ರಾಜ್ಯ

ನನಸಾಯ್ತು ಕನಸು: ಕೊನೆಗೂ ಆನೇಕಲ್, ಸೂರ್ಯನಗರಕ್ಕೆ ಕಾವೇರಿ ನೀರು ಒದಗಿಸಲು ಸಂಪುಟ ಒಪ್ಪಿಗೆ

ಆನೇಕಲ್, ಸೂರ್ಯನಗರದ ಜನತೆಯ ಬಹುದಿನದ ಕಾವೇರಿ ಕುಡಿಯುವ ನೀರಿನ ಕನಸು ಕೊನೆಗೂ ನನಸಾಗುವ ದಿನಗಳು ಹತ್ತಿರಬಂದಿದ್ದು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸರು ಸಚಿವ ಸಂಪುಟ ಬುಧವಾರ...

ನನಸಾಯ್ತು ಕನಸು: ಕೊನೆಗೂ ಆನೇಕಲ್, ಸೂರ್ಯನಗರಕ್ಕೆ ಕಾವೇರಿ ನೀರು ಒದಗಿಸಲು ಸಂಪುಟ ಒಪ್ಪಿಗೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ಆನೇಕಲ್, ಸೂರ್ಯನಗರದ ಜನತೆಯ ಬಹುದಿನದ ಕಾವೇರಿ ಕುಡಿಯುವ ನೀರಿನ ಕನಸು ಕೊನೆಗೂ ನನಸಾಗುವ ದಿನಗಳು ಹತ್ತಿರಬಂದಿದ್ದು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸಲು ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಸಂಬಂಧ ರೂ. 68.55 ಕೋಟಿ ಮೊತ್ತದ ಟೆಂಡರ್ ವೊಂದಕ್ಕೆ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ.

ಯೋಜನೆಗಾಗಿ ಈಗಾಗಲೇ ದಿನಕ್ಕೆ 30 ಮಿಲಿಯನ್ ಲೀಟರ್ ನಷ್ಟು ನೀರನ್ನು ಈಗಾಗಲೇ ಮೀಸಲಿರಿಸಲಾಗಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದ್ದಾರೆ.

ಇದರಂತೆಯೇ ಟೆಂಡರ್ ನಲ್ಲಿ ಮತ್ತಷ್ಟು ಯೋಜನೆಗಳೂ ಕೂಡ ಇದ್ದು, ಬಿಬಿಎಂಪಿ ವ್ಯಾಪ್ತಿಗೆ ಬರುವ 110 ಹಳ್ಳಿಗಳಿಗೂ ಕುಡಿಯುವ ನೀರು ಪೊರೈಕೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಇದಕ್ಕೆ 810 ಮಿಲಿಯನ್ ಲೀಟರ್ ನೀರಿನ ಅಗತ್ಯವಿದ್ದು, ಟಿ.ಕೆ.ಹಳ್ಳಿ ಜಲಾಶಯದ ನೀರನ್ನು ಮೀಸಲಿರಿಸಲಾಗಿದೆ. ಈ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ ಒಟ್ಟು 9.6 ಕಿ.ಮೀ. ಉದ್ದ ಗ್ರಾವಿಟಿ ಆಧರಿಸಿದ ಎಂ.ಎಸ್.ಕೊಳವೆ ಮಾರ್ಗ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ಸೂಚಿಸಲಾಗಿದ್ದು, ಇದಕ್ಕಾಗಿ ರೂ,167 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. 24 ತಿಂಗಳೊಳಗಾಗಿ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಇದಲ್ಲದೆ ರಾಜ್ಯದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ರು.6.50 ಕೋಟಿ ಹಣದಲ್ಲಿ ಪುಸ್ತಕಗಳನ್ನು ಖರೀದಿ ಮಾಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

(ಜನವರಿ 26) ಗಣರಾಜ್ಯೋತ್ಸವ ದಿನ ಹತ್ತಿರಬರುತ್ತಿದ್ದು, ಈ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಸನ್ನಡತೆ ಪ್ರದರ್ಶಿಸುತ್ತಿರುವ 188 ಅಪರಾಧಿಗಳನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಪಟ್ಟಿಗೆ ಈಗಾಗಲೇ ಸಂಪುಟ ಸಹಿ ಮಾಡಿದ್ದು, ಶೀಘ್ರದಲ್ಲಿ ರಾಜ್ಯಪಾಲರಿಗೆ ಪಟ್ಟಿ ಕಳುಹಿಸುವುದಾಗಿ ಜಯಚಂದ್ರ ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.