ಯುವತಿಗೆ ಬಲವಂತವಾಗಿ ತಾಳಿ ಕಟ್ಟಿ ಅತ್ಯಾಚಾರ ಮಾಡಿದ ದುಷ್ಕರ್ಮಿ!
ಪತ್ನಿ ಮತ್ತು ಇಬ್ಬರು ಮಕ್ಕಳಿಂದ ದೂರಾಗಿದ್ದ ಓರ್ವ ವ್ಯಕ್ತಿ 22ರೆ ಹರೆಯದ ಯುವತಿಯೋರ್ವಳನ್ನು ಅಪಹರಿಸಿ ಆಕೆಗೆ ಬಲವಂತವಾಗಿ ತಾಳಿಕಟ್ಟಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಪತ್ನಿ ಮತ್ತು ಇಬ್ಬರು ಮಕ್ಕಳಿಂದ ದೂರಾಗಿದ್ದ ಓರ್ವ ವ್ಯಕ್ತಿ 22ರೆ ಹರೆಯದ ಯುವತಿಯೋರ್ವಳನ್ನು ಅಪಹರಿಸಿ ಆಕೆಗೆ ಬಲವಂತವಾಗಿ ತಾಳಿಕಟ್ಟಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಮಾಗಡಿರಸ್ತೆಯ ದಾಸರಹಳ್ಳಿಯಲ್ಲಿ ಇಸ್ತ್ರೀ ಅಂಗಡಿ ನಡೆಸುತ್ತಿದ್ದ ಸಂತೋಷ್ ಎಂಬಾತನೇ ಯುವತಿಯನ್ನು ಅಪಹರಿಸಿ ಅಕೆಗೆ ಬಲವಂತವಾಗಿ ತಾಳಿಕಟ್ಟಿ ಬಳಿಕ ಅಕೆಯ ಮೇಲೆ ಅತ್ಯಾಚಾರ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೂಲಗಳ ಪ್ರಕಾರ ಮಾಗಡಿರಸ್ತೆಯ ದಾಸರಹಳ್ಳಿಯ ನಿವಾಸಿಯಾಗಿದ್ದ ಸಂತೋಷ್ (34 ವರ್ಷ) ಎಂಬಾತ ತನ್ನ ಮನೆಯ ಪಕ್ಕದ ಬೀದಿಯ ಯುವತಿಯ ಹಿಂದೆ ಬಿದ್ದಿದ್ದನಂತೆ. ಅಲ್ಲದೆ ಆ ಯುವತಿಯನ್ನು ಮದುವೆ ಮಾಡಿಕೊಂಡುವಂತೆ ಯುವತಿಯ ಪೋಷಕರಿಗೆ ಬಲವಂತ ಮಾಡಿದ್ದನಂತೆ.
ಸಂತೋಷ್ ಗೆ ಮದುವೆಯಾಗಿ ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ಪತ್ನಿ ಮತ್ತು ಮಕ್ಕಳನ್ನು ತೊರೆದಿದ್ದು. ಇತ್ತೀಚೆಗೆ ಯುವತಿ ಪೋಷಕರನ್ನು ಭೇಟಿ ಮಾಡಿದ್ದ ಆತ ಆಕೆಯನ್ನು ಮದುವೆ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದನಂತೆ. ಇದಕ್ಕೆ ಪೋಷಕರು ನಿರಾಕರಿಸಿ ಆತನಿದೆ ಬುದ್ಧಿಮಾತು ಹೇಳಿ ಕಳುಹಿಸಿದ್ದರಂತೆ. ಯುವತಿ ಪೋಷಕರ ಮಾತಿನಿಂದ ಸಿಟ್ಟಿಗೆದ್ದಿದ್ದ ಸಂತೋಷ್ ಸಮಯಕ್ಕಾಗಿ ಕಾದು ಕುಳಿತಿದ್ದ.
ಯುವತಿಯನ್ನು ವಿವಾಹವಾಗುವ ಹಠ ಬಿಡದ ಆತ ಕಳೆದ ಆಗಸ್ಟ್ 24ರ ರಾತ್ರಿ 10ರ ವೇಳೆ ಎಂದಿನಂತೆ ತನ್ನ ಅಜ್ಜಿಯ ಮನೆಗೆ ಮಲಗಲು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಆಕೆಯನ್ನು ತನ್ನ ಮನೆಗೆ ಹೊತ್ತೊಯ್ದು ಬಲವಂತವಾಗಿ ಹಿತ್ತಾಳೆಯ ತಾಳಿ ಕಟ್ಟಿದ್ದಾನೆ. ಬಳಿಕ ಬಲವಂತವಾಗಿಯೇ ಅತ್ಯಾಚಾರ ಕೂಡ ಎಸಗಿದ್ದಾನೆ. ಇತ್ತ ಅಜ್ಜಿ ಮನೆಗೆ ಮಗಳು ಹೋಗಿಲ್ಲ..? ಎಲ್ಲಿಗೆ ಹೋದಳು..? ಅಂತಾ ಹುಡುಕಾಡಿದಾಗ ಮಾರನೇ ದಿನ ಮಧ್ಯಾಹ್ನದ ವೇಳೆಗೆ ಸಂತೋಷನ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದು ಬೆಳಕಿಗೆ ಬಂದಿದೆ.
ಕೂಡಲೇ ಪೊಲೀಸರಗೆ ಯುವತಿ ಪೋಷಕರು ಕರೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿದ ಮಾಗಡಿ ರಸ್ತೆ ಪೊಲೀಸರು ಆರೋಪಿ ಸಂತೋಷನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


