ರಾಜ್ಯ

ಮೂರನೇ ಮಹಡಿಯಿಂದ ಬಿದ್ದು ಜನ್ಮದಿನದಂದೇ 2 ವರ್ಷದ ಬಾಲಕ ಸಾವು

ವರ್ಷದ ಬಾಲಕನೊಬ್ಬ ಮೂರನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು, ಜನ್ಮದಿನದಂದೇ ಮೃತಪಟ್ಟಿರುವ ಧಾರುಣ ಘಟನೆ ಶುಕ್ರವಾರ ನಡೆದಿದೆ...

ಮೂರನೇ ಮಹಡಿಯಿಂದ ಬಿದ್ದು ಜನ್ಮದಿನದಂದೇ 2 ವರ್ಷದ ಬಾಲಕ ಸಾವು
ಮೃತಪಟ್ಟ ಬಾಲಕ ಮನೀಷ್
Published On :

ಬೆಂಗಳೂರು: 2 ವರ್ಷದ ಬಾಲಕನೊಬ್ಬ ಮೂರನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು, ಜನ್ಮದಿನದಂದೇ ಮೃತಪಟ್ಟಿರುವ ಧಾರುಣ ಘಟನೆ ಶುಕ್ರವಾರ ನಡೆದಿದೆ.

ರಾಜಾಜಿನಗರ ಇ ಬ್ಲಾಕ್ ನ ರಮೇಶ್ ಮತ್ತು ಸರಿತಾ ದಂಪತಿಯ ಪುತ್ರ ಮನೀಷ್ ಮೃತ ದುರ್ದೈವಿ ಬಾಲಕ. ರಮೇಶ್ ಕಾರು ಚಾಲಕರಾಗಿದ್ದು, ಪತ್ನಿ ಸರಿತಾ ಎಂ.ಎಸ್.ರಾಮಯ್ಯ ಆಸ್ಪತ್ರೆ ಉದ್ಯೋಗಿಯಾಗಿದ್ದಾರೆ.

ದಂಪತಿ ರಾಜಾಜಿನಗರ ಇ ಬ್ಲಾಕ್ ನಲ್ಲಿ ಬಾಡಿಗೆಗೆ ಮೂರನೇ ಮಹಡಿಯಲ್ಲಿ ನೆಲೆಸಿದ್ದರು. ದಂಪತಿ ವಿವಾಹವಾದ ಹಲವು ವರ್ಷಗಳ ಬಳಿಕ ಮನೀಷ್ ಜನಿಸಿದ್ದ. ಹೀಗಾಗಿ ಪುತ್ರನ 2ನೇ ವರ್ಷದ ಹುಟ್ಟುಹಬ್ಬವನ್ನು ದಂಪತಿ ಸ್ನೇಹಿತರು, ಸಂಬಂಧಿಕರ ಜತೆ ಸಂಭ್ರಮದಿಂದ ಆಚರಿಸಲು ಮುಂದಾಗಿದ್ದರು.

ಗುರುವಾರಕ್ಕೆ (ಏ.27) ಮನೀಷ್ ಗೆ ಎರಡು ವರ್ಷ ತುಂಬಿದ್ದು, ಹುಟ್ಟುಹಬ್ಬ್ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ 4.30ಕ್ಕೆ ಸಂಬಂಧಿಕರು, ಸ್ನೇಹಿತರು ಮತ್ತು ಆತ್ಮೀಯರು ಮನೀಷ್ ನ ಹುಟ್ಟುಹಬ್ಬದ ಸಂಭ್ರಮದ ತಯಾರಿಯಲ್ಲಿ ತೊಡಗಿದ್ದರು. ಹೊಸಬಟ್ಟೆ ಧರಿಸಿದ್ದ ಮನೀಷ್ ತನ್ನ ಸ್ನೇಹಿತರ ಜತೆ ಆಟವಾಡಿಕೊಂಡು ಮನೆಯಿಂದ ಹೊರಬಂದಿದ್ದ. ಆಟವಾಡುತ್ತಾ, ಮಹಡಿ ಮೇಲೆ ಹೋಗಿದ್ದ. ಇದನ್ನು ಪೋಷಕರು ಹಾಗೂ ಸಂಬಂಧಿಕರು ಗಮನಿಸಿಲ್ಲ. ಕಬ್ಬಿಣ ಕಂಬಿಯಿಂದ ನಿರ್ಮಿಸಿದ್ದ ತಡೆಗೋಡೆ ಮೇಲೆ ಮನೀಷ್ ಹತ್ತಿ ಆಯತಪ್ಪಿ ಕೆಳಗೆ ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.