ರಾಜ್ಯ

ಹೊನ್ನಾವರ ಬಳಿ ಬಸ್ ಅಪಘಾತ: ಇಬ್ಬರು ಸಾವು, 10 ಮಂದಿಗೆ ಗಾಯ

ಹೊನ್ನಾವರ ತಾಲ್ಲೂಕಿನ ಯಲಗುಪ್ಪ ಗ್ರಾಮದ ಬಳಿ ಹೊನ್ನಾವರದಿಂದ ಬೆಂಗಳೂರಿಗೆ ತೆರಳುತ್ತಿದ್ದ ....

ಹೊನ್ನಾವರ ಬಳಿ ಬಸ್ ಅಪಘಾತ: ಇಬ್ಬರು ಸಾವು, 10 ಮಂದಿಗೆ ಗಾಯ
ಹೊನ್ನಾವರ ಬಳಿ ಮಗುಚಿಬಿದ್ದ ಬಸ್
Published On :
ಕಾರವಾರ: ಹೊನ್ನಾವರ ತಾಲ್ಲೂಕಿನ ಯಲಗುಪ್ಪ ಗ್ರಾಮದ ಬಳಿ ಹೊನ್ನಾವರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ಸು ಮಗುಚಿ ಬಿದ್ದು ಇಬ್ಬರು ಪ್ರಯಾಣಿಕರು ಮೃತಪಟ್ಟು ಇತರ 10 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಮೃತಪಟ್ಟವರನ್ನು 19 ವರ್ಷದ ಪ್ರೀತಂ ಮತ್ತು 20 ವರ್ಷದ ಸಂಗೀತ ಎಂದು ಗುರುತಿಸಲಾಗಿದ್ದು ಇವರು ಹುಬ್ಬಳ್ಳಿ ಮತ್ತು ಮೈಸೂರು ಮೂಲದವರಾಗಿದ್ದಾರೆ. 
ಗಾಯಗೊಂಡವರು ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಯವ್ಯ ಸಂಚಾರ ಸಾರಿಗೆ ಕಾರವಾರದಿಂದ ಚಿಕ್ಕಮಗಳೂರಿಗೆ ಸಾಗುತ್ತಿದ್ದು ಸುಮಾರು 35 ಮಂದಿ ಪ್ರಯಾಣಿಕರು ಬಸ್ಸಿನಲ್ಲಿದ್ದರು. ಎದುರುಗಡೆಯಿಂದ ಕಿರು ರಸ್ತೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಬಂದಾಗ ಬಸ್ ಚಾಲಕ ಬ್ರೇಕ್ ಹಾಕಿದರು. ಆಗ ಬಸ್ಸು ರಸ್ತೆಯ ಪಕ್ಕಕ್ಕೆ ಮಗುಚಿ ಬಿದ್ದಿತು. ಪೊಲೀಸರು ಕೇಸು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.