ಟ್ರಾಫಿಕ್ ಪೊಲೀಸ್

1 ದಿನಕ್ಕೆ ನೀವೂ ಆಗಿ ಪೊಲೀಸ್! ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಹೊಸ ಅಭಿಯಾನ
ವಾಹನ ಚಲಾಯಿಸುವಾಗ ಸಿಗ್ನಲ್/ಟ್ರಾಫಿಕ್ ಕಂಡು ಗೊಣಗುವುದು ಸಾಮಾನ್ಯ! ಆದರೆ ಅದೇ ರಸ್ತೆಯಲ್ಲಿ ನಿಂತು ವಾಹನಗಳನ್ನು ನಿಯಂತ್ರಿಸುವ ಪೊಲೀಸರ ಸವಾಲುಗಳನ್ನು ಎಂದಾದರೂ ನೋಡಿದ್ದೀರಾ? ಆ ನೈಜ ಅನುಭವವನ್ನು ಕಲ್ಪಿಸಿಕೊಡಲು ನಮ್ಮ ಬೆಂಗಳೂರು ಪೊಲೀಸ್ ಇಲಾಖೆ ಅಪರೂಪದ ಅವಕಾಶವನ್ನು ನಿಮ್ಮ ಮುಂದಿಟ್ಟಿದೆ.

ಬೆಂಗಳೂರಿನಲ್ಲಿ ಮತ್ತೊಂದು ರಸ್ತೆ ಗಲಾಟೆ: ಬಾನೆಟ್ ಮೇಲೆ ವ್ಯಕ್ತಿಯ ಎಳೆದೊಯ್ದ ಕಾರು ಜಪ್ತಿ, ಚಾಲಕ ಬಂಧನ! Video
ಕಾರಿಗೆ ವಾಹನ ಟಚ್ ಆಯಿತು ಎಂಬ ಕಾರಣಕ್ಕೆ ಎಸ್‌ಯುವಿ ಚಾಲಕ ಬೇರೊಂದು ವಾಹನದ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲೆ ಎಳೆದೊಯ್ದಿದ್ದಾರೆ.

2024: ಮಾರಣಾಂತಿಕ ಅಪಘಾತಗಳ ಪ್ರಮಾಣ ಶೇ.1.26 ರಷ್ಟು ಕಡಿಮೆ- ಬೆಂಗಳೂರು ಟ್ರಾಫಿಕ್ ಪೊಲೀಸ್
2023ನೇ ವರ್ಷಕ್ಕೆ ಹೋಲಿಸಿದರೆ 2024ರಲ್ಲಿ ಉಂಟಾದ ಮಾರಣಾಂತಿಕ ಅಪಘಾತಗಳು ಮತ್ತು ಸಾವುನೋವುಗಳ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವ್ಹೀಲಿಂಗ್ ಮಾಡುವವರ ವಿರುದ್ಧ ರಾಜ್ಯದಾದ್ಯಂತ ಕಠಿಣ ಕ್ರಮ: ಅಲೋಕ್ ಕುಮಾರ್
ರಾಜ್ಯದಾದ್ಯಂತ ವ್ಹೀಲಿಂಗ್ ಪ್ರಕರಣಗಳ ಮೇಲೆ ಶೂನ್ಯ ಸಹಿಷ್ಣುತೆ ನೀತಿಯಡಿ ಪೊಲೀಸರು ಕಣ್ಣಿಡಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಸೋಮವಾರ ಹೇಳಿದ್ದಾರೆ.

ಅಪಾಯಕಾರಿ ವ್ಹೀಲಿಂಗ್ ಮಾಡುವ ಪುಂಡರ ಹೆಡೆಮುರಿ ಕಟ್ಟಿದ ಪೊಲೀಸರು: ಅಪ್ರಾಪ್ತ ಸೇರಿ ಮತ್ತೆ 6 ಮಂದಿ ಬಂಧನ
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವ್ಹೀಲಿಂಗ್ ಪ್ರಕರಣಗಳ ವಿರುದ್ಧ ಸಂಚಾರ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರು ಜನರನ್ನು ಮತ್ತೆ ಬಂಧಿಸಿದ್ದಾರೆ.

ಸಂಚಾರ ದಟ್ಟಣೆಯ ಜಂಕ್ಷನ್‌ಗಳ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮೆರಾಗಳ ಬಳಸಲು ಟ್ರಾಫಿಕ್ ಪೊಲೀಸರು ಮುಂದು!
ಬೆಂಗಳೂರಿನ ಸಂಚಾರ ದಟ್ಟಣೆ ಮೇಲೆ ಕಣ್ಣಿಡಲು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಸೋಮವಾರ ಹೆಬ್ಬಾಳ ಜಂಕ್ಷನ್‌ನಲ್ಲಿ ಡ್ರೋನ್ ಕ್ಯಾಮೆರಾ ಕಣ್ಗಾವಲು ಪ್ರಯೋಗವನ್ನು ನಡೆಸಿದರು.

ನವಿ ಮುಂಬೈ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಕಾರಿನ ಬಾನೆಟ್ ಮೇಲೆ 19 ಕಿಮೀ ಎಳೆದೊಯ್ದ ವ್ಯಕ್ತಿ, ಬಂಧನ
ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿಯೊಬ್ಬರು, ವಾಶಿ ಪಟ್ಟಣದಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೋಲೀಸರನ್ನು ತನ್ನ ಕಾರಿನ ಬಾನೆಟ್ ಮೇಲೆ ಸುಮಾರು 19 ಕಿಲೋಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಇಲ್ಲಿ ತಿಳಿಸಿದ್ದಾರೆ.

ಹಾರ್ನ್ ಮಾಡಿದರೂ ಜಗ್ಗುತ್ತಿಲ್ಲ: ಸಂಚಾರಕ್ಕೆ ಅಡ್ಡಿಪಡಿಸಿ ಬೆಂಗಳೂರಿನ ಟೆಕ್ಕಿಗಳನ್ನು ಕೆರಳಿಸುತ್ತಿರುವ ಎಮ್ಮೆಗಳು!
ನಗರದ ಕೆಲವೆಡೆ ಎಮ್ಮೆಗಳು ರಸ್ತೆಗೆ ಅಡ್ಡಿಪಡಿಸಿದ ಪರಿಣಾಮ ನಗರದ ಟೆಕ್ಕಿಗಳು ನಗರ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ಬಾರಿ ಎಮ್ಮೆಗಳ ಹಿಂಡು ರಸ್ತೆಗೆ ಬಂದು ಸಂಚಾರಕ್ಕೆ ಅಡ್ಡಿಪಡಿಸುವುದರಿಂದ ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ ಎಂದು ದೂರಿದರು.

ಸಿಗ್ನಲ್ ಜಂಪ್ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸರ ಕೊರಳ ಪಟ್ಟಿ ಹಿಡಿದು ರಾದ್ಧಾಂತ, ಮಹಿಳೆಯಿಂದ ಕಪಾಳ ಮೋಕ್ಷ
ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಉತ್ತರ ಪ್ರದೇಶ ಮೂಲದ ಅಪೂರ್ವಿ ಡಿಯಾಸ್ ಎಂಬ ಮಹಿಳೆ ಪೊಲೀಸರ ವಿರುದ್ಧ ರಾದ್ಧಾಂತ ಮಾಡಿ ಸಂಚಾರಿ ಎಎಸ್‌ಐ ಬಸವಯ್ಯ ಎಂಬುವವರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

