ಸಾಲಬಾಧೆಗೆ ರೈತರ ಸರಣಿ ಆತ್ಮಹತ್ಯೆ: ಹೆದರಿ ಕೃಷಿ ವೃತ್ತಿಯನ್ನೇ ತ್ಯಜಿಸುತ್ತಿರುವ ರೈತ ಕುಟುಂಬಗಳು
ನೀರಿನ ಕೊರತೆ ಹಾಗೂ ಸಾಲಬಾಧೆಯಿಂದಾಗಿ ರಾಜ್ಯದಲ್ಲಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆಳವಣಿಗೆಗಳನ್ನು ನೋಡಿ ಹೆದರಿದ ಕೆಲ ಮಂಡ್ಯ ರೈತ ಕುಟುಂಬಗಳು...

ಮೈಸೂರು: ನೀರಿನ ಕೊರತೆ ಹಾಗೂ ಸಾಲಬಾಧೆಯಿಂದಾಗಿ ರಾಜ್ಯದಲ್ಲಿ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆಳವಣಿಗೆಗಳನ್ನು ನೋಡಿ ಹೆದರಿದ ಕೆಲ ಮಂಡ್ಯ ರೈತ ಕುಟುಂಬಗಳು ಇದೀಗ ಪಾರಂಪರಿಕವಾಗಿ ಬಂದಿದ್ದ ಕೃಷಿ ವೃತ್ತಿಯನ್ನೇ ತ್ಯಜಿಸಲು ಮುಂದಾಗುತ್ತಿವೆ.
ಕಳೆದ ವರ್ಷ ರಾಜ್ಯದಲ್ಲಿ 92 ಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳು ದಾಖಲಾಗಿದ್ದವು. ಇದೀಗ ರಾಜ್ಯಕ್ಕೆ ಕಾವೇರಿ ಬಿಸಿ ತಟ್ಟಿದ್ದು, ಎರಡು ರಾಜ್ಯಗಳ ಹಗ್ಗಜಗ್ಗಾಟಕ್ಕೆ ಇಂದು ರೈತರು ಬಲಿಯಾಗುತ್ತಿದ್ದಾರೆ. ಕಾವೇರಿ ನೀರು ಹಂಚಿಕೆ ಕುರಿತಂತೆ ತಮಿಳುನಾಡು ಖ್ಯಾತೆ ತೆಗೆದಿರುವುದು ಮೊದಲೇ ಗಾಯದ ನೋವಿನಲ್ಲಿ ಬಳಲುತ್ತಿರುವ ರೈತರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ವರ್ಷಗಳ ಹಿಂದೆ ಸಾಲಬಾಧೆಯಿಂದ ನರಳುತ್ತಿದ್ದ ಕುಟುಂಬಗಳು ಇದೀಗ ಸರ್ಕಾರದ ನೆರವಿನಿಂದ ಸಾಲವನ್ನು ತೀರಿಸಿಕೊಂಡು ಜೀವನವನ್ನು ಸುಧಾರಿಸಿಕೊಳ್ಳುತ್ತಿದೆ.
ಕಾವೇರಿ ನದಿ ನೀರು ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ನೀರಿನ ಕೊರತೆಯುಂಟಾಗುವ ಕಾರಣ ಕೆಲ ರೈತರು ಇದೀಗ ಕೃಷಿ ವೃತ್ತಿಯನ್ನು ಬಿಟ್ಟು ಇತರೆ ವೃತ್ತಿ ಕ್ಷೇತ್ರಗಳತ್ತ ಮುಖ ಮಾಡಲು ಮುಂದಾಗಿವೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿ 1.75 ಎಕರೆ ಭೂಮಿಯನ್ನು ಹೊಂದಿದ್ದ ಶ್ರೀರಾಜೇಂದ್ರ (60) ಎಂಬುವವರು ಸಾಲಬಾಧೆಯಿಂದಾಗಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಆ ಭೂಮಿ ಬಂಜರು ಭೂಮಿಯಾಗಿ ಮಾರ್ಪಾಡಾಗಿದ್ದು, ಪತಿ ಸಾವಿನ ನಂತರ ಹೆದರಿದ್ದ ಪತ್ನಿ ಸುನಂದ ಅವರು ಕೃಷಿ ವೃತ್ತಿಯನ್ನೇ ಕೈಬಿಟ್ಟಿದ್ದಾರೆ.
