ರಾಜ್ಯ

ವರ್ಗಾವಣೆಗೆ ಬೇಸತ್ತು ಬಿಬಿಎಂಪಿ ಅಧಿಕಾರಿ ನೇಣಿಗೆ ಶರಣು

ಪದೇ ಪದೇ ವರ್ಗಾವಣೆಗೆ ಮಾಡಿದ್ದರಿಂದ ಬೇಸತ್ತ ಬಿಬಿಎಂಪಿ ಕಂದಾಯ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ...

ವರ್ಗಾವಣೆಗೆ ಬೇಸತ್ತು ಬಿಬಿಎಂಪಿ ಅಧಿಕಾರಿ ನೇಣಿಗೆ ಶರಣು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಪದೇ ಪದೇ ವರ್ಗಾವಣೆಗೆ ಮಾಡಿದ್ದರಿಂದ ಬೇಸತ್ತ ಬಿಬಿಎಂಪಿ ಕಂದಾಯ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಶ್ರೀನಗರದ ನಿವಾಸಿ ಹೆಚ್.ಸಿ ಶ್ರೀನಿವಾಸ್ (42) ಆತ್ಮಹತ್ಯೆಗೆ ಶರಣಾದ ಅಧಿಕಾರಿ. ಮಂಡ್ಯದ ನಾಗಮಂಗಲ ತಾಲೂಕಿನ ಶ್ರೀನಿವಾಸ್ ಅವರು ಕಳೆದ 25 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ, ಇಬ್ಬರು ಹಣ್ಣು ಮಕ್ಕಳ ಜತೆ ಹಲವು ವರ್ಷಗಳಿಂದ ಶ್ರೀನಗರದಲ್ಲಿ ನೆಲೆಸಿದ್ದರು.

ಶ್ರೀನಿವಾಸ್ ಅವರ ಪತ್ನಿ ಗೀತಾ ಅವರು ತಮ್ಮ ಮಗಳನ್ನು ಶಾಲೆಯಿಂದ ಮನೆಗೆ ಕರೆತರಲು ಹೊರಗೆ ಹೋಗಿದ್ದರು. ಈ ವೇಳೆ ಶ್ರೀನಿವಾಸ್ ಅವರು ಮನೆಯ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕುಟುಂಬಸ್ಥರು ಹೇಳುವ ಪ್ರಕಾರ, ಕೆಲ ತಿಂಗಳ ಹಿಂದೆ ಲೋಕಾಯುಕ್ತರು ಮನೆ ಮೇಲೆ ದಾಳಿ ನಡೆಸಿದ್ದರು. ಜತೆಗೆ ಕಳೆದ ಒಂದು ತಿಂಗಳಿನಲ್ಲಿ ಮೂರು ಬಾರಿ ವರ್ಗಾವಣೆಯಾಗಿದ್ದರಿಂದ ಶ್ರೀನಿವಾಸ್ ಅವರು ನೊಂದಿದ್ದರು ಎಂದು ಹೇಳಿಕೊಂಡಿದ್ದಾರೆ.

ಜೆ.ಪಿ ನಗರದಲ್ಲಿ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿದ್ದ ಶ್ರೀನಿವಾಸ್ ಅವರನ್ನು ತಿಂಗಳ ಹಿಂದಷ್ಟೇ ರಾಜರಾಜೇಶ್ವರಿ ನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ರಾಜರಾಜೇಶ್ವರಿ ನಗರದಿಂದ ಕೆಂಪೇಗೌಡ ನಗರದ ಸುಂಕೇನಹಳ್ಳಿ ವಾರ್ಡ್ ನ ಬಿಬಿಎಂಪಿ ಕಚೇರಿಗೆ ವರ್ಗ ಮಾಡಿದ್ದರು. ಹದಿನೈದು ದಿನಗಳ ಹಿಂದೆ ಸುಂಕೇನಹಳ್ಳಿ ವಾರ್ಡ್ ನಿಂದ ಮತ್ತೆ ರಾಜರಾಜೇಶ್ವರಿ ನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ಹೀಗೆ ಪದೇ ಪದೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೊಳಗಾಗಿದ್ದ ಶ್ರೀನಿವಾಸ್ ಅವರು ಕುಟುಂಬಸ್ಥರ ಬಳಿ ಬೇಸರ ವ್ಯಕ್ತಪಡಿಸಿದ್ದರು ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.