ರಾಜ್ಯ

ಇನ್ನು ಪ್ಲೇ ಹೋಮ್, ಡೇ ಕೇರ್ ಸೆಂಟರ್ ಗಳು ಶಿಕ್ಷಣ ಇಲಾಖೆಯ ಅಧೀನದಲ್ಲೇ

ಪ್ಲೇ ಹೋಮ್ ಹಾಗೂ ಡೇ ಕೇರ್ ಸೆಂಟರ್ ಗಳಲ್ಲಿನ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಪೂರ್ಣ ಪ್ರಾಥಮಿಕ ಶಾಲೆಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರುವುದಾಗಿ ತಿಳಿಸಿದೆ...

ಇನ್ನು ಪ್ಲೇ ಹೋಮ್, ಡೇ ಕೇರ್ ಸೆಂಟರ್ ಗಳು ಶಿಕ್ಷಣ ಇಲಾಖೆಯ ಅಧೀನದಲ್ಲೇ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಪ್ಲೇ ಹೋಮ್ ಹಾಗೂ ಡೇ ಕೇರ್ ಸೆಂಟರ್ ಗಳಲ್ಲಿನ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಪೂರ್ಣ ಪ್ರಾಥಮಿಕ ಶಾಲೆಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರುವುದಾಗಿ ತಿಳಿಸಿದೆ. 
ಪ್ಲೇ ಹೋಮ್ ಹಾಗೂ ಡೇ ಕೇರ್ ಸೆಂಟರ್ ಗಳಿಗೆ ಹೊಸ ನಿಯಮಾವಳಿಗಳನ್ನು ಇಲಾಖೆ ರೂಪಿಸುತ್ತಿದ್ದು, ನಿಯಮದ ಪ್ರಕಾರ ಹೊಸದಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸಣ್ಣಪುಟ್ಟ ಮನೆಗಳಲ್ಲಿ ಆರಂಭಿಸಲು ಅವಕಾಶವಿಲ್ಲ. 1 ಮಗುವಿಗೆ 1 ಚದರ ಅಡಿ ಜಾಗ ಮೀಸದಿದ್ರೆ ಮಾತ್ರ ಅನುಮತಿ ನೀಡಲು ಸೂಚಿಸಲಾಗಿದೆ. 
ಪ್ರಾಥಮಿಕ ಶಾಲೆ ಅಥವಾ ಪ್ರೌಢಶಾಲೆಗಳನ್ನು ಪ್ರತ್ಯೇಕವಾಗಿ ಪ್ರಾರಂಭಿಸಲು ಪಾಲಿಕೆಗಳ ವ್ಯಾಪ್ತಿಯಲ್ಲಿ 1,000 ಚದರಡಿ ಮತ್ತು ಇತರೆಡೆ 2 ಸಾವಿರ ಜಾರ ಇರಬೇಕು. 1-10ನೇ ತರಗತಿ ವರೆಗೂ ಶಾಲೆ ತೆರೆಯಬೇಕಿದ್ದರೆ, ಪಾಲಿಕೆಗಳ ವ್ಯಾಪ್ತಿಯಲ್ಲಿ 1,500 ಚದರಡಿ ಮತ್ತು ಇತರೆಡೆ 3 ಸಾವಿರ ಚದರಡಿ ಜಾಗ ಇರುವುದು ಕಡ್ಡಾಯವಾಗಿದೆ.
ಪೂರ್ವ ಪ್ರಾಥಮಿಕ ಶಾಲೆಯಿಂದ ಪದವಿ ಪೂರ್ವ ಶಾಲೆವರೆಗೂ ಒಂದೇ ಆವರಣದಲ್ಲಿ ಶಿಕ್ಷಣ ನೀಡುವುದಾದರೆ ಪಾಲಿಕೆಗಳ ವ್ಯಾಪ್ತಿಯಲ್ಲಿ 2 ಸಾವಿರ ಚದರಡಿ ಮತ್ತು ಇತರೆಡೆ 4 ಸಾವಿನ ಚದರಡಿ ಜಾಗವಿದ್ದರೆ ಶಿಕ್ಷಣ ಇಲಾಖೆ ಅನುಮತಿ ನೀಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಹೇಳಿದ್ದಾರೆ. 
ನಿಯಗಳು ಹೊಸದಾಗಿ ಶಾಲೆ ತೆರೆಯುವವರಿಗೆ ಅನ್ವಯವಾಗಲಿದ್ದು, ಈಗಾಗಲೇ ಇರುವ ಶಾಲೆಗಳ ಪರವಾನಗಿ ನವೀಕರಣ ಸಂದರ್ಭದಲ್ಲಿ ನಿಯಮ ಪಾಲನೆ ಕುರಿತಂತೆ ಪರಿಶೀಲನೆ ನಡೆಸಲಾಗುತ್ತದೆ. ನಿಯಮಗ ಪಾಲಿಸದ ಶಾಲಗಳನ್ನು ಸ್ಥಳಾಂತರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.