ರಾಜ್ಯ

ನಟ ಹುಚ್ಚ ವೆಂಕಟ್ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ ಕಿಡಿಗೇಡಿ; ವಿಡಿಯೋ ವೈರಲ್

ಖ್ಯಾತ ಸ್ಯಾಂಡಲ್ ವುಡ್ ನಟ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಟ ಹುಚ್ಚ ವೆಂಕಟ್ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ ಕಿಡಿಗೇಡಿ; ವಿಡಿಯೋ ವೈರಲ್
ವೆಂಕಟ್ ಮೇಲೆ ಕಿಡಿಗೇಡಿ ಹಲ್ಲೆ (ವಾಟ್ಸಪ್ ಚಿತ್ರ)
Published On :
ಬೆಂಗಳೂರು: ಖ್ಯಾತ ಸ್ಯಾಂಡಲ್ ವುಡ್ ನಟ ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಯಶವಂತಪುರದಲ್ಲಿ ಕಳೆದ ನವೆಂಬರ್ 29ರ ರಾತ್ರಿ  ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂಲಗಳ ಮಾಧ್ಯಮಗಳು ವರದಿ ಮಾಡಿರುವಂತೆ ಯಶವಂತಪುರದಲ್ಲಿ ನವೆಂಬರ್ 29ರ ರಾತ್ರಿ  ಊಟ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ನಟ ವೆಂಕಟ್ ರನ್ನು ತಡೆದು ರೇಗಿಸಿದ್ದಾನೆ. ಈ ವೇಳೆ ವೆಂಕಟ್ ತಾಳ್ಮೆಯಿಂದಲೇ ಕಿಡಿಕೇಡಿ ಯುವಕನಿಗೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಅಷ್ಟಕ್ಕೇ  ಸುಮ್ಮನಾಗದ ಕಿಡಿಗೇಡಿ ವೆಂಕಟ್ ರನ್ನು ಹತ್ತಿರಕ್ಕೆ ಬರಲು ಹೇಳಿದ್ದಾರೆ. ಅದಕ್ಕೆ ವೆಂಕಟ್ ಕೇಳದೇ ಇದ್ದಾಗ ಕೋಪಗೊಂಡ ಯುವಕ ವೆಂಕಟ್ ಬಳಿ ಹೋಗಿ ತನ್ನ ಕೈಯಲಿದ್ದ ಹೆಲ್ಮೆಟ್ ನಿಂದ ವೆಂಕಟ್ ತಲೆಗೆ ಹಲ್ಲೆ ಮಾಡಿದ್ದಾನೆ.
ಈ ವೇಳೆ ವೆಂಕಟ್ ತಾಳ್ಮೆಯಿಂದಲೇ ಅಲ್ಲಿಂದ ನುಣುಚಿಕೊಂಡಿದ್ದಾರೆ. ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಇನ್ನು ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಹುಚ್ಚಾ ವೆಂಕಟ್, "ಯಾವುದೋ ಒಂದು ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ  ಗಲಾಟೆ ಶುರುವಾಯ್ತು. ಅವರು ಕುಡಿದಿದ್ದರು. ಆ ಬಳಿಕ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ "ಗಲಾಟೆಗಳು ನನಗೆ ಮಾಮೂಲಿಯಾಗಿದೆ. ಕುಡಿದ ಹಿನ್ನಲೆಯಲ್ಲಿ ಆತ ನನ್ನ ಮೇಲೆ ಹಲ್ಲೆ  ಮಾಡಿದ್ದಾನೆ. ಹಲ್ಲೆ ಬಳಿಕ ಯುವಕ ಸಾರಿ ಕೂಡ ಕೇಳಿದ್ದಾನೆ. ಈ ವಿಚಾರವನ್ನು ದೊಡ್ಡದು ಮಾಡಬೇಡಿ. ಗಲಾಟೆ, ಹಲ್ಲೆಗಳು ನಮಗೆ ದೊಡ್ಡ ವಿಚಾರವಲ್ಲ. ಒಂದು ಸಮಾಜ ಅಂತ ಹೋದಾಗ ಇದೆಲ್ಲ ಮಾಮೂಲಿ, ಹಲ್ಲೆಗಳು  ನಡೆಯುತ್ತವೆ. ಅದನ್ನು ಎದುರಿಸಬೇಕು ಎಂದು ಹೇಳಿದರು.
ಇನ್ನು ಪೊಲೀಸ್ ರಕ್ಷಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೆಂಕಟ್, ತಾವು ಪೊಲೀಸ್ ರಕ್ಷಣೆ ಪಡೆದಿಲ್ಲ. ಸೆಕ್ಯುರಿಟಿ ಗಾರ್ಡ್ ಗಳಿಲ್ಲ. ಹೀಗೆ ಯಾರಿಲ್ಲದೇ ಒಬ್ಬನೇ ಒಡಾಡುತ್ತಿದ್ದೇನೆ. ಹೀಗಾಗಿ ಒಂದೊಂದು ಬಾರಿ ಹೀಗಾಗುತ್ತದೆ.  ಯುವಕ ನನ್ನ ಮೇಲೆ ಹಲ್ಲೆ ಮಾಡಿದ್ದಕ್ಕೆ ನಾನು ಕೂಡ ಹೊಡೆದಿದ್ದೇನೆ. ಹೀಗಾಗಿ ಈ ವಿಚಾರ ಇಲ್ಲೇ ಬಿಟ್ಬಿಡಿ ಎಂದು ಹುಚ್ಚಾ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ.
ಒಟ್ಟಾರೆ ಮಾಧ್ಯಮಗಳಲ್ಲಿ ಘರ್ಜಿಸುತ್ತಿದ್ದ ಹುಚ್ಚಾ ವೆಂಕಟ್ ಮೇಲೆ ಕಿಡಿಗೇಡಿಯೋರ್ವ ಹಲ್ಲೆ ಮಾಡಿರುವುದು ಇದೀಗ ವ್ಯಾಪಕ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.