ಕುದಿಯುತ್ತಿರುವ ಭೂಮಿಗೆ ಬಿದ್ದು ಬಾಲಕನ ಸಾವು; ಮೈಸೂರಿನಲ್ಲಿ ವಿಚಿತ್ರ ಘಟನೆ!
ಕುದಿಯುತ್ತಿರುವ ಭೂಮಿಗೆ ಬಿದ್ದು 14 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ವಿಚಿತ್ರ ಘಟನೆ ಮೈಸೂರಿನ ಹೊರವಲಯದಲ್ಲಿ ನಡೆದಿದೆ.

ಮೈಸೂರು: ಕುದಿಯುತ್ತಿರುವ ಭೂಮಿಗೆ ಬಿದ್ದು 14 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ವಿಚಿತ್ರ ಘಟನೆ ಮೈಸೂರಿನ ಹೊರವಲಯದಲ್ಲಿ ನಡೆದಿದೆ.
ಮೈಸೂರಿನ ಹೊರವಲಯದ ಬೆಲವೆತ್ತ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ನಿನ್ನೆ ಬಹಿರ್ದೆಸೆಗೆ ತೆರಳಿದ್ದ 14 ವರ್ಷದ ಬಾಲಕ ಹರ್ಷಲ್ ತೀವ್ರ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೂಲಗಳ ಪ್ರಕಾರ ಮೈಸೂರು ಹೊರವಲಯದ ಬೆಲವೆತ್ತ ಗ್ರಾಮದ ಬಳಿ ಭೂಮಿ ಕುದಿಯುತ್ತಿದ್ದು, ಇದೇ ವೇಳೆ ನಿನ್ನೆ ಬಾಲಕ ಹರ್ಷೀಲ್ ತನ್ನ ಸ್ನೇಹಿತನೊಂದಿಗೆ ಬಹಿರ್ದೆಸೆಗೆ ತೆರಳಿದ್ದು, ಈ ವೇಳೆ ಆತ ಕಾಲಿಡುತ್ತಿದ್ದಂತೆಯೇ ಕಾಲು ಸುಟ್ಟುಹೋಗಿದೆ. ಬಾಲಕರು ಅಲ್ಲೇ ಬಿದ್ದಿದ್ದು, ಇದನ್ನು ಕಂಡ ಸ್ಥಳೀಯರು ಕೂಡಲೇ ನಗರದ ಕೆಆರ್ ಆಸ್ಪತ್ರೆಗೆ ನಿನ್ನೆ ದಾಖಲು ಮಾಡಿದ್ದಾರೆ.
ಈ ಪೈಕಿ ಹರ್ಷೀಲ್ ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕ ಶೇ.75ರಷ್ಚು ಸುಟ್ಟಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮೃತ ಬಾಲಕ ಕ್ಯಾದನಹಳ್ಳಿ ಮೂರ್ತಿ ಮತ್ತು ಜಾನಕಿ ಎಂಬುವವರ ಪುತ್ರನಾಗಿದ್ದು, ಈಗಷ್ಟೇ 9ನೇ ತರಗತಿ ತೇರ್ಗಡೆಯಾಗಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನು ಘಟನೆ ವರದಿಯಾದ ಜಮೀನಿನ ಸುತ್ತಮುತ್ತ ಕೈಗಾರಿಕಾ ಸಂಸ್ಥೆಗಳಿದ್ದು, ಇಲ್ಲಿನ ತ್ಯಾಜ್ಯವನ್ನು ಈ ಪ್ರದೇಶಕ್ಕೆ ತಂದು ಸುರಿಯಲಾಗುತ್ತಿದೆ. ಈ ರಾಸಾಯನಿಕ ತ್ಯಾಜ್ಯಗಳ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಭೂಮಿ ಕುದಿಯುತ್ತಿದ್ದು, ಈ ಹಿಂದೆ ಸಾಕಷ್ಚು ಪ್ರಾಣಿಗಳು ಇಲ್ಲಿ ಬಿದ್ದು ಸಾವನ್ನಪ್ಪಿದ್ದವು. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರೂ ದೂರಿದ್ದಾರೆ.
ಇನ್ನು ಸ್ಥಳೀಯರು ತಿಳಿಸಿರುವಂತೆ ಈ ಭೂಮಿಯ ಮೇಲೆ ನೀರು ಸುರಿದರೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಪ್ರಸ್ತುತ ಘಟನಾ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಿ ಸಾರ್ವಜನಿಕರ ವೀಕ್ಷಣೆಗೆ ವಿರ್ಬಂಧ ಹೇರಲಾಗಿದೆ. ಪ್ರಸ್ತುತ ಘಟನಾ ಸ್ಥಳಕ್ಕೆ ಆಗಮಿಸಿರುವ ಮೇಟಿಗಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


