ಕ್ಷಣಾರ್ಧದಲ್ಲಿಯೇ ನಮ್ಮ ಸ್ನೇಹಿತರು ಸಮುದ್ರದ ನೀರು ಪಾಲಾದರು: ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಮಾತು
ಬೀಚ್'ನಲ್ಲಿ ಬಂದ ದೊಡ್ಡ ಅಲೆಯೊಂದು ನೋಡ ನೋಡುತ್ತಿದ್ದಂತೆಯೇ ನನ್ನ ಸ್ನೇಹಿತರನ್ನು ಹೊತ್ತೊಯ್ದಿತ್ತು... ಕ್ಷಣಾರ್ಧದಲ್ಲಿ ಸ್ನೇಹಿತರೆಲ್ಲರೂ ಕಣ್ಮರೆಯಾಗಿ ಹೋದರು...

Published On :
ಬೆಳಗಾವಿ: ಬೀಚ್'ನಲ್ಲಿ ಬಂದ ದೊಡ್ಡ ಅಲೆಯೊಂದು ನೋಡ ನೋಡುತ್ತಿದ್ದಂತೆಯೇ ನನ್ನ ಸ್ನೇಹಿತರನ್ನು ಹೊತ್ತೊಯ್ದಿತ್ತು...ಕ್ಷಣಾರ್ಧದಲ್ಲಿ ಸ್ನೇಹಿತರೆಲ್ಲರೂ ಕಣ್ಮರೆಯಾಗಿ ಹೋದರು...ಇದು ಮಹಾರಾಷ್ಟ್ರದ ಮಾಲ್ವಾನಾ ಬೀಚ್ ನಲ್ಲಿ ಸಂಭವಿಸಿದ ದುರಂತವನ್ನು ಕಣ್ಣಾರೆ ನೋಡಿದ ವಿದ್ಯಾರ್ಥಿನಿ ಹೇಳಿದ ಮಾತು.
ಬೆಳಗಾವಿಯ ಮಾರಾಠಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಸಿಂಧುದುರ್ಗ ಜಿಲ್ಲೆಯ ಮಾಲ್ವಾನಾ ಬೀಚ್'ಗೆ ಹೋಗಿದ್ದರು. ಬೀಚ್ ನಲ್ಲಿ 11 ವಿದ್ಯಾರ್ಥಿಗಳು ಈಜಲು ಹೋಗಿದ್ದರು. ಈ ವೇಳೆ ರಭಸವಾಗಿ ಅಪ್ಪಳಿಸಿದ ಅಲೆ 8 ಮಂದಿಯನ್ನು ಬಲಿ ಪಡೆದುಕೊಂಡಿತ್ತು.
ಘಟನೆ ವೇಳೆ ಸ್ಥಳದಲ್ಲಿದ್ದ ವಿದ್ಯಾರ್ಥಿನಿ ಹಾಗೂ ಪ್ರತ್ಯದರ್ಶಿ ದುರಂತರವನ್ನು ವಿವರಿಸಿದ್ದಾಳೆ. ಕೈಗಾರಿಕಾ ಪ್ರವಾಸ ಕೈಗೊಂಡ ಮೊದಲ ದಿನದಿಂದಲೂ ಯೋಜಿಸಿದಂತೆಯೇ ಎಲ್ಲವೂ ನಡೆದುಕೊಂಡು ಬಂದಿತ್ತು. ದುರಂತ ನಡೆದ ದಿನ ನಮ್ಮ ಪ್ರವಾಸದ ಕೊನೆಯ ದಿನವಾಗಿತ್ತು.
ಬೋಧಕವರ್ಗ ವಿಭಾಗದ ಇಬ್ಬರು ಸದಸ್ಯರು ಹಾಗೂ 47 ಮಂದಿವಿದ್ಯಾರ್ಥಿಗಳೆಲ್ಲರೂ ಬೀಚ್ ನ ಸೌಂದರ್ಯವನ್ನು ನೋಡಿ ಸಂತಸ ಪಡುತ್ತಿದ್ದೆವು. ಈ ವೇಳೆ 10 ವಿದ್ಯಾರ್ಥಿಗಳು ಬೀಚ್ ನಲ್ಲಿ ಇಳಿಯಲು ನಿರ್ಧರಿಸಿದ್ದರು. ಸ್ಥಳದಲ್ಲಿದ್ದ ಕೆಲ ಮೀನುಗಾರರು ಬೀಚ್ ನಲ್ಲಿ ಇಳಿಯದಂತೆ ಎಚ್ಚರಿಕೆ ನೀಡಿದ್ದರು. ಈ ವೇಳೆ ಆಳಕ್ಕೆ ಇಳಿಯುವುದಿಲ್ಲ ಎಂದು ಹೇಳಿ ಎಲ್ಲರೂ ಕೈ ಕೈಹಿಡಿದುಕೊಂಡು ಸಮುದ್ರದೊಳಗೆ ಇಳಿದರು.
