ಪರಸ್ತ್ರೀಯರ ವ್ಯಾಮೋಹಕ್ಕೆ ಬಿದ್ದಿದ್ದ ಪತಿ: ಸುಪಾರಿ ಕೊಟ್ಟು ಮರ್ಡರ್ ಮಾಡಿಸಿದ ಪತ್ನಿ
ಗಂಡ ಸದಾ ಅನ್ಯ ಸ್ತ್ರೀಯರ ಜೊತೆ ಸಂಬಂಧವಿರಿಸಿಕೊಳ್ಳುತ್ತಿದ್ದ ಪತಿಯನ್ನು ಸಹಿಸದ ಪತ್ನಿಯೋರ್ವಳು ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ...

Published On :
ಬೆಂಗಳೂರು: ಗಂಡ ಸದಾ ಅನ್ಯ ಸ್ತ್ರೀಯರ ಜೊತೆ ಸಂಬಂಧವಿರಿಸಿಕೊಳ್ಳುತ್ತಿದ್ದುದನ್ನು ಸಹಿಸದ ಪತ್ನಿಯೋರ್ವಳು ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಏಪ್ರಿಲ್ 6ರಂದು ಪುಲಿಕೇಶಿನಗರದಲ್ಲಿ ಫೈನಾನ್ಷಿಯರ್ ಕುಮಾರ್ ಕೊಲೆ ಆಗಿತ್ತು. ಪುಲಿಕೇಶಿ ನಗರ ರೈಲ್ವೇ ಗೇಟ್ ಬಳಿ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕುಮಾರ್ ಕೊಲೆ ಮಾಡಲಾಗಿತ್ತು. ಕುಮಾರ್ ಪರಸ್ತ್ರೀಯರ ಮೋಹಕ್ಕೆ ಬಿದ್ದಿದ್ದರಿಂದ ಆಕ್ರೋಶಗೊಂಡು ಆತನ ಪತ್ನಿ ಡೋರಿನ್ ಕುಮಾರಿ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿದ್ದಳು. ಕೊಲೆ ಪ್ರಕರಣ ಬೇಧಿಸಿರುವ ಪುಲಿಕೇಶಿನಗರ ಪೊಲೀಸರು ಈಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕುಮಾರ್ ಸಾಲ ಕೊಟ್ಟು ಅವರು ಸಾಲ ತೀರಿಸಲಾಗದ ಮಹಿಳೆಯರನ್ನು ಮನೆಗೆ ಕರೆದು ಕೊಂಡು ಬಂದು ಅವರ ಜೊತೆ ಅನೈತಿಕ ಸಂಬಂಧವಿರಿಸಿಕೊಳ್ಳುತ್ತಿದ್ದ. ಇದಕ್ಕೆ ಪತ್ನಿ ಡೋರಿನ್ ವಿರೋಧ ವ್ಯಕ್ತ ಪಡಿಸಿದಾಗ ಆಕೆ ಮತ್ತು ಆಕೆಯ ಮಗಳಿಗೆ ದೈಹಿಕ ಹಿಂಸೆ ನೀಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೋರಿನ್ ತನ್ನ ಪರಿಚಿತ ಶ್ರೀಧರ್ ಎಂಬಾತನಿಗೆ ಕುಮಾರ್‌ನ ಹತ್ಯೆಗೆ ಬರೋಬರಿ 30 ಲಕ್ಷ ಹಣ ನೀಡಿದ್ದಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಸುಪಾರಿ ಪಡೆದಿದ್ದ ಶ್ರೀಧರ್, ಪ್ಯಾಟ್ರಿಕ್, ದಿನೇಶ್, ಮತ್ತು ಅವಿನಾಶ್ ಎಂಬುವರಿಂದ ಕುಮಾರ್‌ನ ಕೊಲೆ ಮಾಡಿಸಿದ್ದ. ತನಿಖೆ ನಡೆಸಿದ ಪೊಲೀಸರು ಡೋರಿನ್, ಪ್ಯಾಟ್ರಿಕ್, ದಿನೇಶ್ ನನ್ನು ಬಂಧಿಸಿದ್ದಾರೆ, ಮತ್ತೊಬ್ಬ ಆರೋಪಿ ಅವಿನಾಶ್ ತಲೆ ಮರೆಸಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


