿಸ್ತರಿಸಲಾಗುವುದು. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ನಡುವಿನ ಪರ್ಪಲ್ ಲೈನ್ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಓಡಾಡುತ್ತದೆ. ಗ್ರೀನ್ ಮಾರ್ಗ ಮಂತ್ರಿ ಸ್ಕ್ವೈರ್ ನಿಂದ ಸಂಪಿಗೆ ರಸ್ತೆ ಮತ್ತು ನಾಗಸಂದ್ರದ ಮಧ್ಯೆ ಉತ್ತರ ಕಾರಿಡಾರ್ ನಲ್ಲಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಓಡಾಡುತ್ತದೆ.
ಮರಗಳನ್ನು ಕಡಿಯುವುದರ ಅಗತ್ಯತೆಯನ್ನು ಸಮರ್ಥಿಸಿಕೊಂಡ ಸಚಿವರು, ದೊಡ್ಡ, ದೊಡ್ಡ ಯೋಜನೆಗಳು ಬರುವಾಗ ಕೆಲವು ಸಮಸ್ಯೆಗಳು ಬರುವುದು ಸಹಜ. ಕೆಲವು ಮರಗಳನ್ನು ಕಡಿಯಬೇಕಾಗಬಹುದು. ಆದರೆ ಪ್ರತಿ ಮರ ಕಡಿದಾಗ ಅದಕ್ಕೆ ನಾವು 10 ಗಿಡಗಳನ್ನು ನೆಡುತ್ತೇವೆ. ಮೊದಲ ಹಂತದ ನಂತರ ಎರಡನೇ ಹಂತ ಪ್ರಾರಂಭಿಸಲಾಗುವುದು.
ಕೆ.ಆರ್.ಪುರಂ-ಸಿಲ್ಕ್ ಬೋರ್ಡ್ ಮಾರ್ಗಕ್ಕೆ ಹಣ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಮೆಟ್ರೊ ಸೇವೆಯಲ್ಲಿನ ವ್ಯತ್ಯಯಕ್ಕೆ ಕಾರಣ ನೀಡಿದ ಅವರು, ಭಾರೀ ಮಳೆಗೆ ಕೇಬಲ್ ತುಂಡಾದ ಕಾರಣ ಮೆಟ್ರೊ ಸೇವೆಯಲ್ಲಿ ವ್ಯತ್ಯಯವುಂಟಾಯಿತು ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


