'ಹುಡುಗರಿಗಿಂತ ನಾನೇನ್ ಕಮ್ಮಿ': 64 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಯುವತಿ
ಎಲ್ಲಾ ರೀತಿಯಲ್ಲಿಯೂ ಪುರುಷರಂತೆಯೇ ಮಹಿಳೆಯರಿಗೂ ಸಮಾನತೆ ಬೇಕೆಂದು ಆಗ್ರಹಿಸುವುದು, ಅವುಗಳನ್ನು ಸಹಜ. ಆದರೆ, ಇಲ್ಲೊಬ್ಬ ಯುವತಿ ಧನಾತ್ಮಕತೆಯಲ್ಲದೆಯೇ, ಋಣಾತ್ಮಕ ಚಿಂತನೆಗಳಲ್ಲೂ ಪುರುಷರನ್ನು ಪಾಲಿಸಲು ಹೋಗಿ ಸಂಕಷ್ಟಕ್ಕೆ ಸಿಲುವಂತಾಗಿದೆ...

ಮೈಸೂರು: ಎಲ್ಲಾ ರೀತಿಯಲ್ಲಿಯೂ ಪುರುಷರಂತೆಯೇ ಮಹಿಳೆಯರಿಗೂ ಸಮಾನತೆ ಬೇಕೆಂದು ಆಗ್ರಹಿಸುವುದು, ಅವುಗಳನ್ನು ಸಹಜ. ಆದರೆ, ಇಲ್ಲೊಬ್ಬ ಯುವತಿ ಧನಾತ್ಮಕತೆಯಲ್ಲದೆಯೇ, ಋಣಾತ್ಮಕ ಚಿಂತನೆಗಳಲ್ಲೂ ಪುರುಷರನ್ನು ಪಾಲಿಸಲು ಹೋಗಿ ಸಂಕಷ್ಟಕ್ಕೆ ಸಿಲುವಂತಾಗಿದೆ.
ಹುಡುಗರಿಂತ ನಾನು ಯಾವುದಕ್ಕೂ ಕಡಿಮೆಯಿಲ್ಲ ಎಂಬಂತೆ ಇಲ್ಲೊಬ್ಬ ಯುವತಿ ತಮಾಷೆಗಾಗಿ ಒಂದು, ಎರಡು ಬಾರಿಯಲ್ಲದೆ ಬರೋಬ್ಬರಿ 64 ಬಾರಿ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಇದೀಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾಳೆ.
ದಾಸಪ್ಪ ಸರ್ಕಲ್ ಬಳಿ ಹೊಂಡಾ ಆ್ಯಕ್ಟಿವಾದಲ್ಲಿ ನಾಲ್ವರು ಯುವತಿಯರು ಸಂಚಾರಿ ನಿಯಮಗಳನ್ನು ಗಾಳಿ ತೂರಿ ಹೋಗುತ್ತಿದ್ದ ವೇಳೆ ಸಂಚಾರಿ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಯುವತಿಯ ಈ ವರೆಗೂ ಉಲ್ಲಂಘಿಸಿದ್ದ ನಿಯಮಗಳು ಬೆಳಕಿಗೆ ಬಂದಿದೆ.
ಗಾಡಿಯ ನಂಬರ್ ಪ್ಲೇಟನ್ನೂ ತೆಗೆದು ಹಾಕಿರುವ ಯುವತಿ ಅದನ್ನು ಸೀಟ್ ಕೆಳಗೆ ಇಟ್ಟಿದ್ದಾಳೆ. ಯುವತಿ ಹಾಗೂ ಆಕೆಯ ಗೆಳತಿಯಲು ಮರಿಮಲ್ಲಪ್ಪ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ತಮಾಷೆಗಾಗಿ ಈ ರೀತಿ ಸಂಚಾರಿ ನಿಯಮವನ್ನು ಉಲ್ಲಂಘಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಂಚೆ ಕಚೇರಿ ಬಳಿ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಬಳಿಕ ಗಾಡಿಯ ನಂಬರ್ ಪ್ಲೇಟ್ ತೆಗೆದುಹಾಕಿದ್ದೆವು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಶಾರ್ಟ್ ಕಟ್ ರೂಟ್ ಗಳನ್ನು ಬಳಕೆ ಮಾಡುತ್ತಿದ್ದೆವೆಂದು ಯುವತಿಯರು ಬಾಯ್ಬಿಟ್ಟಿದ್ದಾರೆಂದು ತಿಳಿದುಬಂದಿದೆ.
