ರಾಜ್ಯದ ಜನತೆಗೆ 'ಕರೆಂಟ್' ಶಾಕ್: ಪ್ರತಿ ಯೂನಿಟ್ ಮೇಲೆ 48 ಪೈಸೆ ಹೆಚ್ಚಳ
ರಾಜ್ಯದ ಎಸ್ಕಾಂಗಳ ಬೇಡಿಕೆಗೆ ಮಣಿದಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್ಸಿ) ವಿದ್ಯುತ್ ಪ್ರತಿ ಯೂನಿಟ್ ಮೇಲೆ 48 ಪೈಸೆ ಹೆಚ್ಚಳ...

Published On :
ಬೆಂಗಳೂರು: ರಾಜ್ಯದ ಎಸ್ಕಾಂಗಳ ಬೇಡಿಕೆಗೆ ಮಣಿದಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್ಸಿ) ವಿದ್ಯುತ್ ಪ್ರತಿ ಯೂನಿಟ್ ಮೇಲೆ 48 ಪೈಸೆ ಹೆಚ್ಚಳ ಮಾಡಿದೆ.
ಎಲ್ಲಾ ಎಸ್ಕಾಂಗಳು(ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಕಂಪನಿ) ಪ್ರತಿ ಯೂನಿಟ್ ಮೇಲೆ 1.40 ಪೈಸೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪ್ರಸ್ತಾವನೆಗೆ ಮಣಿದಿರುವ ಕೆಇಆರ್ಸಿ ಇದೀಗ ಪ್ರತಿ ಯೂನಿಟ್ ಮೇಲೆ 48 ಪೈಸೆ ಹೆಚ್ಚಳ ಮಾಡಿದೆ.
ಇನ್ನ ದರ ಹೆಚ್ಚಳ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅಧ್ಯಕ್ಷ ಎಂಕೆ ಶಂಕರಲಿಂಗೇಗೌಡ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳ ಮಾಡಿರುವುದನ್ನು ಸ್ಪಷ್ಟಪಡಿಸಿದ್ದು, ಈ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ ಎಂದರು.
ಕಳೆದ ಬಾರಿ ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್ ಗೆ 30 ಪೈಸೆ, 31ರಿಂದ 100 ಯೂನಿಟ್ ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್ ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


