ಹೊನ್ನಾವರ

TNIE ವರದಿ ಫಲಶ್ರುತಿ: ಹೊಡಿಕೆ ಶಿರೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀರು ಹೊತ್ತು ತರುವ ಕೆಲಸ; ಉಪ ಲೋಕಾಯುಕ್ತರಿಂದ ಕೇಸು ದಾಖಲು
ಹೊಡಿಕೆ ಶಿರೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಬಾವಿಯಿಂದ ನೀರು ಸೇದಿ, ಅದನ್ನು ಶೌಚಾಲಯಗಳಿಗೆ ಕೊಂಡೊಯ್ಯುವಂತೆ ಹಾಗೂ ಕುಡಿಯಲು ನೀರು ತರುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೊನ್ನಾವರ-ಗೇರುಸೊಪ್ಪ ಬಳಿ ಕಾರು ಪಲ್ಟಿ: ಇಬ್ಬರು ಸಜೀವ ದಹನ; ಗುರುತು ಹಚ್ಚಲು ಪೊಲೀಸರ ಹರಸಾಹಸ
ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ಕಾರು ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿರುವಂತೆ ಕಂಡುಬಂದಿದೆ. ಕಾರಿನ ನಂಬರ್ ಪ್ಲೇಟ್ ಕೂಡಾ ಬೆಂಕಿಯಲ್ಲಿ ಸುಟ್ಟು ಕಾಣದಾಗಿದೆ.

ಹೊನ್ನಾವರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ದಂಪತಿ ದಾರುಣ ಸಾವು
ಮೃತರನ್ನು ಸಂತೋಷ್ ಗೌಡ ಮತ್ತು ಅವರ ಪತ್ನಿ ಸೀತಾ ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಮನೆಯ ಮುಂಭಾಗ ಬಿದ್ದಿದ್ದ 11 ಕೆವಿ ಲೈನ್ ವಿದ್ಯುತ್ ತಂತಿ ಸಂತೋಷ್ ಗೌಡನಿಗೆ ತಗುಲಿದೆ.

ಹೊನ್ನಾವರ: ಆತ್ಮರಕ್ಷಣೆಗಾಗಿ ಗೋಹತ್ಯೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಪೊಲೀಸರು!
ಟೊಂಕ ನಿವಾಸಿಯಾದ ಈತ ಮತ್ತು ಅವನ ಸಹಚರರು ಹೊನ್ನಾವರದ ಸಾಲ್ಕೋಡ್ ಗ್ರಾಮ ಪಂಚಾಯತ್‌ನ ಕೊಂಡುಕುಳಿ ಗ್ರಾಮದಲ್ಲಿ ಗರ್ಭಿಣಿ ಹಸುವನ್ನು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಗರ್ಭಿಣಿ ಹಸುವಿನ ತಲೆ ಕಡಿದ ಪ್ರಕರಣ: ಹಲ್ಲೆಗೆ ಯತ್ನಿಸಿದ ಆರೋಪಿ ಫೈಝಲ್ ಕಾಲಿಗೆ ಗುಂಡಿಕ್ಕಿ ಬಂಧನ
ಹೊನ್ನಾವರದ ಕಾಸರಕೋಡಿನಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿ ಫೈಝಲ್ ತಪ್ಪಿಸಿಕೊಳ್ಳಲು ಯತ್ನಿಸಿದ್ದನು.

ಹೊನ್ನಾವರ ಗರ್ಭಿಣಿ ಹಸು ಹತ್ಯೆ ಪ್ರಕರಣ: ತನಿಖೆ ತೀವ್ರ, ಮೂವರು ಆರೋಪಿಗಳ ಬಂಧನ
ಮೂವರು ಆರೋಪಿಗಳು ಸಾಲಕೋಡು, ಕೊಂಡಕುಳಿ, ಹೊಸಕುಳಿ, ಕವಲಕ್ಕಿ ಗ್ರಾಮಗಳಲ್ಲಿ ಜಾನುವಾರು ಕಳ್ಳತನ, ಕಳ್ಳಸಾಗಣೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.

ಹೊನ್ನಾವರ ಗರ್ಭಿಣಿ ಹಸು ಹತ್ಯೆ ಪ್ರಕರಣ: 6 ದಿನ ಕಳೆದರೂ ಆರೋಪಿಗಳ ಬಂಧನವಿಲ್ಲ!
ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಕೃತ್ಯ ಹಚ್ಚಹಸಿರಾಗಿರುವಾಗಲೇ, ಹೊನ್ನಾವರ ತಾಲೂಕಿನಲ್ಲಿ ಅಂತಹದೇ ಮತ್ತೊಂದು ವಿಕೃತಿ ನಡೆದಿತ್ತು.

ಹೊನ್ನಾವರ ಗೋಹತ್ಯೆ ಪ್ರಕರಣ ಬಳಿಕ ಎಚ್ಚೆತ್ತ ಸರ್ಕಾರ: ಜಾನುವಾರು ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದು, 6 ತಂಡಗಳ ರಚನೆ
ಪ್ರಕರಣ ಸಂಬಂಧ ಐದು ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಆದರೆ, ಇದುವರೆಗೂ ಯಾರನ್ನೂ ಬಂಧನಕ್ಕೊಳಪಡಿಸಿಲ್ಲ.

ಹೊನ್ನಾವರ ಬಳಿ KSRTC ಬಸ್-ಬೈಕ್ ಮುಖಾಮುಖಿ ಡಿಕ್ಕಿ; ಮೂವರು ಸಾವು
ಮೃತರನ್ನು ಭಟ್ಕಳ ತಾಲೂಕಿನ ರಾಘವೇಂದ್ರ ಸೋಮಯ್ಯ ಗೌಡ(34), ಗೌರೀಶ್ ನಾಯ್ಕ್(25) ಮತ್ತು ರಮೇಶ್ ನಾಯ್ಕ್ (22) ಎಂದು ಗುರುತಿಸಲಾಗಿದೆ.