ಒಂದೇ ಬೈಕ್ ನಲ್ಲಿ ನಾಲ್ವರು ಯುವತಿಯರು ಪ್ರತೀನಿತ್ಯ ಹೋಗುತ್ತಿದ್ದು, ಈ ವೇಳೆ ಹೆಲ್ಮೆಟ್ ಧರಿಸದೆ, ಸಿಗ್ನಲ್ ಗಳನ್ನು ಪಾಲನೆ ಮಾಡದೆ, ಅತೀವೇಗವಾಗಿ ಚಾಲನೆ ಮಾಡಿರುವುದು ಹೀಗೆ ನಾನಾ ರೀತಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಸಾರಿಗೆ ಇಲಾಖೆ ಇದೀಗ ಯುವತಿಗೆ ರೂ.10,000 ದಂಡವನ್ನು ವಿಧಿಸಿದೆ.
ನಾಲ್ವರು ಯುವತಿಯರು ಒಂದೇ ಬೈಕ್ ನಲ್ಲಿ ಚಾಲನೆ ಮಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ವಾಹನವನ್ನು ನೋಡಿದ್ದಾರೆ. ಈ ವೇಳೆ ಗಾಡಿಯ ನಂಬರ್ ಕಾಣಿಸಿರಲಿಲ್ಲ. ನಂತರ ಮುಂದಿನ ಸಿಗ್ನಲ್ ದಾಸಪ್ಪ ಸರ್ಕಲ್ ನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ದಾಸಪ್ಪ ಸರ್ಕಲ್ ಬಳಿಯಿದ್ದ ಪೊಲೀಸರು ಗಾಡಿಯನ್ನು ತಡೆಹಿಡಿದಿದ್ದಾರೆ. ಈ ವೇಳೆ ಯುವತಿಯರು ಪೊಲೀಸರ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ, ಈ ಪ್ರಯತ್ನಗಳು ವಿಫಲವಾಗಿತ್ತು. ಪರಿಶೀಲನೆ ನಡೆಸಿದಾಗ ಯುವತಿ 64 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
KA 09 HH 3970 ವಾಹನದ ಸಂಖ್ಯೆಯಾಗಿದ್ದು, ಕೆ.ಆರ್. ಮೊಹಲ್ಲಾ ನಿವಾಸಿಯಾಗಿರುವ ಮಹಿಳೆಯೊಬ್ಬರಿಗೆ ಸೇರಿದ ವಾಹನವಾಗಿದೆ. ಯುವತಿರು ಸಿಕ್ಕಿ ಬಿದ್ದ ನಂತರ ದೇವರಾಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಂತರ ಪೋಷಕರಿಗೆ ಕರೆ ಮಾಡಿ ಎಂದು ಹೇಳಲಾಗಿತ್ತು. 1 ಗಂಟೆ ಆದರೂ ಯುವತಿಯರು ಪೋಷಕರಿಗೆ ಮಾಹಿತಿ ನೀಡಲಿಲ್ಲ. ನಂತರ ವಾಹನವನ್ನು ವಶಕ್ಕೆ ಪಡೆದು ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಲಾಯಿತು. ನಂತರ ಯುವತಿಯರ ಪೋಷಕರೊಂದಿಗೆ ಮಾತುಕತೆ ನಡೆಸಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಲಾಯಿತು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


