ರಾಜ್ಯ

ಪತ್ನಿಯ ಕೊಂದು ಆತ್ಮಹತ್ಯೆ ಕತೆ ಕಟ್ಟಿದ್ದ ಮಾಜಿ ಇನ್ಫೋಸಿಸ್ ಟೆಕ್ಕಿಗೆ ಜೀವಾವಧಿ ಶಿಕ್ಷೆ!

ಪತ್ನಿಯನ್ನು ತಾನೇ ಕೊಂದು ಅದನ್ನು ಆತ್ಮಹತ್ಯೆ ಎಂದು ನಂಬಿಸಲು ಹೋಗಿ ಸಿಕ್ಕಿ ಬಿದಿದ್ದ ಮಾಜಿ ಇನ್ಫೋಸಿಸ್ ಟೆಕಿಗೆ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಪತ್ನಿಯ ಕೊಂದು ಆತ್ಮಹತ್ಯೆ ಕತೆ ಕಟ್ಟಿದ್ದ ಮಾಜಿ ಇನ್ಫೋಸಿಸ್ ಟೆಕ್ಕಿಗೆ ಜೀವಾವಧಿ ಶಿಕ್ಷೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಪತ್ನಿಯನ್ನು ತಾನೇ ಕೊಂದು ಅದನ್ನು ಆತ್ಮಹತ್ಯೆ ಎಂದು ನಂಬಿಸಲು ಹೋಗಿ ಸಿಕ್ಕಿ ಬಿದಿದ್ದ ಮಾಜಿ ಇನ್ಫೋಸಿಸ್ ಟೆಕಿಗೆ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ನಗರದ ಹೊರವಲಯದಲ್ಲಿರುವ ಹುಳಿಮಾವು ಬಳಿ ಏಳು ವರ್ಷಗಳ ಹಿಂದೆ ಅಂದರೆ 2010ರ ಆಗಸ್ಟ್ 8ರಂದು ನಡೆದಿದ್ದ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯ ನಿನ್ನೆ ತೀರ್ಪು ನೀಡಿದ್ದು, ಪತಿ ಸತೀಶ್ ನನ್ನು ದೋಷಿ ಎಂದು  ತೀರ್ಪು ನೀಡಿತ್ತು. ಅಲ್ಲದೆ ಈ ಪ್ರಕರಣದ ಅಪರಾಧಿ ಸತೀಶ್ ಇಂದು ನ್ಯಾಯಾಲಯ ಶಿಕ್ಷೆ ಪ್ರಮಾಣ ವಿಧಿಸಿದ್ದು, ಪತ್ನಿ ಕೊಂದ ಸತೀಶ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ?
ನಗರದ ಹೊರವಲಯದಲ್ಲಿರುವ ಹುಳಿಮಾವು ಬಳಿಯ ಮನೆಯಲ್ಲಿ  2010ರ ಆಗಸ್ಟ್ 8ರಂದು ಮಹಿಳೆಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಪ್ರಿಯಾಂಕ ಗುಪ್ತಾ ಎಂದು ಗುರುತಿಸಲಾಗಿತ್ತು. ಪ್ರಿಯಾಂಕ  ಗುಪ್ತಾಳ ಪತಿ ಸತೀಶ್ ತನ್ನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಎಲ್ಲರನ್ನೂ ನಂಬಿಸಿದ್ದ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೂಲಂಕುಷವಾಗಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ಪತಿ ಸತೀಶ್ ಮೇಲೆ ಅನುಮಾನ  ಹುಟ್ಟಿತ್ತು. ಅದರಂತೆ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ, ಪತ್ನಿ ಶೀಲದ ಮೇಲೆ ಅನುಮಾನ ಪಟ್ಟು ಆಕೆಯನ್ನು ಕೊಂದಿರುವುದಾಗಿ ಹೇಳಿಕೆ ನೀಡಿದ್ದ,

ಅಂತೆಯೇ ಯಾರಿಗೂ ಅನುಮಾನ ಬಾರದಿರಲು ಎಂಬ ಕಾರಣಕ್ಕೆ ಪತ್ನಿಯನ್ನು ವಿಭಿನ್ನವಾಗಿ ಪ್ರೀತಿ ಮಾಡುವ ನೆಪದಲ್ಲಿ ಆಕೆಯ ಕೈಕಾಲು ಕಟ್ಟಿ ನೈಲಾನ್ ದಾರದಲ್ಲಿ ಪ್ರಿಯಾಂಕಳನ್ನು ಪತಿ ಸತೀಶ್ ಕುಮಾರ್ ಕೊಲೆ ಮಾಡಿದ್ದ.  ಹತ್ಯೆಯ ಬಳಿಕ ವಾಯುವಿಹಾರಕ್ಕೆ ಹೋಗಿಬಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಎಲ್ಲರನ್ನೂ ನಂಬಿಸಿದ್ದ.

ಬಳಿಕ ಅನುಮಾನದಿಂದ ಪತಿ ಸತೀಶನನ್ನು ಬಂಧಿಸಿದ ಪೊಲೀಸರು, ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೊಪ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಪ್ರಕರಣದ ತೀರ್ಪು ನೀಡಿದ್ದು, ಆರೋಪಿ ಸತೀಶ್ ಗೆ  ಜೀವಾವಧಿ ಶಿಕ್ಷೆ ವಿಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.