ನನ್ನ ಪತಿ ತರಕಾರಿಗಳನ್ನು ಬೆಳೆಯುತ್ತಿದ್ದರು. ಆದರೆ, ಬೆಳಗೆ ಸರಿಯಾದ ಬೆಂಬಲ ಬೆಲ ಸಿಗಲಿಲ್ಲ. ಕೃಷಿ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದೆವು. ಸಾಲಬಾಧೆಯಿಂದ ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡ ಕೃಷಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ಬೆಳೆ ಬೆಳೆಯಲು ಹೇಗೆ ತಾನೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನನ್ನ ಮಗನಿಗೆ ಸಹಾನುಭೂತಿ ಆಧಾರದ ಮೇಲೆ ಉದ್ಯೋಗವೇನೋ ನೀಡಲಾಗಿದೆ. ಆದರೆ, 3 ತಿಂಗಳಿನಿಂದ ವೇತನ ನೀಡಿಲ್ಲ. ಹೀಗಿರುವಾಗ ಕುಟುಂಬವನ್ನು ನಿಭಾಯಿಸುವುದಾದರೂ ಹೇಗೆ. ಇನ್ನು ಬ್ಯಾಂಕ್ ಗಳಲ್ಲಿ ಈ ಮೊದಲೇ ನನ್ನ ಪತಿ ಸಾಲವನ್ನು ಪಡೆದುಕೊಂಡಿದಿದ್ದರು. ಈ ಸಾಲವನ್ನು ತೀರಿಸಲು ಸಾಕಷ್ಟು ಕಷ್ಟ ಪಡುತ್ತಿದ್ದೇವೆ. ಇದೀಗ ಮತ್ತೆ ಸಾಲ ನೀಡಲು ಬ್ಯಾಂಕ್ ಗಳು ನಿರಾಕರಿಸುತ್ತಿವೆ. ಸಾಲ ತೀರಿಸುವವರೆಗೂ ನಿರಾಕ್ಷೇಪಣಾ ಪತ್ರವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿವೆ. ಬ್ಯಾಂಕುಗಳಿಗೆ ಈ ವರೆಗೂ ರು. 15,500 ಬಡ್ಡಿ ಹಣವನ್ನು ಕಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಗಳು ಸಾಲ ನೀಡುವ ವಿಶ್ವಾಸವಿಟ್ಟುಕೊಂಡಿದ್ದೇನೆಂದು ಸುನಂದಾ ಅವರು ಹೇಳಿದ್ದಾರೆ.
ಈರೇಗೌಡ ಎಂಬ ರೈತ ಕೂಡ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೃಷಿ ಕ್ಷೇತ್ರಕ್ಕೆ ನೀರನ್ನು ಹರಿಸಲಾಗುತ್ತದೆ ಎಂದು ಈ ಹಿಂದೆ ಸರ್ಕಾರ ಘೋಷಣೆ ಮಾಡಿತ್ತು. ಇದನ್ನು ನಂಬಿ ಈರೇಗೌಡ ಅವರು ಸಾಲ ಮಾಡಿ ಭತ್ತದ ಬೆಳೆ ಬೆಳೆಯಲು ಆರಂಭಿಸಿದ್ದರು. ಆದರೆ, ನಂತರ ಸರ್ಕಾರ ಇದ್ದಕ್ಕಿದ್ದಂತೆ ಕೃಷಿಗೆ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಯೂಟರ್ನ್ ಹೊಡೆದಿತ್ತು. ಸರ್ಕಾರದ ಈ ನಿರ್ಧಾರಕ್ಕೆ ನೊಂದ ಈರಪ್ಪ ಅವರು ಆತ್ಮಹತ್ಯೆಗೆ ಶರಣಾಗಿದ್ದರು.
ಕೆಲ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದ ಕಾರಣ ಕಳೆದ ವರ್ಷ ಸರ್ಕಾರ ಕೃಷಿಗೆ ನೀರನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗಿರಲಿಲ್ಲ. ಇದೀಗ ಕೃಷಿಗೆ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಸರ್ಕಾರ ಘೋಷಣೆ ಮಾಡಿದೆ ನಾವು ಹೇಗೆ ಜೀವನ ನಡೆಸಬೇಕು ಎಂದು ಈರೇಗೌಡ ಅವರ ಪುತ್ರ ನಿಂಗೇ ಗೌಡ ಅವರು ಹೇಳಿದ್ದಾರೆ.
ಸರ್ಕಾರದ ವತಿಯಿಂದ ಯಾವುದೇ ಸಹಾಯವಾಗಿಲ್ಲ. ನನ್ನ ತಾಯಿ ಬೋರಮ್ಮ ಅವರು ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದು, ದಿನಕ್ಕೆ ರು.80 ಹಣವನ್ನು ಸಂಪಾದಿಸುತ್ತಿದ್ದಾರೆ. ನನ್ನ ಪತ್ನಿ ಕೂಡ ಡೈರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ವರೆಗೂ ರು.2 ಲಕ್ಷ ಹಣ ಸಾಲವನ್ನು ತೀರಿಸಲಾಗಿದೆ. ಇನ್ನು ರು.2 ಲಕ್ಷ ಹಣವನ್ನು ತೀರಸಬೇಕಿದೆ. ಸಾಲ ತೀರಿಸಲು ತಿಂಗಳುಗಳ ಕಾಲ ಸಮಯವನ್ನು ನೀಡಲಾಗಿದೆ. ಒಂದು ವೇಳೆ ಸಾಲ ತೀರಿಸಲು ಸಾಧ್ಯವಾಗದಿದ್ದರೆ, ಗ್ರಾಮವನ್ನೇ ಬಿಡಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಇದೇ ರೀತಿ ಸಾಕಷ್ಟು ರೈತ ಕುಟುಂಬಗಳು ಇಂದು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ತನ್ನ ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂದು ಕೃಷಿ ವೃತ್ತಿಯೇ ಬೇಡವೆಂದು ಹೇಳಿ ಇತರೆ ವೃತ್ತಿಗಳತ್ತ ಮುಖ ಮಾಡತೊಡಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


