ಕರ್ನಾಟಕದಿಂದ ಕಾವೇರಿ ಮಲಿನ; ತಮಿಳುನಾಡಿನಿಂದ ಮತ್ತೆ ಕ್ಯಾತೆ
ಕಾವೇರಿ ನದಿ ನೀರು ವಿವಾದ ಕುರಿತಂತೆ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿರುವ ತಮಿಳುನಾಡು, ಮತ್ತೊಮ್ಮೆ ಕಾವೇರಿ ಕುರಿತಂತೆ ಕ್ಯಾತೆ ತೆಗೆದಿದ್ದು ಕರ್ನಾಟಕದವರು ಕಾವೇರಿಯನ್ನು ಮಲಿನಗೊಳಿಸುತ್ತಿದ್ದಾರೆಂದು ಸುಪ್ರೀಂಕೋರ್ಟ್ ನಲ್ಲಿ ದೂರು ನೀಡಿದ್ದಾರೆ...

Published On :
ನವದೆಹಲಿ: ಕಾವೇರಿ ನದಿ ನೀರು ವಿವಾದ ಕುರಿತಂತೆ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿರುವ ತಮಿಳುನಾಡು, ಮತ್ತೊಮ್ಮೆ ಕಾವೇರಿ ಕುರಿತಂತೆ ಕ್ಯಾತೆ ತೆಗೆದಿದ್ದು ಕರ್ನಾಟಕದವರು ಕಾವೇರಿಯನ್ನು ಮಲಿನಗೊಳಿಸುತ್ತಿದ್ದಾರೆಂದು ಸುಪ್ರೀಂಕೋರ್ಟ್ ನಲ್ಲಿ ದೂರು ನೀಡಿದ್ದಾರೆ.
ಕಾವೇರಿ ಕುರಿತಂತೆ ಕರ್ನಾಟಕ ರಾಜ್ಯಕ್ಕೆ ಕಳಂಕ ಹಚ್ಚುವ ಪ್ರಯತ್ನವನ್ನು ಮುಂದುವರೆಸಿರುವ ತಮಿಳುನಾಡು ರಾಜ್ಯ, ಕನ್ನಡಿಗರ ಜೀನವಾಡಿಯಾಗಿರುವ ಕಾವೇರಿ ನದಿಯನ್ನೇ ಕರ್ನಾಟಕ ಮಲಿನಗೊಳಿಸುತ್ತಿದೆ ಎಂದು ಆರೋಪ ಮಾಡಿದೆ.
ತಮಿಳುನಾಡು ಮಾಡಿರುವ ಈ ಆರೋಪವನ್ನು ಪರಿಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ ಈ ಬಗ್ಗೆ 6 ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಗೆ ಸೂಚನೆ ನೀಡಿದೆ. ಅಲ್ಲದೆ, ಉಭಯ ರಾಜ್ಯಗಳ ಪ್ರತಿನಿಧಿಗಳು ಈ ಬಗ್ಗೆ ಸಭೆ ನಡೆಸಲು ಸುಪ್ರೀಂ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ದಿನಗಳ ಹಿಂದಷ್ಟೇ ಕಾವೇರಿ ಕುರಿತಂತೆ ಕ್ಯಾತೆ ತೆಗೆದಿದ್ದ ತಮಿಳುನಾಡು, ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಈಗಲೂ ತಮಿಳುನಾಡು ರಾಜ್ಯಕ್ಕೆ 5.966 ಟಿಎಂಸಿ ನೀರು ಹರಿಸುವುದು ಬಾಕಿಯಿದ್ದು, ಕೂಡಲೇ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtತಮಿಳುನಾಡುಸುಪ್ರೀಂಕೋರ್ಟ್Tamil NaduKarnatakaಕರ್ನಾಟಕCauveryಕಾವೇರಿpollutionಮಾಲಿನ್ಯWater Disputeನದಿ ನೀರು ವಿವಾದ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


