ರಾಜ್ಯ

ಯುವಕನ ಸೆಲ್ಫಿ ಹುಚ್ಚು: ಕುಡಿದ ಮತ್ತಿನಲ್ಲಿ ಪೊಲೀಸ್ ಬೈಕ್ ಕದ್ದು ಜಾಲಿ ರೈಡ್!

ಕುಡಿದ ಮತ್ತಿನಲ್ಲಿ ಅಪರಿಚಿತ ಯುವಕನೊಬ್ಬ ಸಂಚಾರಿ ಪೊಲೀಸ್ ಕ್ಯಾಪ್ ಕಸಿದುಕೊಂಡು ಇಲಾಖೆಯ ಕೋಬ್ರಾ ಬೈಕ್ ಓಡಿಸಿ ಹುಚ್ಚಾಟ ಪ್ರದರ್ಶಿಸಿರುವ ಘಟನೆ ಭಾನುವಾರ ಸಂಜೆ ನಡೆಸಿದೆ...

ಯುವಕನ ಸೆಲ್ಫಿ ಹುಚ್ಚು: ಕುಡಿದ ಮತ್ತಿನಲ್ಲಿ ಪೊಲೀಸ್ ಬೈಕ್ ಕದ್ದು ಜಾಲಿ ರೈಡ್!
ಪೊಲೀಸ್ ಬೈಕ್ ನಲ್ಲಿ ಜಾಲಿ ರೈಡ್ ಮಾಡುತ್ತಿರುವ ವ್ಯಕ್ತಿ
Published On :
ಹಾಸನ: ಕುಡಿದ ಮತ್ತಿನಲ್ಲಿ ಅಪರಿಚಿತ ಯುವಕನೊಬ್ಬ ಸಂಚಾರಿ ಪೊಲೀಸ್ ಕ್ಯಾಪ್ ಕಸಿದುಕೊಂಡು ಇಲಾಖೆಯ ಕೋಬ್ರಾ ಬೈಕ್ ಓಡಿಸಿ ಹುಚ್ಚಾಟ ಪ್ರದರ್ಶಿಸಿರುವ ಘಟನೆ ಭಾನುವಾರ ಸಂಜೆ ನಡೆಸಿದೆ. 
ಸಂಜೆ 7 ಗಂಟೆ ಸುಮಾರಿಗೆ ನಗರದ ಬಿಎಂ ರಸ್ತೆಯ ಸಂತೆಪೇಟೆ ಬಳಿ ಪೊಲೀಸರು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತರೊಂದಿಗೆ ಬಂದ ಅಪರಿಚಿತ ಯುವಕ ಏಕಾಏಕಿ ಪೊಲೀಸರ ಬೈಕ್ ಮೇಲೆ ಇಟ್ಟಿದ್ದ ಕ್ಯಾಪ್ ಧರಿಸಿ ಕೋಬ್ರಾ ಬೈಕ್ ಏರಿ ಓಡಿಸಿಕೊಂಡು ಹೋಗಿದ್ದಾನೆ.
ಇದರಿಂದ ದಂಗಾದ ಪೊಲೀಸರು ಮತ್ತೊಂದು ಬೈಕಿನಲ್ಲಿ ಅರ್ಧ ಕಿ.ಮೀ ಹಿಂಬಾಲಿಸಿಕೊಂಡು ಹೋಗಿ ಆತನನ್ನು ಹಿಡಿದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆತನನ್ನು ವಿಚಾರಣೆ ನಡೆಸಿದಾಗ ಸೆಲ್ಫಿ ಹುಚ್ಚಿನಿಂದ ಕುಡಿದ ಅಮಲಿನಲ್ಲಿ ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.