ಬೀಚ್'ಗೆ ಇಳಿಯುವಾಗ ಅಂಜಲಿ ಛವನ್ ಸಹೋದರಿ ಪೂನಂ ಛವನ್ ಳನ್ನು ಕೇಳಿದರು. ಈ ವೇಳೆ ಆಕೆ ಹೋಗಲು ಒಪ್ಪಲಿಲ್ಲ. ನಂತರ ಎಲ್ಲರೂ ಬೀಚ್ ಒಳಗೆ ಇಳಿದರು. ಉಳಿದ ವಿದ್ಯಾರ್ಥಿಗಳೆಲ್ಲರೂ ಅವರು ಸಮುದ್ರಕ್ಕೆ ಇಳಿಯುತ್ತಿರುವುದನ್ನು ನೋಡುತ್ತಾ ನಂತಿದ್ದರು. ನೋಡ ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಬಂದ ದೊಡ್ಡ ಅಲೆಯೊಂದು ಎಲ್ಲರನ್ನೂ ಹೊತ್ತೊಯ್ದಿತ್ತು. ಕಣ್ಮುಂದೆ ಇದ್ದ ನನ್ನ ಸ್ನೇಹಿತರೆಲ್ಲರೂ ಕಣ್ಮರೆಯಾಗಿ ಹೋದರು. ಈ ವೇಳೆ ಎಲ್ಲರಿಗೂ ಆಘಾತವಾಗಿತ್ತು. ಕೂಡಲೇ ಪ್ರೊ.ಮಹೇಶ್ ಕುಡುಚ್ಕರ್ ಮತ್ತು ಇನ್ನು ಕೆಲ ವಿದ್ಯಾರ್ಥಿಗಳು ರಕ್ಷಣೆಗೆ ಮುಂದಾಗಿದ್ದರು. ಮುಳುಗುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ನಂತರ ಸ್ಥಳದಲ್ಲಿ ಮೀನುಗಾರರು ಬೋಟಿನ ಮೂಲಕ ರಕ್ಷಣೆಗೆ ಮುಂದಾಗಿದ್ದರು. ನಂತರ 6 ವಿದ್ಯಾರ್ಥಿಗಳ ದೇಹವನ್ನು ಹೊರಗೆ ತಂದಿದ್ದರು. ಉಳಿದ ವಿದ್ಯಾರ್ಥಿಗಳ ದೇಹಗಳನ್ನು ಹುಡುಕಲು ಸಮಯಬೇಕಾಯಿತು ಎಂದು ವಿದ್ಯಾರ್ಥಿನಿ ವೈಭವಿ (ಹೆಸರು ಬದಲಿಸಲಾಗಿದೆ) ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಜಿಲ್ಲಾ ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ನಂತರ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಸಂಬಂಧ ಬೆಳಗಾವಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗಾಯಗೊಂಡಿದ್ದ ಮೂವರ ಪೈಕಿ ಅಕಾಂಶಾ ಘಟ್ಗೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮಾಲ್ವಾನಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಂಧುದುರ್ಗ ಜಿಲ್ಲಾ ಆಡಳಿತ ಮಂಡಳಿ ಈಗಾಗಲೇ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ವಿದ್ಯಾರ್ಥಿಗಳ ಮೃತದೇಹಗಳನ್ನು ನಾಲ್ಕು ಆ್ಯಂಬುಲೆನ್ಸ್ ಗಳ ಮೂಲಕ ಬೆಳಗಾವಿಗೆ ರವಾನಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹಾರಾಷ್ಟ್ರMaharashtraBelagaviಬೆಳಗಾವಿದುರಂತtragedyMaratha Mandal Engineering CollegeMalavan beachಮಾರಾಠಾ ಎಂಜಿನಿಯರಿಂಗ್ ಕಾಲೇಜುಮಾಲ್ವಾನಾ ಬೀಚ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


