ರಾಜ್ಯ

ಮೈಸೂರು: ಶಾಲೆಯಲ್ಲಿ ಕಳ್ಳತನದ ಆರೋಪ, ನೊಂದ ವಿದ್ಯಾರ್ಥಿ ಆತ್ಮಹತ್ಯೆ

ಸಹಪಾಠಿ ವಿದ್ಯಾರ್ಥಿಯಿಂದ 100 ರೂಪಾಯಿ ಕಳ್ಳತನ ಮಾಡಿದ ಎಂಬ ಆರೋಪಕ್ಕೆ ನೊಂದ 13 ವರ್ಷದ ಬಾಲಕನೊಬ್ಬ ಆತ್ಮಹ್ಯೆಗೆ ಶರಣಾಗಿರುವ ಘಟನೆ .,..

ಮೈಸೂರು: ಶಾಲೆಯಲ್ಲಿ ಕಳ್ಳತನದ ಆರೋಪ, ನೊಂದ ವಿದ್ಯಾರ್ಥಿ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ಪವನ್
Published On :

ಮೈಸೂರು: ಸಹಪಾಠಿ ವಿದ್ಯಾರ್ಥಿಯಿಂದ 100 ರೂಪಾಯಿ ಕಳ್ಳತನ ಮಾಡಿದ ಎಂಬ ಆರೋಪಕ್ಕೆ ನೊಂದ 13 ವರ್ಷದ ಬಾಲಕನೊಬ್ಬ ಆತ್ಮಹ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಪವನ್ ಆತ್ಮಹತ್ಯೆ ಶರಣಾದ ವಿದ್ಯಾರ್ಥಿ (13). ಈತ ಭೈರವೇಶ್ವರ ನಗರದ ಶಾಲೆಯೊಂದರ 7ನೇ ತರಗತಿಯಲ್ಲಿ ಓದುತ್ತಿದ್ದ. ನಿನ್ನೆ ತರಗತಿಯಲ್ಲಿ ಸೈನ್ಸ್ ಎಕ್ಸ್‌ಪೋಗೆ ವಿದ್ಯಾರ್ಥಿಯೊಬ್ಬ 100 ರೂಪಾಯಿ ಹಣ ತಂದಿದ್ದಾನೆ. ಈ ಹಣ ಶಾಲೆಯಲ್ಲಿ ಕಳವಾಗಿತ್ತು. ಸಂಜೆ ದೈಹಿಕ ಶಿಕ್ಷಕಿ ತರಗತಿಯಲ್ಲಿದ್ದ 17 ವಿದ್ಯಾರ್ಥಿಗಳ ಬ್ಯಾಗ್ ಚೆಕ್ ಮಾಡಿದರು. ಪವನ್ ಬ್ಯಾಗ್‌ನಲ್ಲಿ 80 ರೂಪಾಯಿ ಹಣ ಸಿಕ್ಕಿದೆ. ಆಗ ಪವನ್ ದುಡ್ಡು ನಾನು ಕದ್ದಿಲ್ಲ. ಯಾರೋ ನನ್ನ ಬ್ಯಾಗ್‌ಗೆ ಹಣ ಹಾಕಿದ್ದಾರೆ ಎಂದು ಹೇಳಿದ್ದಾನೆ. ಶಿಕ್ಷಕಿ ಪವನ್‌ಗೆ ಬುದ್ಧಿಮಾತು ಹೇಳಿ ಅವನಿಂದ 80 ರೂಪಾಯಿ ಹಣ ಪಡೆದು 20 ರೂಪಾಯಿ ಖರ್ಚು ಮಾಡಿಕೊಂಡಿದ್ದಾನೆ, ಪರವಾಗಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಶಾಲೆಯಿಂದ ಬೇಗ ಮನೆಗೆ ಬಂದ ಪವನ್‌ ಪಕ್ಕದ ಮನೆಯಲ್ಲಿದ್ದ ತಾಯಿಯ ಬಳಿ ಮನೆಯ ಬೀಗ ತೆಗೆದುಕೊಂಡು ಹೋಗಿದ್ದಾನೆ. ರೂಮ್‌ಗೆ ತೆರಳಿದ ಪವನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ನಾನು ಆತನಿಗೆ 100 ರೂಪಾಯಿ ನೀಡಿದ್ದೆ. ಅದರಲ್ಲಿ 20 ರೂಪಾಯಿ ಬುಕ್-ಪೆನ್‌ ತೆಗೆದುಕೊಂಡಿದ್ದಾನೆ. ಉಳಿದ 80 ರೂಪಾಯಿ ಅವನ ಬಳಿ ಇತ್ತು. ಆದರೆ ಶಾಲೆಯಲ್ಲಿ ಸಹಪಾಠಿಯಿಂದ 100 ರೂಪಾಯಿ ಕದ್ದಿದ್ದಾನೆ ಎಂದು ಶಿಕ್ಷಕರು ಪವನ್‌ನ್ನು ಅವಮಾನ ಮಾಡಿದ್ದಾರೆ. ಇದರಿಂದ ನನ್ನ ಮಗ ನೇಣಿಗೆ ಶರಣಾಗಿದ್ದಾನೆ ಎಂದು ತಂದೆ ದೇವರಾಜು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.